ಹೊಸಪೇಟೆ: ಜಿಲ್ಲೆಯಲ್ಲಿ ಕುಡಿಯುವ ನೀರಿನ (Drinking Water) ಅಭಾವವಿರುವುದರಿಂದ ವಿವಿಧ ಕುಡಿಯುವ ಯೋಜನೆಗಳಿಗಾಗಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ (Tungabhadra River) ನೀರು ಹರಿಸುತ್ತಿದ್ದು, ಅನಧೀಕೃತ ಪಂಪಸೆಟ್‌ಗಳ ಮೂಲಕ ನೀರೆತ್ತುವುದನ್ನು ಸಂಪೂರ್ಣವಾಗಿ (Vijayanagara News) ನಿಷೇಧಿಸಲಾಗಿದೆ.
ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮಾರ್ಚ್ 29ರ ರಾತ್ರಿಯಿಂದಲೇ ಏಪ್ರಿಲ್ 6 ರವರೆಗೆ ಪ್ರತಿದಿನ 3000 ಕ್ಯೂಸೆಕ್ಸ್, ಏ. 6ರಂದು 2200 ಕ್ಯೂಸೆಕ್ಸ್ ಸೇರಿ ಒಟ್ಟು 2 ಟಿ.ಎಂ.ಸಿ ನೀರು ಹರಿಸಲು ಅನುಮತಿ ನೀಡಿ ಆದೇಶವಾಗಿದೆ.
ಇದನ್ನೂ ಓದಿ: Vijayanagara News: ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಶ್ಲಾಘನೀಯ ಕಾರ್ಯ: ಡಿಸಿ ದಿವಾಕರ್
ಸಾರ್ವಜನಿಕರಿಗೆ ಸೂಚನೆ
ಸಾರ್ವಜನಿಕ ದೂರುಗಳ ಹಿನ್ನಲೆಯಲ್ಲಿ ನದಿ ದಂಡೆಯಲ್ಲಿ ಅಳವಡಿಸಿರುವ ಅನಧೀಕೃತ ಪಂಪ್‌ಸೆಟ್‌ಗಳಿಂದ ನೀರೆತ್ತುವುದನ್ನು ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲೀ, ಜನರು ಮತ್ತು ದನಕರುಗಳನ್ನು ನದಿಗೆ ಇಳಿಸುವುದಾಗಲಿ ಹಾಗೂ ನಿರ್ಮಾಣ ಕಾಮಗಾರಿಗಳನ್ನು ನಡೆಸುತ್ತಿರುವುದು ಇತ್ಯಾದಿ ಚಟುವಟಿಕೆಗಾಗಿ ನದಿಗೆ ಇಳಿಯದಂತೆ ಸೂಚಿಸಲಾಗಿದೆ.
ಇದನ್ನೂ ಓದಿ: Job Alert: ಸಿಬಿಎಸ್‌ಇಯಲ್ಲಿದೆ ಉದ್ಯೋಗಾವಕಾಶ; ಏಪ್ರಿಲ್ 11ರೊಳಗೆ ಅರ್ಜಿ ಸಲ್ಲಿಸಿ
ಇದನ್ನರಿತು ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷ ಅಭಿಯಂತರರು ಹಾಗೂ ಭದ್ರ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.