Site icon Vistara News

Vijayanagara News: ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ನೂತನ ಡಿಸಿ ಎಂ.ಎಸ್.ದಿವಾಕರ್ ಭೇಟಿ, ಪರಿಶೀಲನೆ

Vijayanagara New DC MS Diwakar visited and inspected Harpanahalli Public Hospital

ಹರಪನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ (Public Hospital) ಮೂಲಭೂತ ಸೌಕರ್ಯ ಒದಗಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ (Development) ಕೈಗೊಳ್ಳಲು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದರು.

ಅವರು ಜಿಲ್ಲಾಧಿಕಾರಿಯಾಗಿ ಹೊಸಪೇಟೆಗೆ ಆಗಮಿಸಿದ ನಂತರ ಪ್ರಥಮ ಬಾರಿಗೆ ಹರಪನಹಳ್ಳಿ ಪಟ್ಟಣಕ್ಕೆ ಬುಧವಾರ ಆಗಮಿಸಿ, ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು.

ಆಸ್ಪತ್ರೆಯ ಔಷಧಿ ದಾಸ್ತಾನು ಕೊಠಡಿ, ಒಳರೋಗಿಗಳ ಯೋಗಕ್ಷೇಮಾ ವಿಚಾರಿಸಿ, ಕುಂದು ಕೊರತೆ ಆಲಿಸಿದರು. ಅಡುಗೆ ತಯಾರಿಸುವ ಕೊಠಡಿ, ಐಸಿಯು ಹಾಗೂ ಡಯಾಲಿಸಿಸ್ ಘಟಕ ಹಾಗೂ ಮಕ್ಕಳ ವಾರ್ಡ್‌ಗಳನ್ನು ಪರಿಶೀಲಿಸಿದರು.

ಇದನ್ನೂ ಓದಿ: Weather Report : 50 ಕಿ.ಮೀ ವೇಗದಲ್ಲಿ ಬೀಸಲಿದೆ ಬಿರುಗಾಳಿ; ಕರಾವಳಿಗೆ ಮಳೆ ಅಲರ್ಟ್‌

ಆಹಾರ ದಾಸ್ತಾನು ಕೊಠಡಿ ಪರಿಶೀಲಿಸಿದ ಅವರು, ಕಳಪೆ ಮೊಟ್ಟೆಗಳನ್ನು ನೋಡಿ ಕೋಪಗೊಂಡು, ಮೊಟ್ಟೆ ಸರಬರಾಜು ಮಾಡುವ ಏಜೆನ್ಸಿಯವರಿಗೆ ನೋಟಿಸ್ ನೀಡಲು ವೈದ್ಯಾಧಿಕಾರಿಗೆ ಸೂಚಿಸಿದರು.

ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಓವರ್‌ಹೆಡ್ ಕಾಮಗಾರಿ ವೀಕ್ಷಿಸಿ ಸ್ಥಗಿತಗೊಂಡಿರುವ ಬಗ್ಗೆ ವಿಚಾರಿಸಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಲು ತಿಳಿಸಿದರು. ಆಸ್ಪತ್ರೆಯ ಆವರಣದಲ್ಲಿರುವ ಆಕ್ಸಿಜನ್ ಘಟಕವನ್ನು ಸಹ ಪರಿಶೀಲಿಸಿದರು.

ದಂತವೈದ್ಯರೀಗೆ ನೋಟಿಸ್

ಕೆಲವರಿಂದ ದೂರು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯ ದಂತವೈದ್ಯರಿಗೆ ನೋಟಿಸ್ ನೀಡಲು ಅವರು ಸೂಚಿಸಿದರು. ಸ್ತ್ರೀರೋಗ ವೈದ್ಯರ ಕೊರತೆಯನ್ನು ಶೀಘ್ರವೇ ನೀಗಿಸುವುದಾಗಿ ಹೇಳಿದರು.

