ಹರಪನಹಳ್ಳಿ: ತಾಲೂಕಿನ ವಿವಿಧ ಇಲಾಖೆಯಲ್ಲಿ ಕೆಆರ್‌ಐಡಿಎಲ್ (KRIDL) ಸಂಸ್ಥೆಯವರು ಕೈಗೊಂಡಿರುವ ಕಾಮಗಾರಿಗಳ (Works) ನಿಧಾನಗತಿ ಪ್ರಗತಿ ಕುರಿತು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿಯ ರಾಜೀವಗಾಂಧಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯ 28 ಕಟ್ಟಡಗಳನ್ನು ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡ ಕಾಮಗಾರಿಗಳನ್ನು ಕೆಆರ್‌ಐಡಿಎಲ್ ನಿಗಮದವರು ವರ್ಷವಾದರೂ ಪೂರ್ಣಗೊಳಿಸದೆ ಇರುವುದು ಸರಿಯಲ್ಲ ಎಂದರು.
ಇದನ್ನೂ ಓದಿ: PF For Medical Reason : ಅನಾರೋಗ್ಯದ ಸಂದರ್ಭದಲ್ಲಿ ಪಿಎಫ್‌ನಿಂದ ಮುಂಗಡ ಪಡೆಯುವುದು ಹೇಗೆ? ಇಲ್ಲಿದೆ ಡಿಟೇಲ್ಸ್
ಕಾಮಗಾರಿಗಳು ಕಳಪೆಯಾಗುತ್ತಿವೆ ಹಾಗೂ ಬಹಳಷ್ಟು ನಿಧಾನಗತಿಯಾಗುತ್ತಿವೆ, ಏನು ಸಮಸ್ಯೆ ಇದೆ ನಿಮ್ಮಲ್ಲಿ ಸಮಯಕ್ಕೆ ಸರಿಯಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಾಗೂ ಗುಣಮಟ್ಟ ಉತ್ತಮವಾಗಿರಲಿ ಎಂದು ಕೆಆರ್ ಐಡಿಎಲ್ ಎಇಇ ರವರಿಗೆ ಸೂಚಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಹಾಗೂ ಸಾರ್ವಜನಿಕ ಆಸ್ಪತ್ರೆ ಗಳ ಬಳಿ ಸಾರಿಗೆ ಬಸ್ಸುಗಳನ್ನು ಕೋರಿಕೆ ಮೇರೆಗೆ ನಿಲುಗಡೆಗೊಳಿಸಲು ಹಾಗೂ ಅಡವಿಹಳ್ಳಿ ಹಾಗೂ ಹೊಸ ಓಬಳಾಪುರ ಗ್ರಾಮಗಳ ಬಳಿ ಬಸ್ ಸಂಚಾರಕ್ಕೆ ಅನುಕೂಲವಾಗಲು ಜಂಗಲ್ ಕಟ್ಟಿಂಗ್ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕಂಬಟ್ರಹಳ್ಳಿ ಹಾಗೂ ಕಂಚಿಕೇರಿಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿದ್ದು, ಒಳಗಿರುವ ಸಾಮಾನುಗಳು ಕಾಣೆಯಾಗಿವೆ, ಪಟ್ಟಣದಲ್ಲಿ ಸಹ ಕೆಲವೊಂದು ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟಿವೆ ಸರಿಪಡಿಸಿ ಎಂದು ಸಂಬಂಧಪಟ್ಟವರಿಗೆ ಶಾಸಕಿ ಎಂ.ಪಿ.ಲತಾ ತಾಕೀತು ಮಾಡಿದರು.
ಇದನ್ನೂ ಓದಿ: UPSC Prelims Result 2023 : ಯುಪಿಎಸ್‌ಸಿ ಫೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ
ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜು ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಶಾಸಕರು ಅಸಮಾದಾನ ವ್ಯಕ್ತಪಡಿಸಿದರು.
ಗೈರಾದವರಿಗೆ ನೋಟೀಸ್
ಪ್ರತಿಪರಿಶೀಲನಾ ಸಭೆಗೆ ಗೈರಾದ ಕೈಗಾರಿಕೆ, ಸಹಕಾರ, ನಿರ್ಮಿತಿಕೇಂದ್ರ, ಪಿಎಂಜಿಎಸ್‌ವೈ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲು ಸೂಚಿಸಿದರು.
ಕೃಷಿ ಇಲಾಖೆಯಲ್ಲಿ 23 ಹುದ್ದೆಗಳು ಖಾಲಿ ಇವೆ. ಶೇ.1 ರಷ್ಟು ಬಿತ್ತನೆಯಾಗಿದೆ, ರಸಗೊಬ್ಬರ, ಬೀಜಗಳಿಗೆ ಕೊರತೆ ಇಲ್ಲ, ಈಗ ಸ್ವಲ್ಪ ಮಳೆ ಬಂದಿದೆ ಎಂದು ಸಹಾಯಕ ಕೃಷಿ ನಿರ್ದೆಶಕ ಮಂಜುನಾಥ ಗೊಂದಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕಿ ರೇಣುಕಾದೇವಿ ತಮ್ಮ ಇಲಾಖೆಯ ಪ್ರಗತಿ ಮಂಡಿಸಿ ಹಾಸ್ಟೆಲ್ ಕಟ್ಟಿಡಗಳ ಕಾಮಗಾರಿ ಬಹಳಷ್ಟು ವಿಳಂಬವಾಗಿವೆ ಎಂದು ಶಾಸಕರ ಗಮನಕ್ಕೆ ತಂದರು.
ಒಂದು ಹಾಸ್ಟೆಲ್ ಕಟ್ಟಡವನ್ನಾದರೂ 10 ದಿನದಲ್ಲಿ ಪೂರ್ಣಗೊಳಿಸಿ ಹಸ್ತಾಂತರಿಸಿ ಎಂದು ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ ಅವರು ಭೂ ಸೇನಾ ನಿಗಮದವರಿಗೆ ತಿಳಿಸಿದರು.
ಇದನ್ನೂ ಓದಿ: PAN Card: ಆಧಾರ್ ಬಳಸಿಕೊಂಡು ಪ್ಯಾನ್ ಅಡ್ರೆಸ್ ಚೇಂಜ್ ಮಾಡಬಹುದು! ಈ ಸ್ಟೆಪ್ಸ್ ಫಾಲೋ ಮಾಡಿ…
ಸಭೆಯಲ್ಲಿ ಉಪವಿಭಾಗಾಧಇಕಾರಿ ಟಿ.ವಿ.ಪ್ರಕಾಶ, ತಹಶೀಲ್ದಾರ ಡಾ.ಶಿವಕುಮಾರ ಬಿರಾದಾರ, ತಾ.ಪಂ ಇಒ ಕೆ.ಆರ್.ಪ್ರಕಾಶ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಯೋಜನಾಧಿಕಾರಿ ವಿಜಯಕುಮಾರ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.