Site icon Vistara News

Diamond Cross 11: ಸದ್ಯದಲ್ಲೇ ತೆರೆಗೆ ಬರಲಿದೆ ಡೈಮಂಡ್ ಕ್ರಾಸ್ 11 ಸಿನಿಮಾ

Diamond Cross 11 Movie Teaser Released at Patrik Bhavan in Vijayanagara District

ವಿಜಯನಗರ: ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ನಿಂದ ನಿರ್ಮಾಣವಾಗಿರುವ, ರಾಮ್‌ದೀಪ್ ನಿರ್ದೇಶನದ ಡೈಮಂಡ್ ಕ್ರಾಸ್ 11 (Diamond Cross 11) ಸಿನಿಮಾ (Movie) ತೆರೆಗೆ ಬರಲು ಸಿದ್ಧವಾಗಿದ್ದು, ಹೊಸಪೇಟೆ ಉದ್ಯಮಿ ಮನೀಶ್, ನಟ ಮಿತ್ರ ಹಾಗೂ ಅವರ ಸ್ನೇಹಿತರ ಮನೀಶ್ & ಮಿತ್ರ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಮೂಲಕ ಚಿತ್ರ ಬಿಡುಗಡೆ ಆಗುತ್ತಿದೆ.

ವಿಜಯನಗರ ಜಿಲ್ಲೆಯ ಪತ್ರಿಕಾಭವನದಲ್ಲಿ ಸೋಮವಾರ ಡೈಮಂಡ್ ಕ್ರಾಸ್ 11 ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಈ ವೇಳೆ ಹೊಸಪೇಟೆ ಉದ್ಯಮಿ ಮನೀಶ್ ಮಾತನಾಡಿ, ಮೊದಲ ಹೆಜ್ಜೆಯಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿದೆ, ನಿಮ್ಮೆಲ್ಲರ ಸಹಕಾರವಿರಲಿ ಎಂದು ತಿಳಿಸಿದರು.

ಇದನ್ನೂ ಓದಿ: Viral News : 11 ವರ್ಷದ ಬಾಲಕನ ಜೀವ ತೆಗೆದ ಯುಟ್ಯೂಬ್‌ ವಿಡಿಯೊ

ಚಿತ್ರ ನಿರ್ದೇಶಕ ರಾಮ್‌ದೀಪ್ ಮಾತನಾಡಿ, ಇದೊಂದು ಸೈಬರ್ ಕ್ರೈಂ ಕಥಾಹಂದರ ಹೊಂದಿರುವ ಚಿತ್ರವಾಗಿದೆ, ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿದರು.

ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ರಾಮಚಂದ್ರ ಬಾಬು ಬರೆದಿದ್ದು, ಮುಖ್ಯಪಾತ್ರಗಳಲ್ಲಿ ನಟಿ ರೂಪಿಕಾ, ರಜತ್ ಅಣ್ಣಪ್ಪ, ಮನು ಕೆ.ಎಂ ನಟಿಸಿದ್ದಾರೆ, ಸಂತೋಷ್ ರಾಧಾಕೃಷ್ಣನ್ ಛಾಯಾಗ್ರಹಣ – ಸಂಕಲನ ಮಾಡಿದ್ದಾರೆ. ಸಂಗೀತ ನಿರ್ದೇಶನ ಲೇಖನ್ ಹಾಗೂ ಹಿನ್ನೆಲೆ ಸಂಗೀತವನ್ನು ಅನೀಶ್ ನೀಡಿದ್ದಾರೆ ಎಂದು ತಿಳಿಸಿದರು.

ನಟ ಮಿತ್ರ ಮಾತನಾಡಿ, ಮನೀಶ್ & ಮಿತ್ರ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಮೂಲಕ ರಾಮ್‌ದೀಪ್ ನಿರ್ದೇಶನದ “ಡೈಮಂಡ್ ಕ್ರಾಸ್” ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Gold rate today : ಬಂಗಾರ, ಬೆಳ್ಳಿ ದರದಲ್ಲಿ ಯಥಾಸ್ಥಿತಿ

ಕಾರ್ಯಕ್ರಮದಲ್ಲಿ ಜೇಡರಹಳ್ಳಿ ಕೃಷ್ಣಪ್ಪ ಹಾಗೂ ಜೈಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಚಿತ್ರತಂಡದ ಸದಸ್ಯರು ಸಿನಿಮಾ ಕುರಿತು ಮಾತನಾಡಿದರು.

Exit mobile version