ಆಸ್ಪತ್ರೆಯ ಮುಂಬಾಗ ಹೊರರೋಗಿ ನೋಂದಣಿ ಕೌಂಟರ್ ಎದುರು ರೋಗಿಗಳು ಕುಳಿತುಕೊಳ್ಳಲು ಛಾವಣಿಯನ್ನು ಹಾಕಿಸಲು ಅನುದಾನ ನೀಡುವುದಾಗಿ ಅವರು ತಿಳಿಸಿದರು. ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದರೆ ಒದಗಿಸುವುದಾಗಿ ವೈದ್ಯಾಧಿಕಾರಿ ಡಾ.ಶಂಕರನಾಯ್ಕರವರಿಗೆ ತಿಳಿಸಿದರು. ಒಟ್ಟಾರೆ ಹೊಸಪೇಟೆ ಆಸ್ಪತ್ರೆಗೆ ಹೊಲಿಸಿದರೆ ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆ ಸ್ವಚ್ಚತೆಯಲ್ಲಿ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರವಾಸಿಮಂದಿರ ವೃತ್ತದಲ್ಲಿ ತಲೆಎತ್ತಿರುವ ತಳ್ಳುವ ಗಾಡಿ ಹೋಟೆಲ್‌ಗಳನ್ನು ಹಾಗೂ ಹೊಸ ಬಸ್ ನಿಲ್ದಾಣದ ಬಳಿ ಇರುವ ಗೂಡಂಗಡಿಗಳನ್ನು ತೆರವುಗೊಳಿಸಲು ಹಾಗೂ ಲಂಡನ್ ಹಳ್ಳಕ್ಕೆ ತಂತಿಬೆಲಿಯ ಮೆಸ್‌ನ್ನು ಅಳವಡಿಸಲು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಅವರಿಗೆ ಸೂಚಿಸಿದರು.

ಇದನ್ನೂ ಓದಿ: Viral News : ಇದರಲ್ಲಿರುವ ಮುತ್ತನ್ನು 30 ಸೆಕೆಂಡುಗಳೊಳಗೆ ಹುಡುಕಿ ನೋಡೋಣ!

ಸಬ್‌ರಿಜಿಸ್ಟಾರ್ ಕಚೇರಿ ಸ್ಥಳಾಂತರಕ್ಕೆ ಸೂಚನೆ

ಸಬ್‌ರಿಜಿಸ್ಟಾರ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಯವರು ಕಟ್ಟಡ ಅತ್ಯಂತ ಶಿಥಿಲಗೊಂಡಿರುವುದನ್ನು ಗಮನಿಸಿ, ಕೂಡಲೇ ಐ.ಬಿ.ಆವರಣದಲ್ಲಿರುವ ಲೋಕಪಯೋಗಿ ಕಟ್ಟಡಕ್ಕೆ ಸ್ಥಳಾಂತರಿಸಲು ಸೂಚಿಸಿದರು. ಆ ಕಟ್ಟಡಕ್ಕೆ 3 ಫೇಸ್ ವಿದ್ಯುತ್ ಸಂಪರ್ಕವನ್ನು 3 ದಿನದೊಳಗಾಗಿ ಕಲ್ಪಿಸಲು ಬೆಸ್ಕಾಂ ಎಇಇ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.

ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ

ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ತರಗತಿಗಳ ಕೊಠಡಿಗಳನ್ನು ಪರಿಶೀಲಿಸಿದ ಅವರು ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಲ್ಲಿ ನೀಡುವ ಹಾಲನ್ನು ಬೆಳಿಗ್ಗೆ ನೀಡದೆ ತಡವಾಗಿ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಈ ರೀತಿಯಾದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ನಿನ್ನೆಗಿಂತ ತುಸು ಕಡಿಮೆ, ಬೆಳ್ಳಿಯ ಬೆಲೆಯೂ ಇಳಿಕೆ

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಬಿಇಓ ಬಸವರಾಜಪ್ಪ, ಅಕ್ಷರದಾಸೋಹ ಎಡಿ ಜಯರಾಜ್, ಕೃಷಿ ಸಹಾಯಕ ನಿರ್ದೇಶಕ ಗೋಂದಿ ಮಂಜುನಾಥ, ಟಿಎಚ್‌ಓ ವೈದ್ಯ.ಹಾಲಸ್ವಾಮಿ, ಎಇಇ ಸತೀಶಪಾಟೀಲ್, ಆರ್‌ಎಫ್‌ಓ ಮಲ್ಲಪ್ಪ, ತೋಷನ್‌ಕುಮಾರ, ಬಿಸಿಎಂ ನಿಲಯ ಮೇಲ್ವಿಚಾರಕ ಬಿ.ಎಚ್.ಚಂದ್ರಪ್ಪ, ಹಾಗೂ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version