Site icon Vistara News

Vijayanagara News: ಕೊಟ್ಟೂರಿನಲ್ಲಿ ವಿಶ್ವ ಪುಸ್ತಕ, ಕೃತಿ ಸ್ವಾಮ್ಯ ದಿನ ಆಚರಣೆ

World Book and Copyright Day celebration at Kottur

ಕೊಟ್ಟೂರು: ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆಯ ಅಂಗವಾಗಿ ಮಂಗಳವಾರ ಪುಸ್ತಕ ಪ್ರದರ್ಶನ (Vijayanagara News) ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾರತೀಯ ಗ್ರಂಥಾಲಯ ಪಿತಾಮಹ, ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಮತ್ತು ಶಾರದಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿ, ನಮಿಸಲಾಯಿತು.

ಇದನ್ನೂ ಓದಿ: Karnataka Weather : ಬಿರುಗಾಳಿ ಮಳೆಗೆ ಜನರು ತತ್ತರ; ಸಿಡಿಲಿಗೆ ಎತ್ತುಗಳು ಬಲಿ, ನೆಲಕಚ್ಚಿದ ಬೆಳೆಗಳು

ಶಾಖಾ ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರ್ ಮಾತನಾಡಿ, ವ್ಯಕ್ತಿತ್ವವನ್ನು ಬೆಳೆಸಲು ಪುಸ್ತಕಗಳ ಪಾತ್ರ ಮಹತ್ವದ್ದು, ವೈಜ್ಞಾನಿಕವಾಗಿ ಆಲೋಚಿಸಲು ಪುಸ್ತಕಗಳು ಸಹಾಯಕವಾಗುತ್ತವೆ, ಪುಸ್ತಕಗಳನ್ನು ಓದುತ್ತಾ ಇದ್ದರೆ ಏಕಾಗ್ರತೆ, ನೆಮ್ಮದಿ, ಸಮಾಧಾನ ಸಿಗುತ್ತದೆ ಎಂದರು.

ಪ್ರೌಢಶಾಲಾ ಶಿಕ್ಷಕ ಸಿದ್ದೇಶ್ ಗೌಡ ಮಾತನಾಡಿ, ಉತ್ತಮ ಜೀವನ ಮೌಲ್ಯಗಳನ್ನು ತಿಳಿಯಲು ಮತ್ತು ಸಾಧನೆ ಮಾಡಲು ಪುಸ್ತಕಗಳು ಸಹಾಯಕವಾಗುತ್ತವೆ ಎಂದು ಹೇಳಿದರು.

ಇದನ್ನೂ ಓದಿ: Job Alert: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮೇ 4ರೊಳಗೆ ಅಪ್ಲೈ ಮಾಡಿ

ಈ ಸಂದರ್ಭದಲ್ಲಿ ದುರುಗೇಶ್, ವೀರಭದ್ರಪ್ಪ, ಕೊಪ್ಪಳದ ಮಾಮನಿ ಈಶ್ವರಪ್ಪ, ಅಕ್ಕಮಹಾದೇವಿ, ಹನುಮಕ್ಕ, ಮಮತಾ ಎಚ್., ಗ್ರಂಥಾಲಯ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version