ಹೊಸಪೇಟೆ: ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಗೃಹರಕ್ಷಕ ದಳದ ಶಿಬಿರಾರ್ಥಿಗಳಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು (Vijayanagara News) ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಗೃಹರಕ್ಷಕ ದಳ ಹಾಗೂ ಹೊಸಪೇಟೆ ತಾಲೂಕು ಸ್ವೀಪ್ ಸಮಿತಿ ಮತ್ತು ನಗರಸಭೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ. ಚಾಲನೆ ನೀಡಿ, ಬಳಿಕ ಮಾತನಾಡಿ, ಮತದಾನ ದಿನದಂದು ಎಂತದ್ದೇ ಕಾರ್ಯವಿದ್ದರೂ ಅದರ ಮಧ್ಯೆ ಬಿಡುವು ಮಾಡಿಕೊಂಡು ಮತಗಟ್ಟೆಗೆ ತೆರಳಿ ಮತದಾನ ಮಾಡುವುದನ್ನು ಯಾರೂ ಸಹ ಮರೆಯಬಾರದು ಎಂದರು.
ವಿಜಯನಗರ ಜಿಲ್ಲೆಯು ಮತದಾನದ ಶೇಕಡವಾರು ಪ್ರಮಾಣದಲ್ಲಿ ಉತ್ತಮ ಸ್ಥಾನ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಅರ್ಹವಿರುವ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Job Alert: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ; ವಿವಿಧ ಹುದ್ದೆಗಳಿಗೆ ಏ. 25ರೊಳಗೆ ಅರ್ಜಿ ಸಲ್ಲಿಸಿ
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲೀಂ ಪಾಷಾ ಮಾತನಾಡಿ, ನಾನು ಮತದಾನ ದಿನದಂದು ಕಡ್ಡಾಯ ಮತದಾನ ಮಾಡುತ್ತೇನೆ ಎನ್ನುವ ಸಂಕಲ್ಪ ಹೊಂದಿ, ಪ್ರತಿಯೊಬ್ಬರು ಮತದಾನ ಮಾಡುವುದನ್ನು ಮರೆಯಬಾರದು ಎಂದು ತಿಳಿಸಿದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರು ಹಾಗೂ ಮಾಜಿ ಸೈನಿಕ ಬಸವರಾಜ್ ಅಗಸರ, ಪ್ರತಿಜ್ಞಾವಿಧಿ ಬೋಧಿಸಿದರು.
ಇದನ್ನೂ ಓದಿ: Dipendra Singh Airee : ಒಂದು ಓವರ್ನ ಆರು ಎಸೆತಕ್ಕೆ 6 ಸಿಕ್ಸರ್ ಬಾರಿಸಿದ ನೇಪಾಳದ ಬ್ಯಾಟರ್; ಇಲ್ಲಿದೆ ವಿಡಿಯೊ
ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಜಿಲ್ಲಾ ಬೋಧಕ ಪ್ರಶಾಂತ್, ಹೊಸಪೇಟೆ ತಾಲೂಕು ಪಂಚಾಯಿತಿಯ ಐಇಸಿ ಸಂಯೋಜಕ ಎಚ್. ನಾಗರಾಜ್, ಘಟಕ ಅಧಿಕಾರಿ ಎಸ್.ಎಂ. ಗಿರೀಶ್, ಪ್ಲಾಟೂನ್ ಕಮಾಂಡರ್ ಎಲ್.ವಾಲ್ಯಾ ನಾಯ್ಕ ಹಾಗೂ ಗೃಹ ರಕ್ಷಕದಳದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.