ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಶ್ರೀ ಕೋಲಶಾಂತೇಶ್ವರ ಸ್ವಾಮಿಯ ರಥೋತ್ಸವವು ಅಪಾರ ಭಕ್ತರ ಮಧ್ಯೆ ವಿಜೃಂಭಣೆಯಿಂದ (Vijayanagara News) ಜರುಗಿತು. ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ರಥವನ್ನು ಎಳೆದು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಇಂದು ತುಸು ಏರಿಕೆ; 22K, 24K ಬಂಗಾರದ ಬೆಲೆಗಳನ್ನು ಇಲ್ಲಿ ಖಚಿತಪಡಿಸಿಕೊಳ್ಳಿ
ನಂದಿಕೋಲು ಹಾಗೂ ವಿವಿಧ ವಾದ್ಯಗಳು ರಥೋತ್ಸವಕ್ಕೆ ಮೆರುಗು ನೀಡಿದವು. ಭಕ್ತರು ಬಾಳೆಹಣ್ಣು ಎಸೆದು, ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ: Sachin Birthday: ಸಚಿನ್ ತೆಂಡೂಲ್ಕರ್ ಬಳಿ ಇರುವ ಅತ್ಯಂತ ದುಬಾರಿ ಆಸ್ತಿಗಳಿವು!
ರಥೋತ್ಸವದ ಸಂದರ್ಭದಲ್ಲಿ ಮಠದ ಶ್ರೀ ಶಾತಲಿಂಗ ದೇಶೀಕೇಂದ್ರ ಸ್ವಾಮೀಜಿ ಶಂಕರ ಸ್ವಾಮೀಜಿ, ಚಿನ್ಮಯಾನಂದ ಸ್ವಾಮೀಜಿ, ಸಂಸದ ವೈ. ದೇವೇಂದ್ರಪ್ಪ, ಮುಖಂಡರಾದ ವೈ ಡಿ.ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಇನಾಯತ್ ಉಲ್ಲಾ, ಬಿ.ರಾಮಣ್ಣ, ಅಡ್ಡಿ ಚನ್ನವೀರಪ್ಪ, ಎ.ಎಚ್.ಪಂಪಣ್ಣ, ಎಚ್. ನಾಗರಾಜಪ್ಪ, ಜಿ.ವಿ.ವೆಂಕಟೇಶ್ ಶೆಟ್ರು, ಎನ್. ಶಿವರುದ್ರಪ್ಪ, ಎನ್.ಎಂ. ವೃಷಬೇಂದ್ರಯ್ಯ, ಕೆ.ಎಂ. ವಿಶ್ವನಾಥಯ್ಯ, ಪೂಜಾರ್ ಮರಿಯಪ್ಪ, ನೆಲಗೊಂಡನಹಳ್ಳಿ ಭರತ್, ಐ. ಸಲಾಂ ಸಾಹೇಬ್, ಎಸ್.ಆನಂದಪ್ಪ ಹಾಗೂ ಇತರರು ಪಾಲ್ಗೊಂಡಿದ್ದರು.