ಕೂಡ್ಲಿಗಿ: ಆಸ್ಪತ್ರೆಗೆಂದು (Hospital) ತೆರಳುತ್ತಿದ್ದ ಮಹಿಳೆಯೊಬ್ಬರು ಆಟೋದಲ್ಲಿಯೇ (Auto) ಮರೆತು ಹೋಗಿದ್ದ 40 ಸಾವಿರ ಹಣವಿದ್ದ ಚೀಲವನ್ನು (Cash bag) ಆಟೋ ಚಾಲಕ ಮರಳಿ ಹಿಂದುರಿಗಿಸಿ (Returned) ಮಾನವೀಯತೆ ಮೆರೆದಿದ್ದಾರೆ.
ರತ್ನಮ್ಮ ಎಂಬ ಮಹಿಳೆಯು ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಆಟೋದಲ್ಲಿಯೇ ಬಿಟ್ಟು ಇಳಿದಿದ್ದಾರೆ. ನಂತರ ಆಟೋ ಚಾಲಕ ಗಿರೀಶ್ ಮತ್ತೊಬ್ಬ ಪ್ರಯಾಣಿಕರನ್ನು ಹತ್ತಿಸಿಕೊಂಡಾಗ ಚೀಲ ಆಟೋದಲ್ಲಿ ಇರುವುದು ಕಂಡುಬಂದಿದೆ. ಇದನ್ನು ಪರಿಶೀಲಿಸಿದಾಗ 40 ಸಾವಿರ ನಗದು ಹಾಗೂ ಕೆಲ ದಾಖಲೆಗಳು ಇದ್ದವು.
ಇದನ್ನೂ ಓದಿ: ಸವಣೂರು ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯ 1998ನೇ ಎಸ್ಸೆಸ್ಸೆಲ್ಸಿ ಬ್ಯಾಚಿನ ವಿದ್ಯಾರ್ಥಿಗಳಿಂದ ಗುರುವಂದನೆ
ಇದೇ ವೇಳೆ ತಮ್ಮ ಚೀಲವನ್ನು ಆಟೋದಲ್ಲಿ ಬಿಟ್ಟಿದ್ದು ತಿಳಿದ ಮಹಿಳೆ ಆಟೋಗಾಗಿ ಹುಡುಕಾಟ ನಡೆಸಲು ಮುಂದಾಗಿದ್ದಾಳೆ. ಅಷ್ಟರಲ್ಲಿ ಆಟೋ ಚಾಲಕ ಗಿರೀಶ್ ಆಟೋದಲ್ಲಿ ಬಿಟ್ಟು ಹೋಗಿದ್ದ ಕೆಲ ದಾಖಲೆಗಳಲ್ಲಿದ್ದ ಮೊಬೈಲ್ ನಂಬರ್ ತೆಗೆದುಕೊಂಡು ಕರೆ ಮಾಡಿ ಸಂಪರ್ಕಿಸಿ ಮಹಿಳೆಯನ್ನು ಪತ್ತೆ ಹಚ್ಚಿ 40 ಸಾವಿರ ನಗದು ಹಾಗೂ ದಾಖಲೆಗಳನ್ನು ಮಹಿಳೆಗೆ ವಾಪಸ್ ನೀಡಿ ತಮ್ಮ ಪ್ರಾಮಾಣಿಕತೆ ಮೆರೆದಿದ್ದಾನೆ.
ಇದನ್ನೂ ಓದಿ: Bangalore Traffic: ಬೆಂಗಳೂರು ಟ್ರಾಫಿಕ್ ಕಂಟ್ರೋಲ್‌ಗೆ ಡ್ರೋನ್ ಕಣ್ಗಾವಲು; ಹೀಗಿರಲಿದೆ ಮೇಲ್ನೋಟ!
ಈ ವೇಳೆ ಘಟನಾ ಸ್ಥಳದಲ್ಲಿದ್ದ ಮಾಜಿ ಸೈನಿಕ ಕಾಟೇರ ರಮೇಶ್ ಎನ್ನುವವರು ಆಟೋ ಚಾಲಕ ಗಿರೀಶ್ ಅವರ ಕಾರ್ಯಕ್ಕೆ ಅಭಿನಂದನೆ ತಿಳಿಸಿದರು.