ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಗ್ರಾಮದ ಸರ್ಕಾರಿ ಉರ್ದು ಶಾಲೆಯಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದ ಜಯಂತಿ (Swami Vivekananda Jayanti) ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಶಿಕ್ಷಕ ಎಲ್. ರೆಡ್ಡಿ ನಾಯ್ಕ ಮಾತನಾಡಿ, ಸಶಕ್ತ, ಸದೃಢ ನವ ಭಾರತ ನಿರ್ಮಿಸಲು ಸಮಾಜದ ಯುವಕರಿಂದ ಮಾತ್ರ ಸಾಧ್ಯವಿದ್ದು, ಸದಾ ಅವರನ್ನು ಜಾಗೃತಗೊಳಿಸಿ, ಬಲಗೊಳಿಸಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: Atal Setu: ಅಟಲ್ ಸೇತು ಲೋಕಾರ್ಪಣೆ; ಇದು ದೇಶದ ಅತಿ ಉದ್ದದ ಸಮುದ್ರ ಸೇತುವೆ
ಶಿಕ್ಷಕ ರವಿಕುಮಾರ ಸಕ್ರಹಳ್ಳಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ 15ಕ್ಕೂ ಹೆಚ್ಚು ಮಕ್ಕಳು, ಸ್ವಾಮಿ ವಿವೇಕಾನಂದರ ವೇಷ-ಭೂಷಣ ಧರಿಸಿ ಗಮನ ಸೆಳೆದರು.
ಇದನ್ನೂ ಓದಿ: Bengaluru News: ಶೇಂಗಾ, ಸೋಯಾಬೀನ್ ಬೆಳೆಗಾರರಿಗೆ ಮಧ್ಯಂತರ ಬೆಳೆ ವಿಮೆ ಬಿಡುಗಡೆಗೆ ಕ್ರಮ: ಸಚಿವ ಪ್ರಹ್ಲಾದ್ ಜೋಶಿ
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಚಂದ್ರಶೇಖರ್ ಮಡ್ಡಿ, ಶೈನಾಜ್ ಬೇಗಂ, ಸಿಬ್ಬಂದಿಗಳಾದ ಅಸ್ಮತ್ ಬಿ, ಕೊಟ್ರಮ್ಮ, ಪಾಲಕರಾದ ತೋಟೇಶ, ಮಲ್ಲಮ್ಮ, ರೇಷ್ಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.