Site icon Vistara News

Vijayanagara News: ಹೊಸಪೇಟೆಯಲ್ಲಿ ವಿಶ್ವ ರೇಬೀಸ್ ದಿನ: ಜನಜಾಗೃತಿ ಜಾಥಾಗೆ ಚಾಲನೆ

World Rabies Day Public Awareness Jatha in Hospet

ಹೊಸಪೇಟೆ: ನಾಯಿ ಕಡಿತಕ್ಕೆ (Dog Bite) ಯಾರೂ ಸಹ ಭಯಭೀತರಾಗುವುದು ಅಥವಾ ನಿರ್ಲಕ್ಷ ಮಾಡಬಾರದು, ನಾಯಿ ಕಡಿತಕ್ಕೆ ಒಳಗಾದವರು ತಕ್ಷಣವೇ ಹತ್ತಿರ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ಚುಚ್ಚುಮದ್ದು ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರ್ ನಾಯ್ಕ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕದ ವತಿಯಿಂದ ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: Vijayanagara News: ಮಹಿಳೆಯ ಚಿನ್ನದ ಸರ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಷಣ್ಮುಕ ನಾಯ್ಕ ಮಾತನಾಡಿ ಈ ವರ್ಷದ ಘೋಷವಾಕ್ಯ ‘ಏಕೀಕೃತ ಆರೋಗ್ಯ ಅಳವಡಿಸಿಕೊಳ್ಳಿ ರೇಬಿಸ್ ತಡೆಗಟ್ಟಿ’ಎಂಬುದಾಗಿದ್ದು, ನಾಯಿ ಕಡಿತ ಅಥವಾ ಇತರೆ ಪ್ರಾಣಿ ಕಡಿತ ತಡೆಗಟ್ಟಲು ಚುಚ್ಚುಮದ್ದು ಅತ್ಯಾವಶ್ಯಕವಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುವ ಚುಚ್ಚುಮದ್ದು ಪಡೆದುಕೊಳ್ಳಬೇಕು. ಅದೇ ರೀತಿಯಾಗಿ ಇತರರಿಗೂ ರೇಬಿಸ್ ಚುಚ್ಚುಮದ್ದು ಕುರಿತು ಜಾಗೃತಿ ಮೂಡಿಸಬೇಕು. 2030ರ ಒಳಗೆ ನಾಯಿ ಕಡಿತದಿಂದ ಉಂಟಾಗುವ ಮರಣ ತಡೆಗಟ್ಟಲು ಕೈಜೋಡಿಸಬೇಕು ಎಂದು ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ ಆವರಣದಿಂದ ಪ್ರಮುಖ ರಸ್ತೆಗಳ ಮೂಲಕ ರೇಬಿಸ್ ತಡೆ ಕುರಿತು ಜಾಥಾ ಹಮ್ಮಿಕೊಂಡು ಜಾಗೃತಿ ಮೂಡಿಸಲಾಯಿತು.

ಇದನ್ನೂ ಓದಿ: Koppala News: ಗಂಗಾವತಿಯ ಆದಿಮಾನವರ ನೆಲೆ ಪ್ರದೇಶಕ್ಕೆ ಜಿ.ಪಂ ಸಿಇಒ ಭೇಟಿ, ಪರಿಶೀಲನೆ

ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಬಸವರಾಜ, ಆರೋಗ್ಯ ಇಲಾಖೆಯ ಡಾ.ಜಗದೀಶ್ ಪಾಟ್ನೆ, ಡಾ.ಭಾಸ್ಕರ್, ರಾಧಿಕಾ, ಎಂ.ಪಿ.ದೊಡ್ಡಮನಿ, ಎಂ.ಧರ್ಮನಗೌಡ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version