Site icon Vistara News

Vijayanagara News: ಹೊಸಪೇಟೆಯಲ್ಲಿ ಏ.2, 3ರಂದು ಊರಮ್ಮ ದೇವಿ ಜಾತ್ರಾ ಮಹೋತ್ಸವ

Uramma Devi Jatra Mahotsav on 2nd and 3rd April in Hosapete

ಹೊಸಪೇಟೆ: ಗ್ರಾಮ ದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಏ.2 ಮತ್ತು 3ರಂದು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಜೀರ್ಣೋದ್ಧಾರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಂಡೆ ಶ್ರೀನಿವಾಸ (Vijayanagara News) ತಿಳಿಸಿದರು.

ನಗರದ ಊರಮ್ಮ ದೇವಿ ದೇವಸ್ಥಾನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 34ನೇ ವಾರ್ಡಿನ ಶ್ರೀ ಗ್ರಾಮ ದೇವತೆ ಊರಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಮಾ.26 ರಿಂದ ಏ.3 ರವರೆಗೆ ಆಚರಿಸಲು ಗ್ರಾಮದ ಗುರು-ಹಿರಿಯರು ನಿಶ್ಚಿಯಿಸಿದ್ದಾರೆ. 9 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ಮಳೆ, ಬೆಳೆಯಿಲ್ಲದೇ ರೈತರು, ನಾಡಿನ ಜನರು ಸಂಕಷ್ಟ ಎದುರಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಸಮೃದ್ಧ ಮಳೆ, ಬೆಳೆ ಹಾಗೂ ಗ್ರಾಮದ ಸುಭೀಕ್ಷೆಗಾಗಿ ಏ.3 ರಂದು ಊರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಅಂದು ಭಕ್ತರು ದೇವಿಗೆ ಹೂ, ಹಣ್ಣು, ಕಾಯಿ, ಕಾಣಿಕೆ ಅರ್ಪಿಸಿ, ಪೂಜೆ ಸಲ್ಲಿಸಬಹುದಾಗಿದೆ. ಸಂಜೆ ಸಾಂಸ್ಕೃತಿಕ ಕಾಯಕ್ರಮಗಳು ನಡೆಯಲಿದ್ದು, ಗಿಚ್ಚಿಗಿಲಿಗಿಲಿ ಖ್ಯಾತಿಯ ಹಾಸ್ಯ ಕಲಾವಿದರು ಭಾಗವಹಿಸಲಿದ್ದಾರೆ. ಸ್ಥಳೀಯ ಕಲಾವಿದರಿಂದ ಭರತನಾಟ್ಯ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ಇಂದೂ ಇಳಿಕೆ; ರಾಜಧಾನಿಯಲ್ಲಿ ಹೀಗಿದೆ ದರ

ಏ.2 ರಂದು ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದ್ದು, 30 ಕಲಾ ತಂಡಗಳು ಭಾಗವಹಿಸಲಿದ್ದಾರೆ. ದೃಷ್ಟಿ ವಿಶೇಷಚೇತನ ಮಕ್ಕಳಿಂದ 7 ದಿನಗಳ ಕಾಲ ರಸ ಸಂಜೆ ಕಾರ್ಯಕ್ರಮ ಹಾಗೂ ಪ್ರತಿದಿನ ಸಂಜೆ ಭಜನೆ ನಡೆಯಲಿದೆ, ಪ್ರತಿ ಐದು ವರ್ಷಕೊಮ್ಮೆ ನಡೆಸಬೇಕಿದ್ದ ಜಾತ್ರಾ ಮಹೋತ್ಸವ ಕೊರೊನಾ ಹಿನ್ನಲೆಯಲ್ಲಿ ಸ್ಥಗಿತವಾಗಿತ್ತು. ಒಂಭತ್ತು ವರ್ಷದ ಬಳಿಕ ಇದೀಗ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಗ್ರಾಮದ ಸದ್ಭಕ್ತರು, ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮ-ಸಡಗರದಿಂದ ಆಚರಿಸಬೇಕು ಎಂದು ಮನವಿ ಮಾಡಿದರು.

ಜಾತ್ರಾ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲು ಗ್ರಾಮ ದೇವತೆ ಊರಮ್ಮ ದೇವಸ್ಥಾನ ಜೀರ್ಣೋದ್ಧಾರ ಅಭಿವೃದ್ಧಿ ಸಮಿತಿ ಮನವಿ ಮಾಡಿದೆ. ಪ್ರತಿ ಮನೆ ಅಂಗಳದಲ್ಲಿ ರಂಗೋಲಿ, ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ಆಚರಿಸುವ ಮೂಲಕ ಭಕ್ತರು ದೇವಿಯ ಕೃಪೆಗೆ ಪಾತ್ರರಾಬೇಕು ಎಂದು ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ: SSLC Exam 2024: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗೆ ಸಿಗದ ಹಾಲ್‌ ಟಿಕೆಟ್‌; ಡಿಸಿ ಕಚೇರಿ ಮುಂದೆ ಅಣಕು ಪರೀಕ್ಷೆ ಬರೆದು ಆಕ್ರೋಶ

ಈ ವೇಳೆ ಮುಖಂಡರಾದ ಎಸ್.ಗಾಳೆಪ್ಪ, ಆರ್.ಕೊಟ್ರೇಶ್, ಗೋಸಲ ಭರ‍್ಮಪ್ಪ, ಕಿಚಿಡಿ ಶ್ರೀನಿವಾಸ, ಎಚ್.ಎನ್. ಮೊಹ್ಮಮದ್ ಇಮಾಮ್ ನಿಯಾಜಿ, ಮರಡಿ ರಾಮಣ್ಣ, ಜೆ.ವಸಂತ, ಎಸ್.ಎಸ್,ಚಂದ್ರಶೇಖರ್, ಬಂದಿ ಪಂಪಾಪತಿ, ಕಟಗಿ ವಿಜಯಕುಮಾರ್, ಬಾಣದ ಸುದರ್ಶನ, ತಾರಿಹಳ್ಳಿ ವಾಸಪ್ಪ, ಎಚ್. ಹನುಮಂತಪ್ಪ, ಬಂದಿ ಜಂಬಣ್ಣ, ಬಡಗಿ ಮಂಜುನಾಥ, ರಾಘವೇಂದ್ರ ಗೌಡ, ಜಂಬುನಾಥ ಆಚಾರ್ಯ, ಕೆ.ದಿವಾಕರ್, ಗುಂಡಿ ಪ್ರಶಾಂತ್ ಇತರರಿದ್ದರು.

Exit mobile version