Site icon Vistara News

Vijayanagara News: ಚಂದ್ರಯಾನ-3 ಯಶಸ್ವಿ; ಕೊಟ್ಟೂರಿನಲ್ಲಿ ವಿಜಯೋತ್ಸವ

Chandrayaan-3 successful Victory celebration at Kottur

ಕೊಟ್ಟೂರು: ಇಸ್ರೋ (ISRO) ಸಂಸ್ಥೆಯು ಉಡಾವಣೆ ಮಾಡಿದ ಚಂದ್ರಯಾನ-3 (Chandrayaan-3) ಯಶಸ್ವಿಯಾಗಿ, ಚಂದ್ರನ ನೆಲದ ಮೇಲೆ ಸುರಕ್ಷಿತವಾಗಿ ವಿಕ್ರಂ ಲ್ಯಾಂಡರ್‌ ಇಳಿದ ಹಿನ್ನಲೆಯಲ್ಲಿ ಹರ್ಷ ವ್ಯಕ್ತಪಡಿಸಿ, ಇಲ್ಲಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಆಡಳಿತ ಮಂಡಳಿ, ಭೋದಕ-ಭೋದಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಶುಕ್ರವಾರ ಪಟ್ಟಣದಲ್ಲಿ ಬೃಹತ್‌ ವಿಜಯೋತ್ಸವ (Victory) ಮೆರವಣಿಗೆಯನ್ನು ಕೈಗೊಂಡರು.

ಕೊಟ್ಟೂರೇಶ್ವರ ದೇವಸ್ಥಾನದ ರಸ್ತೆ, ಮುಖ್ಯ ರಸ್ತೆ, ಉಜ್ಜಯಿನಿ ವೃತ್ತ ಸೇರಿದಂತೆ ಮತ್ತಿತರೆ ಕಡೆ ನೂರಾರು ವಿದ್ಯಾರ್ಥಿಗಳಿದ್ದ ಮೆರವಣಿಗೆಯುದ್ದಕ್ಕೂ 20 ಅಡಿ ಉದ್ದದ ಬೃಹತ್‌ ರಾಷ್ಟ್ರಧ್ವಜವನ್ನು ವಿದ್ಯಾರ್ಥಿಗಳು ಕೈಯ್ಯಲ್ಲಿ ಹಿಡಿದು ಸಾಗಿದರು.

ಇದನ್ನೂ ಓದಿ: Smart City: ಇಂದೋರ್‌ ಮತ್ತೆ ಸ್ಮಾರ್ಟ್‌ ಸಿಟಿ; ಪಟ್ಟಿಯಲ್ಲಿ ಬೆಂಗಳೂರು ಇದೆಯಾ ನೋಡಿ

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದರಾಮ ಕಲ್ಮಠ್‌ ಮೆರವಣಿಗೆಗೆ ಚಾಲನೆ ನೀಡಿದರು.

ಯಶಸ್ವಿ ಚಂದ್ರಯಾನಕ್ಕೆ ತಮ್ಮದೇ ಕೊಡುಗೆ ನೀಡಿದ ಕೊಟ್ಟೂರಿನವರಾದ ಇಸ್ರೋ ಸಂಸ್ಥೆಯ ಸಹ ನಿರ್ದೇಶಕ ಡಾ. ಬಿ.ಎಚ್‌.ಎಂ. ದಾರುಕೇಶ್‌ ಹಾಗೂ ಎಲ್ಲಾ ಇಸ್ರೋ ವಿಜ್ಞಾನಿಗಳಿಗೆ ಜಯ ಘೋಷಣೆ ಕೂಗುವ ಮೂಲಕ ರಾಷ್ಟ್ರಾಭಿಮಾನ ತೋರಿದರು.

ಇದನ್ನೂ ಓದಿ: ICC World Cup: ಗಂಗೂಲಿ ವಿಶ್ವಕಪ್​ ತಂಡದಲ್ಲಿ ಏಕೈಕ ಕನ್ನಡಿಗನಿಗೆ ಅವಕಾಶ

ಈ ಸಂದರ್ಭದಲ್ಲಿ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ .ರವಿಕುಮಾರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಶಾಂತ್ ಕುಮಾರ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಹಾಗೂ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Exit mobile version