ಹೊಸಪೇಟೆ: ಆರ್ಥಿಕ ವರ್ಷ 2023-24 ನೇ ಸಾಲಿನಲ್ಲಿ ಹೊಸಪೇಟೆಯ ವಿಕಾಸ ಬ್ಯಾಂಕ್ (Vikas Bank) 22.83 ಕೋಟಿ ರೂ. ಲಾಭಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ (Vijayanagara News) ತಿಳಿಸಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ 2022-23ನೇ ಸಾಲಿನಲ್ಲಿ ನಿವ್ವಳ ಲಾಭವು 7.43 ಕೋಟಿ ರೂ ಇತ್ತು. 2023-24 ನೇ ಸಾಲಿನಲ್ಲಿ 9.20 ಕೋಟಿ ರೂ ಏರಿಕೆ ಆಗಿದೆ. ವರ್ಷಾಂತ್ಯಕ್ಕೆ 76 ಕೋಟಿ ರೂ. ಸ್ವಂತ ಬಂಡವಾಳ, ಠೇವಣಿ 811 ಕೋಟಿ ರೂ, 544 ಕೋಟಿ ರೂ. ಸಾಲ ಹಾಗೂ ಮುಂಗಡ ಹೊಂದುವ ಮೂಲಕ ಪ್ರಗತಿಯನ್ನು ಮುಂದುವರೆಸಿದೆ. ಒಟ್ಟು 1355 ಕೋಟಿ ರೂ. ವ್ಯವಹಾರವನ್ನು ಮಾಡಿದಂತಾಗಿದೆ ಎಂದರು. ಬ್ಯಾಂಕ್ ಆರ್ಥಿಕ ಮಾನದಂಡವಾದ ಅನುತ್ಪಾದಕ ಆಸ್ತಿ 4.17% ಆಗಿದ್ದು ನಿವ್ವಳ ಅನುತ್ಪಾದಕ ಆಸ್ತಿ 0.75% ಆಗಿದೆ ಎಂದರು.
ಇದನ್ನೂ ಓದಿ: SmartPhone: ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿಸುವ ಯೋಚನೆ ಇತ್ತಾ? ನಿಮಗೊಂದು ಶಾಕಿಂಗ್ ನ್ಯೂಸ್!
ಮತ್ತೆರಡು ಬ್ಯಾಂಕ್ ವಿಲೀನ
ಈಗಾಗಲೇ ಎರಡು ಬ್ಯಾಂಕ್‌ಗಳನ್ನು ವಿಲೀನ ಮಾಡಿಕೊಂಡು ಯಶಸ್ವಿಯಾಗಿ ನಡೆಸಿದ ಅನುಭವದ ಆಧಾರದ ಮೇಲೆ ಮತ್ತೆರಡು ಅಂದರೆ ಮಂಡ್ಯ ಹಾಗೂ ಆಳಂದ ಬ್ಯಾಂಕ್‌ಗಳ ವಿಲೀನದ ಪ್ರಸ್ತಾವನೆಗಳು ಆರ್‌ಬಿಐ ಮುಂದಿದ್ದು, ಪರಿಶೀಲಿಸಿ ನೀಡುವ ವರದಿಯ ಆಧಾರದ ಮೇಲೆ ವಿಲೀನಕ್ಕೆ ಮುಂದಾಗುವುದಾಗಿ ತಿಳಿಸಿದರು.
ಕಳೆದ ವರ್ಷ ಆರ್‌ಬಿಐನಿಂದ 10 ಶಾಖೆಗಳನ್ನು ತೆರೆಯಲು ಅನುಮತಿ ಸಿಕ್ಕಿದೆ. ಈಗಾಗಲೇ 6 ಶಾಖೆಗಳನ್ನು ತೆರೆಯಲಾಗಿದ್ದು, ಉಳಿದ 4 ಶಾಖೆಗಳು ಜೂನ್ ತಿಂಗಳೊಳಗಾಗಿ ಆರಂಭಿಸಲು ಸಿದ್ಧತೆ ಸಾಗಿದೆ ಎಂದರು.
ಸ್ವಂತ ಐಎಫ್‌ಎಸ್
ವಿಕಾಸ ಬ್ಯಾಂಕ್ ಸ್ವಂತ ಐಎಫ್ಎಸ್ ಕೋಡ್‌ನೊಂದಿಗೆ ಆರ್‌ಬಿಐ ಬ್ಯಾಂಕ್ ಅನುಮತಿಯೊಂದಿಗೆ ಏಪ್ರಿಲ್ 3ರಿಂದ ಗ್ರಾಹಕರಿಗೆ ಆರ್‌ಟಿಜಿಎಸ್ ಸೇವೆ ನೀಡಲು ಮುಂದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Lpg Saving Tips: ಈ ಸೂತ್ರ ಪಾಲಿಸಿ, ಅಡುಗೆ ಅನಿಲ ಉಳಿಸಿ! ತಿಂಗಳಿಗೆ ನೂರಾರು ರೂ. ಲಾಭ!
ಗೋಷ್ಠಿಯಲ್ಲಿ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷ ಬಿ.ಜೆ. ಕುಲಕರ್ಣಿ, ನಿರ್ದೇಶಕರಾದ ಚಂದಾಹುಸೇನ್, ಛಾಯಾ ದಿವಾಕರ, ರಮೇಶ ಪುರೋಹಿತ್, ಎಂ.ವೆಂಕಪ್ಪ, ಕೆ.ವಿಕಾಸ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ, ಮಾಜಿ ನಿರ್ದೇಶಕರಾದ ಕೆ.ಬಸವರಾಜ್, ಎಂ. ವಿಠೋಬಣ್ಣ, ಅನಂತ ಜೋಶಿ ಪಾಲ್ಗೊಂಡಿದ್ದರು.