Site icon Vistara News

Vijayanagara News: ನಾಗರಕಟ್ಟೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ

Sugama Sangeetha programme at Kottur

ಕೊಟ್ಟೂರು: ತಾಲೂಕಿನ ನಾಗರಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಹಾಗೂ ಶ್ರೀ ಸಿದ್ದರಾಮೇಶ್ವರ ಭೋವಿ ಯುವಕರ ಸಂಘದ ಸಹಯೋಗದಲ್ಲಿ ಬಿ.ನೀಲಪ್ಪ ತಂಡದ ವತಿಯಿಂದ ಸುಗಮ ಸಂಗೀತ (Sugama Sangeetha) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ನಾಗರಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುಭಾಷ್, ಕೀ ಬೋರ್ಡ್ ನುಡಿಸುವುದರ ಮೂಲಕ ಉದ್ಘಾಟಿಸಿದರು.

ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾ ತಲುಪಿದ ಯಂಗ್​ ಟೀಮ್​ ಇಂಡಿಯಾ; ಡಿ.10ರಿಂದ ಸರಣಿ ಆರಂಭ

ಬಳಿಕ ಮಾತನಾಡಿದ ಅವರು, ಸಂಗೀತ ಎನ್ನುವುದು ಮನಸ್ಸಿಗೆ ಮುದ ನೀಡುವ ದಿವ್ಯ ಔಷಧಿಯಂತಿದ್ದು, ಸಂಗೀತ ಆಲಿಸುವುದರ ಮೂಲಕ ಮಾನಸಿಕ ನೆಮ್ಮದಿ ಕಾಣಬಹುದಾಗಿದೆ ಹಾಗಾಗಿ ಸಂಗೀತ ಮತ್ತು ಕಲೆ ಉಳಿಯಬೇಕಾದರೆ ಇಂದಿನ ಮಕ್ಕಳು ಕೂಡ ಮೊಬೈಲ್ ಬಳಕೆಗೆ ಒಳಗಾಗದೆ ಸಂಗೀತದಲ್ಲಿ ಆಸಕ್ತಿ ತೋರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Viral Video: ಗರಿಗರಿ ಬಿಸಿಬಿಸಿ ದೊಡ್ಡ ಜಿಲೇಬಿ! ಇದು ಸೂರ್ಯಕಾಂತಿ ಜಿಲೇಬಿ!

ಕಾರ್ಯಕ್ರಮದಲ್ಲಿ ತೂಲಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುನಿಲ್, ಕಲಾವಿದ ಸಿದ್ದಲಿಂಗಪ್ಪ, ಮುಖ್ಯ ಶಿಕ್ಷಕ ಅಜಯ್ ಕುಮಾರ್, ಮುಖಂಡರಾದ ಸೋಮಶೇಖರ್, ರಾಜಣ್ಣ, ಚೌಡೇಶ್ ಹಾಗೂ ಶ್ರೀ ಗುರು ಪುಟ್ಟರಾಜ ಸಂಗೀತ ಪಾಠಶಾಲೆಯ ಸಂಗೀತ ಶಿಕ್ಷಕಿ ಕು.ಪ್ರಿಯಾಂಕ ಮತ್ತು ಗಾಯಕರಾದ ಶಿವಕುಮಾರ್, ಶಿವಕುಮಾರ್ ಟಿ., ವಸಂತ ಮೂರ್ತಿ ಮತ್ತು ಶಾಲೆಯ ಸಹ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version