Site icon Vistara News

Vijayanagara News: ಕಟ್ಟಕಡೆಯ ಗ್ರಾಮಕ್ಕೂ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ: ಶಾಸಕ ಡಾ. ಎನ್. ಟಿ. ಶ್ರೀನಿವಾಸ್

MLA Dr NT Srinivas launched the program to transport facility at Kudligi

ಕೂಡ್ಲಿಗಿ: ತಾಲೂಕಿನ ಗ್ರಾಮೀಣ ಭಾಗದ (Rural area) ಕಟ್ಟಕಡೆಯ ಗ್ರಾಮಕ್ಕೂ (Village) ಸಾರಿಗೆ (Transport) ವ್ಯವಸ್ಥೆಯನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ರದ್ದಾಗಿದ್ದ ಹಳೆಯ ಮಾರ್ಗಗಳನ್ನು ಮತ್ತೆ ಸಾರಿಗೆ ವ್ಯವಸ್ಥೆ ಪುನರ್ ಕಲ್ಪಿಸುವ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: World Social Media Day : ಸಾಮಾಜಿಕ ಜಾಲತಾಣಗಳು ಮಕ್ಕಳಿಗೆ ಹೇಗೆ ಅಪಾಯಕಾರಿ?

ಕೂಡ್ಲಿಗಿ ಬಸ್ ಡಿಪೋ ಅತ್ಯಂತ ಹಳೆಯ ಘಟಕವಾಗಿದ್ದು, ಸುಮಾರು ಅರವತ್ತು ವರ್ಷಗಳಿಂದಲೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ತಾಲೂಕಿನಲ್ಲಿ ಅತಿ ಹೆಚ್ಚು ಗ್ರಾಮಗಳು ಇದ್ದರು, ಇಲ್ಲಿಯವರೆಗೂ ಸಕಾಲದಲ್ಲಿ ಸಾರಿಗೆ ವ್ಯವಸ್ಥೆ ಇರದೇ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ಇತ್ತು, ಚುನಾವಣಾ ಪ್ರಚಾರದಲ್ಲಿ ಇದನ್ನ ಗಮನಿಸಿದ್ದು ಹಾಗೂ ಸಾರ್ವಜನಿಕರು ಸಹ ಈ ಬಗ್ಗೆ ಮನವಿಯನ್ನು ಸಹ ನೀಡಿದ್ದರು. ಆ ನಿಟ್ಟಿನಲ್ಲಿ ಸಾರಿಗೆ ವ್ಯವಸ್ಥಾಪಕರ ಜತೆ ಹಾಗೂ ಸಾರಿಗೆ ಇಲಾಕೆಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಈ ಹಿಂದೆ ಸುಮಾರು ಹತ್ತು ವರ್ಷಗಳ ಹಿಂದಿನಿಂದಲೂ ಸರ್ಕಾರಿ ಬಸ್ ಮಾರ್ಗವನ್ನು ಈಗ ಮತ್ತೆ ಚಾಲನೆ ಮಾಡಿದ್ದೇವೆ, ಇದರಿಂದಾಗಿ ಅನೇಕ ಗ್ರಾಮೀಣ ಭಾಗದ ಜನರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಈಗಾಗಲೇ ಹತ್ತು ಮಾರ್ಗಗಳನ್ನು ಪುನಃ ಚಾಲನೆ ನೀಡಿದ್ದು, ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ಅವಶ್ಯ ಇದ್ದ ಕಡೆ ಹೊಸ ಮಾರ್ಗಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಡಿಪೋ ಹಳೆಯದಾಗಿದ್ದು, ನಿಲ್ದಾಣದ ಜಾಗವು ಕಿರಿದಾದ ಕಾರಣ ಈಗಿರುವ ಡಿಪೋ ಸೇರಿದಂತೆ ಬಸ್ ನಿಲ್ದಾಣವನ್ನು ಸುಸಜ್ಜಿತ ನಿಲ್ದಾಣವನ್ನಾಗಿ ಮಾಡುವ ಯೋಜನೆ ಇದೆ, ಈಗಿರುವ ಡಿಪೋವನ್ನು ಬೇರೆಡೆಗೆ ನಿರ್ಮಾಣ ಮಾಡಲು ಜಾಗದ ಪರಿಶೀಲನೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ನೂತನ ಜಾಗ ನೋಡಿ ಡಿಪೋ ಹಾಗೂ ಬಸ್ ನಿಲ್ದಾಣವನ್ನು ಸುಸಜ್ಜಿತವಾಗಿ ನಿರ್ಮಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: NICE Road: ನೈಸ್‌ ರೋಡ್‌ನಲ್ಲಿ ಓಡಾಡ್ತೀರಾ?; ಜುಲೈ 1ರಿಂದ ದುಬಾರಿಯಾಗಲಿದೆ ಟೋಲ್‌ ದರ

