ಹೊಸಪೇಟೆ: ನೂತನವಾಗಿ ಘೋಷಣೆಯಾದ ವಿಜಯನಗರ ಜಿಲ್ಲೆ (Vijayanagara District) ಹಿಂದುಳಿದಿದ್ದು, ಜಿಲ್ಲೆಗೆ ಮೆಡಿಕಲ್ ಕಾಲೇಜು (Medical college) ಬೇಕು ಎಂಬುದು ಜನರ ಮತ್ತು ಜನಪ್ರತಿನಿಧಿಗಳ ಆಶಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ (Government) ಅಗತ್ಯ ವರದಿ (Necessary report) ನೀಡಲು ಬೇಕಾದ ಸಿದ್ಧತೆ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನ್ ರಾಜ್ ಸೂಚನೆ ನೀಡಿದರು.
ಹೊಸಪೇಟೆ ತಾಲೂಕಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಂದ ಪ್ರಸ್ತುತ ಪ್ರಗತಿ ವರದಿಯನ್ನು ಪಡೆದುಕೊಂಡರು.
ಎಷ್ಟು ಹಾಸಿಗೆಯುಳ್ಳ ಜಿಲ್ಲಾಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ಇದ್ದಾಗ ಮೆಡಿಕಲ್ ಕಾಲೇಜಿಗೆ ಅನುಮತಿ ಪಡೆಯಬಹುದು ಎಂಬ ಮಾಹಿತಿ ಪಡೆದುಕೊಂಡು ವರದಿ ಸಲ್ಲಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ₹10 ಏರಿಕೆ, ಇಂದು ಇಷ್ಟಾಗಿದೆ ಬೆಲೆ
ಆರೋಗ್ಯ ಇಲಾಖೆಯಿಂದ ನೇಮಿಸುವ ನೋಡಲ್ ಅಧಿಕಾರಿ ಈ ಬಗ್ಗೆ ವರದಿ ನೀಡಬೇಕು. ಮೊದಲು ಮೆಡಿಕಲ್ ಕಾಲೇಜು ಸ್ಥಾಪನೆಗೆ ಇಲ್ಲಿರುವ ಆರೋಗ್ಯ ಸೌಕರ್ಯದ ವರದಿ ಸಿದ್ಧಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯ 5 ಕ್ಷೇತ್ರದ ಇಲಾಖೆಗಳು ಆಯಾ ತಾಲೂಕನ್ನು ಗಮನದಲ್ಲಿಟ್ಟು ಕೈಗೊಳ್ಳಬೇಕಾದ ಅಭಿವೃದ್ಧಿ ಕ್ರಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳಿಂದ ಇಲಾಖಾವಾರು ನಿಗದಿ ಪಡಿಸಿರುವ ಭೌತಿಕ ಗುರಿ, ಸಾಧನೆ ಒಳಗೊಂಡಂತೆ ಪ್ರಸ್ತುತ ವರದಿಯ ಅಂಕಿ ಅಂಶಗಳ ಕುರಿತು ಮಾಹಿತಿ ಪಡೆದುಕೊಂಡರು. ಇಲಾಖೆಗೆ ಸೃಜಿಸಬೇಕಿರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಮಾಹಿತಿ ಪಡೆದುಕೊಂಡರು.
ಪ್ರತಿ ತಿಂಗಳು ಸಭೆ ನಡೆಸಲಾಗುತ್ತದೆ. ಎಲ್ಲಾ ಇಲಾಖೆಗಳು ಪ್ರಸ್ತುತ ರಾಜ್ಯ ಮಟ್ಟದಲ್ಲಿ ಪಡೆದುಕೊಂಡಿರುವ ಸ್ಥಾನದ ಶೇಕಡಾವಾರು ಪ್ರಮಾಣದ ಮಾಹಿತಿಯ ವರದಿಯನ್ನು ಅಧಿಕಾರಿಗಳು ಸಲ್ಲಿಸಬೇಕು ಎಂದು ಸೂಚಿಸಿದರು.
ನೂತನ ಜಿಲ್ಲೆಯಾಗಿದ್ದು, ಅಧಿಕಾರಿಗಳ ಸೃಜನೆ ಹಂತಹಂತವಾಗಿ ನಡೆಯುತ್ತದೆ. ಸದ್ಯ ಇರುವ ಸಂಪನ್ಮೂಲದಿಂದಲೇ ಇಲಾಖಾವಾರು ಪ್ರಗತಿ ಕೈಗೊಳ್ಳಲಾಗುತ್ತದೆ. ಇಲಾಖಾವಾರು ಪ್ರಗತಿ ಹಾಗೂ ಸಮಸ್ಯೆ, ದುರಸ್ತಿಗೆ ಸಂಬಂಧಿಸಿದ ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳನ್ನು, ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: Weather Report : ಕರಾವಳಿಯಲ್ಲಿ ತುಂತುರು, ಬೆಂಗಳೂರಲ್ಲಿ ಹಗುರ ಮಳೆ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ. ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.