ಕೊಟ್ಟೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ (Community Health Centre) ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಶುಕ್ರವಾರ ಬೆಳಗ್ಗೆ ದಿಢೀರ್ ಭೇಟಿ (Visit) ನೀಡಿ, ಪರಿಶೀಲನೆ (Inspection) ನಡೆಸಿದರು.
ಆಸ್ಪತ್ರೆಯ ಆಡಳಿತ ಕಚೇರಿಗೆ ತೆರಳಿ ಸಿಬ್ಬಂದಿ ಹಾಜರಾತಿಯನ್ನು ಪರಿಶೀಲಿಸಿದ ಡಿಸಿ ಎಂ.ಎಸ್. ದಿವಾಕರ್, ಬಳಿಕ ಆಸ್ಪತ್ರೆಯ ಪ್ರಯೋಗಾಲಯ ಹಾಗೂ ವಾರ್ಡ್‌ಗಳು ಹಾಗೂ ಔಷಧಿ ಉಗ್ರಾಣ ಕೊಠಡಿಗೆ ಭೇಟಿ ನೀಡಿ ಔಷಧಿಗಳನ್ನು ಪರಿಶೀಲನೆ ನಡೆಸಿದರು.
ಯಾವುದೇ ಕಾರಣಕ್ಕೂ ಬರುವ ರೋಗಿಗಳಿಗೆ ಹೊರಗಡೆ ಔಷಧಿ ಬರೆಯಬಾರದು. ಒಂದು ವೇಳೆ ಬರೆದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Aditya L1 Mission: ಸೂರ್ಯನೆಡೆ ನಮ್ಮ ನಡೆ; ನಾಳೆ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ; ಇಲ್ಲಿ ವೀಕ್ಷಿಸಿ!
ಹಳೆಯ ಪಟ್ಟಣ ಪಂಚಾಯತಿಯ ಜಾಗದಲ್ಲಿ ಯಾತ್ರೆ ನಿವಾಸ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
ಆನಂತರ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಕೊಠಡಿಗೆ ಹಾಗೂ ಅಡುಗೆ ಕೊಠಡಿಯನ್ನು ಪರಿಶೀಲನೆ ನಡೆಸಿದರು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಕಡಿಮೆ ಆಹಾರ ನೀಡಬಾರದು ಒಂದು ವೇಳೆ ನೀಡಿದರೆ ಸೂಕ್ತ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಸಿಬ್ಬಂದಿಗಳಿಗೆ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕಿಗೆ ಅಗತ್ಯವಾಗಿ ಬೇಕಾಗಿರುವ ಕಚೇರಿಗಳು ಅತಿ ಶೀಘ್ರದಲ್ಲೇ ಆರಂಭಿಸಲಾಗುವುದು ಅದರಲ್ಲೂ ಹೆಚ್ಚಾಗಿ ಸಬ್ ರಿಜಿಸ್ಟರ್ ಕಚೇರಿ ತೆರೆಯಬೇಕೆಂದು ಕೊಟ್ಟೂರು ತಾಲೂಕಿನ ಸಾರ್ವಜನಿಕರ ಬಹು ಬೇಡಿಕೆಯಾಗಿದೆ, ಶೀಘ್ರದಲ್ಲೇ ಕಚೇರಿ ಪ್ರಾರಂಭವಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ ‘ನಾಲೆಡ್ಜ್-ಹೆಲ್ತ್- ಇನ್ನೋವೇಶನ್ ಆ್ಯಂಡ್ ರೀಸರ್ಚ್ ಸಿಟಿ: ಸಚಿವ ಎಂ.ಬಿ.ಪಾಟೀಲ್
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಅಮರೇಶ್ ಜಾಲಹಳ್ಳಿ, ಪ.ಪಂ. ಮುಖ್ಯಧಿಕಾರಿ ಎ. ನಸ್ರುಲ್ಲಾ, ಕಂದಾಯ ನಿರೀಕ್ಷಕ ಎಂ. ಹಾಲಸ್ವಾಮಿ, ಗ್ರಾಮ ಲೆಕ್ಕಧಿಕಾರಿ ಕೆ.ಕೊಟ್ರೇಶ್, ಎಚ್. ಹರೀಶ್, ಮತ್ತು ಇತರರು ಉಪಸ್ಥಿತರಿದ್ದರು.