Site icon Vistara News

Vijayanagara News: ಯಶಸ್ಸು ಏಕಾಗ್ರತೆಯಲ್ಲಿದೆ: ಡಾ. ಮೃತ್ಯುಂಜಯ ರುಮಾಲೆ

Vijayanagara News Success and achievements of high achievers should inspire todays youth says Dr Mruthyunjaya Rumale

ಕೊಟ್ಟೂರು: ಯಶಸ್ಸು (Success) ಏಕಾಗ್ರತೆಯಲ್ಲಿದೆ, ಉನ್ನತ ಸಾಧನೆ ಮಾಡಿದ ವ್ಯಕ್ತಿಗಳ ಯಶಸ್ಸು ಮತ್ತು ಸಾಧನೆಗಳು (Achievements) ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯಾಗಬೇಕು ಎಂದು (Vijayanagara News) ಹೊಸಪೇಟೆಯ ವಿಜಯನಗರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮೃತ್ಯುಂಜಯ ರುಮಾಲೆ ತಿಳಿಸಿದರು.

ಪಟ್ಟಣದ ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಸ್ಮರಣೆ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ “ನಿವೇದನೆ” ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳ ಬುದ್ಧಿ, ಮನಸ್ಸುಗಳು ಹಣ್ಣಾಗಬೇಕು, ಬೌದ್ಧಿಕ ಪಕ್ವತೆಯಿಂದ ಮಾತ್ರ ಸಾಧನೆ ಸಾಧ್ಯವಾಗುತ್ತದೆ ಎಂದ ಅವರು, ಕಲಿಕೆ, ಶ್ರದ್ಧೆ, ನಿರಂತರ ಅಧ್ಯಯನಶೀಲತೆ ವಿದ್ಯಾರ್ಥಿಗಳ ಇಂದಿನ ಗುಣವಾಗಿ ಇರಬೇಕಾಗಿದೆ ಎಂದು ಹೇಳಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿ, ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಮುರಳೀಧರ ಅವರ “ನಿವೇದನೆ” ಕವನ ಸಂಕಲನವನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಬಿಡುಗಡೆಗೊಳಿಸಿ, ಮಾತನಾಡಿದರು.

ಇದನ್ನೂ ಓದಿ: Rajya Sabha Election: ಕರ್ನಾಟಕದ 4 ಸೇರಿ ರಾಜ್ಯಸಭೆ 56 ಸ್ಥಾನಗಳಿಗೆ ಫೆ.27ಕ್ಕೆ ಚುನಾವಣೆ

ಕಾಲೇಜಿನ ಪ್ರಾಚಾರ್ಯ ಡಾ. ಎಂ. ರವಿಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕೊಟ್ಟೂರಿನ ಕಟ್ಟಿಮನಿ ಹಿರೇಮಠದ ಯೋಗಿರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಇದನ್ನೂ ಓದಿ: Money Guide : ಎಸ್‌ಬಿಐನಲ್ಲಿ 5 ಕೋಟಿ ರೂ. ತನಕ ಬಿಸಿನೆಸ್‌ ಸಾಲ ಪಡೆಯಿರಿ

ಈ ಸಂದರ್ಭದಲ್ಲಿ ನಿವೃತ್ತ ಅಧಿಕಾರಿ ಎ.ಎಚ್.ಎಂ. ಪ್ರಭಾಕರ, ವರ್ತಕ ವಿವೇಕಾನಂದ ಕನ್ನಾಕಟ್ಟಿ, ಕೆ.ಸಿದ್ದಲಿಂಗಪ್ಪ, ಎಂ.ಕರಿಬಸಜ್ಜ, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಕೆ.ಬಿ. ಮಲ್ಲಿಕಾರ್ಜುನ್, ಡಿ.ಎಸ್. ಶಿವಮೂರ್ತಿ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಚ್. ಪ್ರಶಾಂತ್ ಕುಮಾರ್, ಉಪನ್ಯಾಸಕರಾದ ಬಿ.ಎಸ್. ಪಾಟೀಲ್, ಟಿ.ರೇವಣ್ಣ, ಡಾ. ಕೆ.ಎಸ್. ಶಿವಪ್ರಕಾಶ್, ನಿಜಲಿಂಗ ಸ್ವಾಮಿ, ಅನಿಲ್ ಕುಮಾರ್, ಅನಿತಾ, ಶಿಲ್ಪ, ಬಸವರಾಜ ಬಣಕಾರ, ರಾಕೇಶ್, ಮಲ್ಲಿಕಾರ್ಜುನ ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಸಜ್ಜನ್ ನಿರೂಪಿಸಿದರು. ಕೆ. ಎಂ. ಪ್ರಭಾಕರ್ ಸ್ವಾಗತಿಸಿದರು.

Exit mobile version