ಕೊಟ್ಟೂರು: ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ (Sri Guru Kottureswara Swamy) ಕಾರ್ತಿಕೋತ್ಸವವು (Kartikotsava) ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಗೆ ಸಂಜೆ 6 ಗಂಟೆ ಸುಮಾರಿಗೆ ಸ್ವಾಮಿಯ ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು, ಶಾಸಕ ಕೆ. ನೇಮರಾಜ ನಾಯ್ಕ, ಜಿ.ಪಂ. ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್ ಹಾಗೂ ಮುಖಂಡರು ದೀಪ ಹಚ್ಚುವ ಮೂಲಕ ವೈಭವದ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: U19 World Cup: ಅಂಡರ್ 19 ವಿಶ್ವಕಪ್ ತಂಡಗಳ ಆಟಗಾರರ ಪಟ್ಟಿ ಪ್ರಕಟಿಸಿದ ಐಸಿಸಿ
ಕಾರ್ತಿಕೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಭಕ್ತಾದಿಗಳು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ, ದೀಪ ಬೆಳಗಿ ಭಕ್ತಿ ಸಮರ್ಪಿಸಿದರು. ಹರಕೆ ರೂಪದಲ್ಲಿ ಭಕ್ತರು ಕೊಬ್ಬರಿ ಸುಟ್ಟರು.
ಕಾರ್ತಿಕೋತ್ಸವದ ಅಂಗವಾಗಿ ಬೆಳಗಿನಿಂದಲೇ ಸ್ಥಳೀಯ ಹಾಗೂ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದರು. ದೂರದ ಊರುಗಳಿಂದ ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಸ್ವಾಮಿಯ ತೊಟ್ಟಿಲುಮಠ, ಗಚ್ಚಿನಮಠಗಳಲ್ಲಿಯೂ ಭಕ್ತರು ಸ್ವಾಮಿಯ ದರ್ಶನ ಪಡೆದರು.
ಇದನ್ನೂ ಓದಿ: A Beginner’s Guide to Working Out: ವ್ಯಾಯಾಮಕ್ಕೆ ಹೊಸಬರೇ? ನಿಮಗೆಂಥದ್ದು ಬೇಕು?
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಎಸಿ ಗಂಗಾಧರಪ್ಪ, ದೇವಸ್ಥಾನ ಇಒ ಕೃಷ್ಣಪ್ಪ ಸೇರಿದಂತೆ ಮುಖಂಡರು, ದೇವಸ್ಥಾನದ ಸಿಬ್ಬಂದಿ, ಇತರರು ಉಪಸ್ಥಿತರಿದ್ದರು.