ತಾಲೂಕು ಆಡಳಿತ ಕಚೇರಿಗೆ ಭೇಟಿ

ನಂತರ ಪಟ್ಟಣದ ತಾಲೂಕು ಆಡಳಿತ ಕಚೇರಿಗೆ ಭೇಟಿ ನೀಡಿದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಅಲ್ಲಿನ ಇಲಾಖೆಗಳ ಕೊಠಡಿಗಳ ಪರಿಶೀಲನೆ ನಡೆಸಿ ಉಪ ನೋಂದಣಿ ಹಾಗೂ ಪತ್ರಾಂಖಿತ ಕಚೇರಿಯನ್ನು ಆಡಳಿತ ಸೌಧದಲ್ಲಿ ಕಾರ್ಯ ಚಟುವಟಿಕೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇದರಿಂದ ಜನರ ವೃತಾ ಅಲೆದಾಟ ತಪ್ಪುತ್ತದೆ ಎಂದರು.

ಇದನ್ನೂ ಓದಿ: World Cup 2023 : ಎಲ್ಲವೂ ಇಂಪೋರ್ಟೆಡ್; ವಿಶ್ವ ಕಪ್​ ಕ್ರಿಕೆಟ್​ ಸ್ಟೇಡಿಯಂಗಳಿಗೆ ಭರ್ಜರಿ ಕಾಯಕಲ್ಪ!

ಈ ಸಂಧರ್ಭದಲ್ಲಿ ತಹಶೀಲ್ದಾರ್ ಟಿ.ಜಗದೀಶ್, ಸಾರಿಗೆ ವ್ಯವಸ್ಥಾಪಕ ಮರಿಲಿಂಗಪ್ಪ , ಮುಖಂಡರಾದ ಹಿರೇಕುಂಬಳಗುಂಟೆ ಉಮೇಶ್, ಕಾವಲಿ ಶಿವಪ್ಪನಾಯಕ, ಉದಯ ಜನ್ನು, ಎಚ್.ವೀರಭದ್ರಪ್ಪ, ಟಿ.ಜಿ.ಮಲ್ಲಿಕಾರ್ಜುನ ಗೌಡ, ನಾಗಮಣಿ ಜಿಂಕಾಲ್, ಕೋಗಳಿ ಮಂಜುನಾಥ, ಮಾದೇಹಳ್ಳಿ ನಜೀರ್, ಜಯರಾಂ ನಾಯಕ, ರಾಘವೇಂದ್ರ, ಜಿಲಾನ್, ಡಿ.ಎಚ್.ದುರುಗೇಶ್, ಕೆ.ಪಿ.ಮಹೇಶ್, ಎರಿಸ್ವಾಮಿ, ನರೇಂದ್ರ ಸ್ವಾಮಿ, ಸಿದ್ದೇಶ್, ದಿನಕರ, ಮರುಳಸಿದ್ದಪ್ಪ ಸೇರಿದಂತೆ ಅನೇಕರು ಇದ್ದರು.

Exit mobile version