Site icon Vistara News

Vijayanagara News: ಗುಡೇಕೋಟೆಯಲ್ಲಿ ಎರಡೇ ಕಾಲುಗಳಿರುವ ಕರುವಿನ ಜನನ

Cow gives birth to unique calf with two legs in Gudekote

ಕೂಡ್ಲಿಗಿ: ನಾಲ್ಕು ಕಾಲುಗಳನ್ನು ಹೊಂದಿರುವ ಪ್ರಾಣಿಗಳನ್ನು ಕಂಡಿದ್ದೇವೆ. ಆದರೆ ಇಲ್ಲೊಂದು ಹಸು (Cow) ಅಪರೂಪ ಹಾಗೂ ವಿಶಿಷ್ಟ ಎಂಬಂತೆ ಎರಡೇ ಕಾಲು ಹೊಂದಿರುವ ಹೆಣ್ಣು ಕರುವಿಗೆ (Calf) ಜನ್ಮ ನೀಡಿದೆ. ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ‌ ಈ ಘಟನೆ ನಡೆದಿದೆ.

ರೈತ ಪುಂಡಿ ವಿಜಯಕುಮಾರ್ ಎಂಬವರಿಗೆ ಸೇರಿದ ಹಸುವೊಂದು ಎರಡೇ ಕಾಲುಗಳಿರೋ ಹೆಣ್ಣುಕರುವಿಗೆ ಜನ್ಮ ನೀಡಿದೆ. ಈ ಕರುವನ್ನು ಎರಡೇ ಕಾಲು ಇರುವುದು ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ. ಸದ್ಯ ಕರು ಹಾಗೂ ಹಸು ಆರೋಗ್ಯವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ: IND vs WI: ವಿಂಡೀಸ್​ ವಿರುದ್ಧ ದಾಖಲೆ ಬರೆದ ಕುಲ್​ದೀಪ್​ ಯಾದವ್​

ಕೆಲವು ವರ್ಷಗಳ ಹಿಂದೆ ತಾಲೂಕಿನ ಚೌಡಪುರ ಗ್ರಾಮದಲ್ಲೂ ಎರಡು ಕಾಲು ಇರುವ ಕರುವಿನ ಜನನವಾಗಿತ್ತು.

Exit mobile version