Site icon Vistara News

Vijayanagara News: ಲಿಂ. ಡಾ. ಸಂಗನಬಸವ ಸ್ವಾಮೀಜಿ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ನ.20ರಿಂದ

Various programs at Sri Jagadguru Kotturuswamy Samsthan Mutt from 20th to 23rd November

ಹೊಸಪೇಟೆ: ಜಗದ್ಗುರು ಲಿಂ. ಡಾ. ಸಂಗನಬಸವ ಸ್ವಾಮೀಜಿ ಅವರ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಅಂಗವಾಗಿ ಬಸವದರ್ಶನ ಪ್ರವಚನ (Basavadarshana pravachan) ಕಾರ್ಯಕ್ರಮ ಮತ್ತು ನ.20ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ ತಿಳಿಸಿದರು.

ಮಠದ ಅವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಮಣಕವಾಡದ ಶ್ರೀ ಅನ್ನದಾನೇಶ್ವರ ದೇವಮಂದಿರದ ಮೃತ್ಯುಂಜಯ ಸ್ವಾಮೀಜಿ ಬಸವದರ್ಶನ ಪ್ರವಚನ ನೀಡುವರು ಎಂದು ಹೇಳಿದರು.

ನ.20 ರಿಂದ 23 ರವರೆಗೆ ಮಠದ ಆವರಣದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ. ನ.20 ರಂದು ಸಂಜೆ 7 ಕ್ಕೆ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಮತ್ತು ರಾಜಮನೆತನಗಳು ವಿಚಾರಗೋಷ್ಠಿನಡೆಯಲಿದೆ. ನಂತರ ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಗುರು ಪರಂಪರೆ ಮತ್ತು ಹಂಡೆ ಅರಸು ಮನೆತನ ಗ್ರಂಥವನ್ನು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬಿಡುಗಡೆಗೊಳಿಸುವರು, ಕುದುರೆಮೋತಿ ಮೈಸೂರು ಮಠದ ನಿರಂಜನ ವಿಜಯ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸುವರು, ಸಂಸದ ಗದ್ದಿಗೌಡರ, ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Deepavali 2023: ಗಿನ್ನೆಸ್‌ ವಿಶ್ವದಾಖಲೆಗೆ ಮುಂದಾದ ಅಯೋಧ್ಯೆ; ದೀಪಾವಳಿಗೆ ಬೆಳಗಲಿವೆ 24 ಲಕ್ಷ ಹಣತೆ

ನ. 21ರಂದು ವಿಜಯನಗರ ಜಿಲ್ಲೆಯ ಸಂಪನ್ಮೂಲ ಹಾಗೂ ಅಭಿವೃದ್ಧಿ ಕುರಿತು ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯೂಟಿ ಕಮಿಷನರ್ ಯಶೋದ ಹೊಸೂರು ವಿಷಯ ಮಂಡಿಸುವರು, ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಜಗದ್ಗುರು ಡಾ. ಚೆನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸ್ವಾಮೀಜಿ, ಶಿರಹಟ್ಟಿ ಭಾವೈಕ್ಯ ಸಂಸ್ಥಾನ ಮಠದ ಫಕೀರ ಸಿದ್ದರಾಮಯ್ಯ ಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದು ಸಂತೆ ಕೆಲ್ಲೂರು ಶ್ರೀ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು, ಮಾಜಿ ಶಾಸಕರಾದ ಅಲ್ಲಂ ವೀರಭದ್ರಪ್ಪ ಟಿ.ಎಂ. ಚಂದ್ರಶೇಖರಯ್ಯ, ಕೆ.ಸಿ. ಕೊಂಡಯ್ಯ ಮತ್ತು ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವರು ಭಾಗಿಯಾಗುವರು.

ದಿ. 22ರಂದು ಬಸವ ದರ್ಶನ ಪ್ರವಚನ ಮಂಗಲ ಮಹೋತ್ಸವಕ್ಕೆ ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಅನ್ನದಾನಿಶ್ವರ ಶಿವಯೋಗಿಗಳು ಸಾನ್ನಿಧ್ಯ ವಹಿಸಲಿದ್ದು, ‘ವಿಜಯ ಕಲ್ಯಾಣ’ ಗ್ರಂಥವನ್ನು ಶೇಗುಣಸಿ ವಿರಕ್ತಮಠದ ಮಹಾಂತ ಸ್ವಾಮೀಜಿ ಬಿಡುಗಡೆಗೊಳಿಸುವರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಸಂಸದ ವೈ ದೇವೇಂದ್ರಪ್ಪ, ಶಾಸಕರಾದ ಕಳಕಪ್ಪ ಬಂಡಿ, ನೇಮರಾಜ್ ನಾಯ್ಕ್, ಕೃಷ್ಣ ನಾಯಕ್, ಬಸವರಾಜ್ ರಾಯರೆಡ್ಡಿ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನ.23 ರಂದು ಬೆಳಿಗ್ಗೆ 11 ಗಂಟೆಗೆ ನೂತನ ಶಿಲಾಮಠ, ಶ್ರೀ ಕಪ್ಪಿನಚೆನ್ಬಬಸವೇಶ್ವರ ಅತಿಥಿ ಗೃಹ, ಪ್ರೌಢದೇವರಾಯ ವಸತಿಯುತ ಪ್ರಸಾದ ನಿಲಯ ಉದ್ಘಾಟನಾ ಸಮಾರಂಭ ನಡೆಯಲಿದೆ, ಹಾನಗಲ್ಲ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜ ಯೋಗೀಂದ್ರ ಸ್ವಾಮೀಜಿ, ಗದಗ ಡಂಬಳದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕೊಟ್ಟೂರುಸ್ವಾಮಿ ಮಠದ ಶ್ರೀ ಕೊಟ್ಟೂರು ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ, ಸಚಿವ ಬಿ ನಾಗೇಂದ್ರ, ಗ್ರಂಥ ಬಿಡುಗಡೆಗೊಳಿಸುವರು ಈ ಸಂದರ್ಭದಲ್ಲಿ ಶಾಸಕರಾದ ಎಚ್.ಆರ್. ಗವಿಯಪ್ಪ, ಲತಾ ಮಲ್ಲಿಕಾರ್ಜುನ್, ಜೆ.ಎನ್. ಗಣೇಶ್, ಮಾಜಿ ಸಚಿವ ಆನಂದ್ ಸಿಂಗ್ ಭಾಗಿಯಾಗುವರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಇದನ್ನೂ ಓದಿ: ಉತ್ತರಾಖಂಡದಲ್ಲಿ ದೇಶದ ಮೊದಲ Uniform Civil Code ಮುಂದಿನ ವಾರ ಜಾರಿಗೆ ಸಿದ್ಧತೆ

ಈ ವೇಳೆ ಸಮಾಜದ ಮುಖಂಡರಾದ ಸಾಲಿ ಸಿದ್ದಯ್ಯಸ್ಬಾಮಿ, ಶರಣುಸ್ವಾಮಿ, ಕೋರಿಶೆಟ್ಟಿ ಲಿಂಗಪ್ಪ, ಗಂಗಾಧರಪ್ಪ, ರವಿಶಂಕರ್, ಕಾಶಿನಾಥಯ್ಯ ಹಾಗೂ ಇತರರು ಇದ್ದರು.

Exit mobile version