ಕೊಟ್ಟೂರು: ತಾಲೂಕಿನ ಕೋಗಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಶ್ರೀ ನಂದೀಶ್ವರ ಕಲಾ ಸೇವಾ ಟ್ರಸ್ಟ್‌ನ ಸಹಯೋಗದಲ್ಲಿ ಸುಗಮ ಸಂಗೀತ (Sugama Sangeetha) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಗ್ರಾಮದ ಮುಖಂಡ ಎಸ್.ಎಂ. ಕೊಟ್ರಸ್ವಾಮಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರಿಗೆ ಸ್ಫೂರ್ತಿಯಾಗಿ ಕೆಲಸ ಮಾಡುತ್ತಿದೆ, ಕಲಾವಿದರು ಇದರ ಸದುಪಯೋಗ ಪಡೆದುಕೊಂಡು ಕಲೆಯನ್ನು ಬೆಳೆಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: New Trains: ದೇಶಾದ್ಯಂತ ಓಡಲಿವೆ 3 ಸಾವಿರ ಹೊಸ ರೈಲುಗಳು; ಕರ್ನಾಟಕಕ್ಕೆ ಎಷ್ಟು?
ಸುಗಮ ಸಂಗೀತ ಕಾರ್ಯಕ್ರಮವನ್ನು ಗಾಯಕ ಸಿ. ಅಭಿಷೇಕ ನಡೆಸಿಕೊಟ್ಟರು.
ಇದನ್ನೂ ಓದಿ: Bhagavad Gita Abhiyan: ಬೆಳಗಾವಿಯಲ್ಲಿ ನ.21ರಂದು ರಾಜ್ಯಮಟ್ಟದ ಭಗವದ್ಗೀತೆ ಅಭಿಯಾನ ಉದ್ಘಾಟನೆ
ಈ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಮಾಜಿ ನಿರ್ದೇಶಕ ಎನ್.ಸಿದ್ದಲಿಂಗನ ಗೌಡ್ರು, ಹೊಂಬಳಿ ಕೊಟ್ರೇಶಪ್ಪ, ನಂದೀಶ್ವರ ಕಲಾ ಸೇವಾ ಟ್ರಸ್ಟ್‌ನ ನಿಂಗಪ್ಪ, ಗಣೇಶ್, ಕೋಗಳಿ ಗ್ರಾ.ಪಂ. ಅಧ್ಯಕ್ಷೆ ಪೂಜಾರ ರೇಣುಕಮ್ಮ, ಜಿ.ಟಿ. ಶಶಿಧರ್, ಎಂ. ಮಹೇಶಪ್ಪ ಕೋಗಳಿ ಹಾಗೂ ಶಿವಪುತ್ರಪ್ಪ, ಜೆ.ಎಂ. ಬಸವರಾಜ, ಕೊಟ್ರೇಶ್, ಎಂ. ಕರಿಬಸಪ್ಪ, ಪ್ರಶಾಂತ ಗೌಡ, ಎಂ.ಚಂದ್ರಯ್ಯ, ಟಿ. ಶಿವರುದ್ರಪ್ಪ, ವಿಶ್ವನಾಥ್ ಗೌಡ, ಅಶೋಕಯ್ಯ, ಜಿ ಕೊಟ್ರೇಶಪ್ಪ, ಅಕ್ಕಿ ಸಿದ್ದಪ್ಪ, ಕಂಬಿ ಕೊಟ್ರಪ್ಪ, ಎಚ್.ಎಂ. ಚೆನ್ನವೀರಯ್ಯ, ಎಚ್. ವೀರಭದ್ರಪ್ಪ, ಶಾಂತಮ್ಮ, ಲಕ್ಷ್ಮಿ, ಎಚ್.ಎಂ. ಕೊಟ್ರಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು. ಅಕ್ಕಿ ವೀರಭದ್ರಪ್ಪ ನಿರೂಪಿಸಿದರು.