Site icon Vistara News

Vijayanagara News: ಹೊಸಪೇಟೆಯಲ್ಲಿ ಸಹಸ್ರಕಂಠ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ

Vishnu Sahasranama Parayana at hosapete

ಹೊಸಪೇಟೆ: ನಗರದ ಶ್ರೀಕೃಷ್ಣಮಠದಲ್ಲಿ 1008ನೇ ವಾರದ ಸಹಸ್ರಕಂಠ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣದ (Vishnu Sahasranama Parayana) ವಿಶೇಷ ಕಾರ್ಯಕ್ರಮ ಭಾನುವಾರ (Vijayanagara News) ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಶೀರೂರು ಮಠದ ಜಗದ್ಗುರು ಶ್ರೀ ವೇದವರ್ಧನತೀರ್ಥ ಶ್ರೀಪಾದರು. ಭಾವೀ ಪರ್ಯಾಯ ಪೀಠದ ಪೂಜ್ಯರು ವಿಷ್ಣು ಸಹಸ್ರನಾಮದ ಪ್ರತಿ ಪದದ ಅರ್ಥ ಹಾಗೂ ಅದರ ಮಹತ್ವ ಪಾರಾಯಣದಿಂದಾಗುವ ಲಾಭಗಳ ಕುರಿತು ತಿಳಿಸಿ ನಿರಂತರವಾಗಿ ನಡೆಸುತ್ತಿರುವ ಸಂಸ್ಥೆಯ ಕಾರ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಆಶೀರ್ವದಿಸಿದರು.

ಬೆಂಗಳೂರಿನ ಪ್ರವಚನ ಪಂಡಿತ ವಿದ್ವಾನ್ ಎಲ್.ಎಸ್. ಬ್ರಹ್ಮಣ್ಯತೀರ್ಥಾಚಾರರು ಪ್ರವಚನ ನೀಡಿದರು.

ಇದನ್ನೂ ಓದಿ: Namma Metro : Good News; ಮೆಟ್ರೋ ಸಂಚಾರ ಶೀಘ್ರವೇ ನಾಗಸಂದ್ರದಿಂದ ಮಾದಾವರಕ್ಕೆ ವಿಸ್ತರಣೆ

ಸಂಸ್ಥೆಯ ಕಾರ್ಯದರ್ಶಿ ಯು.ರಾಘವೇಂದ್ರರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, 2004ರಲ್ಲಿ ಗಾಂಧಿವಾದಿ ಕೆ. ನಾರಾಯಣಭಟ್ಟ ಹಾಗೂ ರಘುಪತಿ ಬೈಲೂರು ಇವರ ನೇತೃತ್ವದಲ್ಲಿ ಪುರೋಹಿತ ವಿದ್ವಾನ್ ಕೇಶವಾಚಾರ್ಯರ ಮನೆಯಲ್ಲಿ ಪ್ರಾರಂಭವಾದ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮಕ್ಕೆ ಇಂದು 20 ವರ್ಷ ಸಂದಿದೆ. ಅಂದು ಕೆಲವೇ ಸದಸ್ಯರಿಂದ ಪ್ರಾರಂಭಗೊಂಡ ಈ ಸಂಸ್ಥೆ ಇಂದು ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಮೌನಕ್ರಾಂತಿಯಿಂದಾಗಿ ನಾಡಿನ ಉದ್ದಗಲಗಳಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ತಿಳಿಸಿದರು. ಶ್ರೀ ವಿಷ್ಣು ಸೇವಾ ಸಂಸ್ಥೆಯ ಅಧ್ಯಕ್ಷ ಯು.ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿ: Kyasanur Forest Disease: ಕರ್ನಾಟಕದಲ್ಲಿ ಕೆಎಫ್‌ಡಿಗೆ 6 ಬಲಿ! ಕಾಯಿಲೆ ಲಕ್ಷಣಗಳೇನು? ಪಾರಾಗುವುದು ಹೇಗೆ?

ಈ ಸಂದರ್ಭದಲ್ಲಿ ಸಂಸ್ಥೆಯ ಶ್ರೀಪತಿ ಆಚಾರ್ಯ, ಆರ್.ಪಿ.ಗುರುರಾಜ್, ವಾದಿರಾಜ್, ನರಸಿಂಹ ಆಚಾರ್ಯ, ರಾಮಮೂರ್ತಿ ಆಚಾರ್ಯ, ಅಶೋಕ ಜೀರೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version