Site icon Vistara News

VIjayanagara News: ಹೊಸಪೇಟೆಯಲ್ಲಿ ಅ.12, 13ರಂದು ಚಾರ್ಟರ್ಡ್ ಅಕೌಂಟೆಂಟ್‌ಗಳ ಸಮಾವೇಶ

VIjayanagara News 55th Conference of Chartered Accountants at Hospet on October 12 th and 13

‌ವಿಜಯನಗರ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ (ಐಸಿಎಐ) ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ (ಎಸ್‌ಐಆರ್‌ಸಿ) ವತಿಯಿಂದ ಬಳ್ಳಾರಿ ಶಾಖೆಯ ಆಶ್ರಯದಲ್ಲಿ ಅಕ್ಟೋಬರ್ 12 ಮತ್ತು 13 ರಂದು ಎರಡು ದಿನಗಳ ಕಾಲ 55ನೇ ದಕ್ಷಿಣ ಭಾರತ ಮಟ್ಟದ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಮಾವೇಶವನ್ನು (Chartered Accountants Conference) ಹೊಸಪೇಟೆಯಲ್ಲಿ ಏರ್ಪಡಿಸಲಾಗಿದೆ ಎಂದು ಎಸ್‌ಐಆರ್‌ಸಿ ಅಧ್ಯಕ್ಷ ಸಿಎ ಪನ್ನರಾಜ್ ತಿಳಿಸಿದರು.

ಹೊಸಪೇಟೆಯ‌ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸಪೇಟೆ ತಾಲೂಕಿನ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಅಕ್ಟೋಬರ್ 12 ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದರು.

ಸಮಾವೇಶದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪುರ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ, ಕಾರ್ಮಿಕ ಸಚಿವ ಸಂತೋಷ ಲಾಡ್ ಭಾಗಿಯಾಗಲಿದ್ದಾರೆ. ಐಸಿಎಐ ಅಧ್ಯಕ್ಷ ಸಿಎ ಅನಿಕೇತ್ ಎಸ್. ತಲಾಟಿ ಮತ್ತು ಉಪಾಧ್ಯಕ್ಷ ಸಿಎ ರಂಜಿತ್ ಅಗರವಾಲ್ ಅವರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Book Release: ಶರಣು ಹುಲ್ಲೂರರ ‘ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ’ ಕೃತಿ ಬಿಡುಗಡೆ

ಸಂಸ್ಥೆಯ ಏಳು ದಶಕಗಳ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದಾಚೆಗೆ ಗ್ರಾಮೀಣ ಪ್ರದೇಶವೊಂದರಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಈ ಮೂಲಕ ಹಂಪಿಯ ಇತಿಹಾಸ, ಐತಿಹಾಸಿಕ ಸ್ಥಳಗಳನ್ನು ಪ್ರತಿನಿಧಿಗಳಿಗೆ ಪರಿಚಯಿಸುವ ಉದ್ದೇಶವನ್ನೂ ಸಹ ಸಂಸ್ಥ ಹೊಂದಿದೆ ಎಂದು ತಿಳಿಸಿದರು.

ದಕ್ಷಿಣ ಭಾರತದ ಮೂರು ಸಾವಿರ ಚಾರ್ಟರ್ಡ್ ಅಕೌಂಟೆಂಟ್‌ಗಳು ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ, ಸಮಾವೇಶದ ಅವಧಿಯಲ್ಲಿ ಆರೋಗ್ಯ ಗೋಷ್ಠಿ ಮತ್ತು ಮನೋರಂಜನಾ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಪಂದ್ಯಕ್ಕೂ ಮುನ್ನ ನವೀನ್​ ಉಲ್​ ಹಕ್​ಗೆ ನಡುಕ; ಇದಕ್ಕೆ ಕಾರಣ ಕಿಂಗ್​ ಕೊಹ್ಲಿ

ಈ ಸಂದರ್ಭದಲ್ಲಿ ಎಸ್‌ಐಆರ್‌ಸಿ ಉಪಾಧ್ಯಕ್ಷೆ ಎ.ಬಿ. ಗೀತಾ, ಖಜಾಂಚಿ ಸುನೀಲ್ ಕುಮಾರ ಮಂಡವಾ, ಬಳ್ಳಾರಿ ಶಾಖೆಯ ಅಧ್ಯಕ್ಷ ಕೆ.ನಾಗನಗೌಡ, ಉಪಾಧ್ಯಕ್ಷ ಸಿ.ವೆಂಕಟನಾರಾಯಣ, ಕಾರ್ಯದರ್ಶಿ ಪುರುಷೋತ್ತಮ ರೆಡ್ಡಿ, ಸಮಿತಿ ಸದಸ್ಯ ಡಿ.ಗಜರಾಜ, ಹಿರಿಯ ಲೆಕ್ಕ ಪರಿಶೋಧಕ ಸೈಯದ್ ಮೊಹಮ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version