ವಿಜಯನಗರ: ಹೆರಿಗೆಗೆಂದು (Delivery) ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಮಾರ್ಗಮಧ್ಯೆ ಆ್ಯಂಬುಲೆನ್ಸ್ (Ambulance) ನಲ್ಲೇ ಗರ್ಭಿಣಿ ಮಹಿಳೆ (Pregnant woman) ಹೆಣ್ಣು ಮಗುವಿಗೆ (Baby girl) ಜನ್ಮ ನೀಡಿರುವ ಘಟನೆಯು ಹೊಸಪೇಟೆ ತಾಲೂಕಿನ ಬೈಲುವದ್ದಿಗೇರಿ ಗ್ರಾಮದ ಬಳಿ ನಡೆದಿದೆ.
ಬೈಲುವದ್ದಿಗೇರಿ ದೀಪಾ (24) ಆ್ಯಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ ಮಹಿಳೆಯಾಗಿದ್ದಾಳೆ. ಗರ್ಭಿಣಿ ದೀಪಾ ಗೆ ಬೆಳಗಿನಜಾವ ಎರಡು ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆ್ಯಂಬುಲೆನ್ಸ್‌ನಲ್ಲಿ ಗರ್ಭಿಣಿ ಮಹಿಳೆಯನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಬರಲಾಗುತ್ತಿತ್ತು.
ಇದನ್ನೂ ಓದಿ: Dharmendra Singh: ಮೊಮ್ಮಗನ ಸಂಗೀತ ಕಾರ್ಯಕ್ರಮದಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ ಧರ್ಮೇಂದ್ರ ಸಿಂಗ್, ವಿಡಿಯೊ ವೈರಲ್
ಆದರೆ ಗರ್ಭಿಣಿ ದೀಪಾಗೆ ಹೆರಿಗೆ ನೋವು ಜಾಸ್ತಿಯಾಗಿದ್ದು, ಮಾರ್ಗಮಧ್ಯೆ ಆ್ಯಂಬುಲೆನ್ಸ್ ನಿಲ್ಲಿಸಲಾಗಿದೆ. ಆದರೆ ರಾತ್ರಿ ವೇಳೆ ಆ್ಯಂಬುಲೆನ್ಸ್ ವೈದ್ಯರು ಇಲ್ಲದ ಕಾರಣ ಗರ್ಭಿಣಿ ಕುಟುಂಬಸ್ಥರ ಸಹಾಯ ಪಡೆದು ಆ್ಯಂಬುಲೆನ್ಸ್ ಸಿಬ್ಬಂದಿ ಸುರೇಶ್ ಎಸ್.ಕೆ., ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಸುರಕ್ಷಿತವಾಗಿ ಗರ್ಭಿಣಿ ದೀಪಾಳ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಆ್ಯಂಬುಲೆನ್ಸ್ ಸಿಬ್ಬಂದಿ ಸುರೇಶ್ ಎಸ್.ಕೆ. ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.