Site icon Vistara News

Vijayanagara News: ಶ್ರೀ ಜಂಬುನಾಥೇಶ್ವರ ಸ್ವಾಮಿ ಮಹಾರಥೋತ್ಸವಕ್ಕೆ ಪೂರ್ವಸಿದ್ಧತಾ ಸಭೆ

Sri Jambunatheshwara Swamy Maharathotsava Preparatory meeting

ಹೊಸಪೇಟೆ: ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ ಹಾಗೂ ಶ್ರೀ ಜಂಬುನಾಥೇಶ್ವರ ಸ್ವಾಮಿ ದೇವಸ್ಥಾನದಿಂದ ಏಪ್ರೀಲ್ 21ರಂದು ನಡೆಯಲಿರುವ ಜಂಬುನಾಥಹಳ್ಳಿಯ ಶ್ರೀ ಜಂಬುನಾಥೇಶ್ವರ ಸ್ವಾಮಿ ಮಹಾರಥೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯು ಡಿಸಿ ಎಂ.ಎಸ್. ದಿವಾಕರ್ ಅಧ್ಯಕ್ಷತೆಯಲ್ಲಿ (Vijayanagara News) ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವು ನಡೆಯುವ ಶ್ರೀ ಜಂಬುನಾಥೇಶ್ವರ ಸ್ವಾಮಿ ತೇರಿನ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Borewell Tragedy: ಕೊಳವೆಬಾವಿಗೆ ಬಿದ್ದ ಬಾಲಕ ಸಾವನ್ನು ಗೆದ್ದು ಬಂದ! ಹೀಗಿತ್ತು 20 ಗಂಟೆಗಳ ಕಾರ್ಯಾಚರಣೆ

ಕಲ್ಲಹಳ್ಳಿ, ರಾಜಾಪುರ, ವೆಂಕಟಗಿರಿ, ಜಂಬುನಾಥಹಳ್ಳಿ, ಸಂಕ್ಲಾಪುರ, ಹೊಸಪೇಟೆ, ಕಾಕುಬಾಳು, ಅಮರಾವತಿ, ಬಾದಾಮಿ, ರಾಣೆಬೆನ್ನೂರ, ಎರೆಬೂದಿಹಾಳ, ಕೊಟ್ಟೂರು, ಹೊಳಗುಂದಿ, ಅನಗವಾಡಿ, ಶ್ಯಾಮನೂರ ಸೇರಿದಂತೆ ಅನೇಕ ಕಡೆಗಳಿಂದ ಬರುವ ಭಕ್ತರಿಗೆ ವಸತಿ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು. ಕಡುಬಿನ ಕಾಳಗ ಮತ್ತು ಗಂಗೆಪೂಜೆ ಕಾರ್ಯಕ್ರಮಗಳಿಗೂ ಸಹ ಅಚ್ಚುಕಟ್ಟಾದ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

ಏ. 21ರಂದು ಬೆಳಗ್ಗೆ 8 ಗಂಟೆಯಿಂದ 9 ಗಂಟೆವರೆಗೆ ಶ್ರೀ ಜಂಬುನಾಥೇಶ್ವರ ಮಡಿ ತೇರನ್ನು ಎಳೆಯಲಾಗುತ್ತದೆ. ಸಂಜೆ 5.30 ರಿಂದ 6.30ರವರೆಗೆ ಮಹಾ ರಥೋತ್ಸವ ನಡೆಯಲಿದೆ. ಏ. 22ರಂದು ಕಡುಬಿನ ಕಾಳಗ ನಡೆಯಲಿದೆ. ಏ.28ರಂದು ಗಂಗಾಪೂಜೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ, ಸಭೆಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Pig kidney: ಮನುಷ್ಯನಿಗೆ ಹಂದಿಯ ಕಿಡ್ನಿ ಅಳವಡಿಕೆ ಸಕ್ಸೆಸ್! ರೋಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಸಭೆಯಲ್ಲಿ ಹೊಸಪೇಟೆ ತಹಸೀಲ್ದಾರರು, ಜಂಬುನಾಥೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರು ಮತ್ತು ಸಿಬ್ಬಂದಿ ಹಾಗೂ ಇತರರು ಇದ್ದರು.

Exit mobile version