ವಿಜಯನಗರ: ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಗಳ (Gram Panchayats) ಅಧ್ಯಕ್ಷ (President), ಉಪಾಧ್ಯಕ್ಷ (Vice president) ಸ್ಥಾನಕ್ಕೆ ನಡೆದ ಚುನಾವಣೆ (Election) ಶಾಂತಿಯುಯವಾಗಿ ಜರುಗಿತು.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆ ನಿನ್ನೆಗಿಂತ ತುಸು ಕಡಿಮೆ, ಬೆಳ್ಳಿಯ ಬೆಲೆಯೂ ಇಳಿಕೆ
ಮೊರಬ ಗ್ರಾಮ ಪಂಚಾಯಿತಿ
ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ದುರುಗಮ್ಮ ಹಾಗೂ ಉಪಾಧ್ಯಕ್ಷರಾಗಿ ಕರಿಯಪ್ಪ ಅವಿರೋಧವಾಗಿ ಅಯ್ಕೆಯಾಗಿದ್ದಾರೆ.
ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮೊರಬ ಗ್ರಾಮದ 1ನೇ ವಾರ್ಡಿನ ಸದಸ್ಯೆ ದುರುಗಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೊರಬನಹಳ್ಳಿ ಗ್ರಾಮದ 3ನೇ ವಾರ್ಡಿನ ಸಿಪಿಎಂ ಪಕ್ಷದ ಸದಸ್ಯ ಕರಿಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಪ್ರತಿಸ್ಪರ್ಧಿಗಳು ಇಲ್ಲದ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಿದ ಇಬ್ಬರೂ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: KL Rahul & Shreyas: ಏಷ್ಯಾಕಪ್ನಿಂದಲೂ ಹೊರಗುಳಿಯಲಿದ್ದಾರೆ ರಾಹುಲ್,ಅಯ್ಯರ್
ಬಾಚಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ
ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡನಹಳ್ಳಿ ಗ್ರಾಮ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯು ಸಿಡಿಪಿಒ ಸುದೀಪ್ ಉಂಕಿ ಚುನಾವಣಾ ಅಧಿಕಾರಿ ಅವರ ನೇತೃತ್ವದಲ್ಲಿ ನಡೆಯಿತು.
ಶಿಕ್ಷಣ ಇಲಾಖೆಯ ಮುಸ್ತಾಕ್ ಹಮದ್, ಪಿಡಿಓ ನಿಂಗಪ್ಪ ಮಾಗಳ ಮತ್ತಿತರರು ಚುನಾವಣಾ ಕಾರ್ಯ ನಿರ್ವಹಿಸಿದರು. ಚುನಾವಣೆ ವೇಳೆ ಒಟ್ಟು 23 ಸದಸ್ಯರು ಹಾಜರಿದ್ದು ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಪ.ಜಾ. ಅಭ್ಯರ್ಥಿ ಮೈಲಮ್ಮ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾಲಕ್ಷ್ಮಿ ಪರಮೇಶಪ್ಪ ಆಯ್ಕೆಯಾಗಿದ್ದಾರೆ.
ಮಾಲವಿ ಗ್ರಾಮ ಪಂಚಾಯಿತಿ
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮ ಪಂಚಾಯಿತಿಗೆ 2ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುಣಾವಣೆ ನಡೆಯಿತು.
ತಹಸೀಲ್ದಾರ್ ಚಂದ್ರಶೇಖರ್ ಗಾಳಿ, ಪಿಡಿಒ ಶ್ರೀಕಾಂತ್ ನಾಯ್ಕ ಚುನಾವಣಾ ಅಧಿಕಾರಿಗಳಾಗಿ ಚುನಾವಣೆ ನಡೆಸಿಕೊಟ್ಟರು. ಚುನಾವಣೆ ವೇಳೆ ಒಟ್ಟು 21 ಸದಸ್ಯರು ಮತದಾನ ಮಾಡಿದರು.
ಇದನ್ನೂ ಓದಿ: Weather Report : 50 ಕಿ.ಮೀ ವೇಗದಲ್ಲಿ ಬೀಸಲಿದೆ ಬಿರುಗಾಳಿ; ಕರಾವಳಿಗೆ ಮಳೆ ಅಲರ್ಟ್
ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪರಿಶಿಷ್ಟ ಜಾತಿ ಮಹಿಳಾ ಅಭ್ಯರ್ಥಿ ಕೊಟ್ರಮ್ಮ ದುರುಗಪ್ಪ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸಾಮಾನ್ಯ ಅಭ್ಯರ್ಥಿ ಮಾಲವಿಯ ಮಂಜುನಾಥ ಆಯ್ಕೆಯಾದರು. ಚುನಾವಣೆಯು ಶಾಂತ ರೀತಿಯಿಂದ ನಡೆದಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.