Site icon Vistara News

Vijayanagara News: ಹಿಕ್ಕಿಮಗೇರಿ ಸರ್ಕಾರಿ ಶಾಲೆಯಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ

Anche jana samparka Abhiyan inauguration by MLA MP latha at Hikkimageri Govt School

ಹರಪನಹಳ್ಳಿ: ತಾಲೂಕಿನ ಹಿಕ್ಕಿಮಗೇರಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಹರಪನಹಳ್ಳಿ ಉಪವಿಭಾಗದ ವ್ಯಾಪ್ತಿಯ ಅರಸೀಕೆರೆ ಅಂಚೆ ಕಛೇರಿ (Post Office) ವತಿಯಿಂದ ಅಂಚೆ ಜನ ಸಂಪರ್ಕ ಅಭಿಯಾನ (Anche jana samparka Abhiyan) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಂಚೆ ಇಲಾಖೆ ಜನರ ಜೀವನಾಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಹಿಂದೆ ರಾಜರ ಕಾಲದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂದೇಶಗಳನ್ನು ರವಾನಿಸಬೇಕಾದರೆ ಪಾರಿವಾಳ, ಕುದುರೆಗಳ ಮೂಲಕ ಪತ್ರಗಳನ್ನು ರವಾನಿಸಲಾಗುತ್ತಿತ್ತು ನಂತರ ಬ್ರಿಟಿಷರ ಕಾಲದಲ್ಲಿ ಪೋಸ್ಟ್ ಮ್ಯಾನ್‍ಗಳ ಮೂಲಕ ಪತ್ರ ವಿನಿಮಯ ಮಾಡಲಾಯಿತು, ಸ್ವಾತಂತ್ರ್ಯದ ನಂತರ ಅಂಚೆ ಇಲಾಖೆ ಪ್ರಾರಂಭಗೊಂಡು ಜನರು ತಮ್ಮ ಪತ್ರ ವ್ಯವಹಾರಗಳನ್ನು ಅಂಚೆ ಇಲಾಖೆ ಮೂಲಕ ನಡೆಸುತ್ತಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ: Viral News: ಶಾಲೆ ತೊರೆದು 37 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಬರೆದ ಆಟೋ ಡ್ರೈವರ್‌!

ಯುವ ಮುಖಂಡ ಅರಸೀಕರೆ ವೈ.ಡಿ.ಅಣ್ಣಪ್ಪ ಮಾತನಾಡಿ, ಅಂಚೆ ಇಲಾಖೆ ಜನರ ಜೀವಾಳವಾಗಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂದೇಶವನ್ನು ರವಾನಿಸುವ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ಕೇಂದ್ರ ಸರ್ಕಾರ ಅಂಚೆ ಕಛೇರಿಯ ಮೂಲಕ ಹೊಸ ಹೊಸ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.

ಇದನ್ನೂ ಓದಿ: World Cup 2023 : ಏಕ ದಿನ ವಿಶ್ವ ಕಪ್​ನ ಅಧಿಕೃತ ಗೀತೆ ಬಿಡುಗಡೆ; ಇಲ್ಲಿದೆ ಹಾಡಿನ ಸಂಪೂರ್ಣ ವಿವರ

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಬಳ್ಳಾರಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ವಿ.ಎಲ್.ಚಿತ್ತಕೋಟೆ, ಹರಪನಹಳ್ಳಿ ಉಪವಿಭಾಗದ ಅಂಚೆ ನಿರೀಕ್ಷಕ ಎನ್.ಸುರೇಶ್, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಪುರಸಭೆ ಅಭಿಯಂತರ ಜಿ.ಯು.ಎಂ.ಸಿದ್ದೇಶ್ವರ ಸ್ವಾಮಿ, ಅರಸೀಕೆರೆ ಅಂಚೆ ಕಛೇರಿಯ ಪೋಸ್ಟ್ ಮಾಸ್ಟರ್ ವೆಂಕಟೇಶ್, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ರಾಮಪ್ಪ, ಮುಖ್ಯ ಶಿಕ್ಷಕಿ ಕೆ.ಜಯಶ್ರೀ, ಕಡಬಗೇರಿ ಗ್ರಾ.ಪ ಅಧ್ಯಕ್ಷ ಮಂಜುನಾಥ, ಮಂಗಳ, ಗ್ರಾ.ಪ. ಸದಸ್ಯೆ ಅನುಷಾ ಮಂಜುನಾಥ, ಮುಖಂಡರಾದ ಮತ್ತೂರು ಬಸವರಾಜ್, ಎಚ್.ಶಿವರಾಜ್, ಸಾಸ್ವಿಹಳ್ಳಿ ನಾಗರಾಜ್, ಪ್ರಸಾದ್ ಕಾವಡಿ, ಅರಸೀಕೆರೆ ನವೀನ್, ಪರಶುರಾಮ ಸೇರಿದಂತೆ ಮತ್ತಿತರರು ಇದ್ದರು.

Exit mobile version