Site icon Vistara News

Vijayanagara News: ಗೆಲುವಿಗೆ ಎಲ್ಲರೂ ತಂದೆ, ಸೋಲು ಅನಾಥ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು

BJP District Executive Meeting at vijayanagra

ವಿಜಯನಗರ: ಗೆಲುವಿಗೆ (Win) ಎಲ್ಲರೂ ತಂದೆಯಾಗುತ್ತಾರೆ, ಆದರೆ ಸೋಲಿಗೆ ಯಾರೂ ದಿಕ್ಕೇ‌ ಇರುವುದಿಲ್ಲ. ಪ್ರಜಾಪ್ರಭುತ್ವ (Democracy) ವ್ಯವಸ್ಥೆಯಲ್ಲಿ ಗೆಲುವು, ಸೋಲು ಸಾಮಾನ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದನ್ನೂ ಓದಿ: US Presidential Election: ಟ್ರಂಪ್ ಪ್ರೆಸಿಡೆಂಟ್ ಆಗಬಾರ್ದು, ಮಾಜಿ ಬಾಸ್ ವಿರುದ್ಧ ತಿರುಗಿಬಿದ್ದ ಮೈಕ್, ಅಧ್ಯಕ್ಷ ಸ್ಪರ್ಧೆಗೂ ಸೈ!

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯಾದಾಗ ಇಡೀ ದೇಶದಲ್ಲೇ ನಮ್ಮ ಪಕ್ಷ ಎರಡು ಸ್ಥಾನಗಳು ಮಾತ್ರ ಹೊಂದಿತ್ತು. ನಮ್ಮನ್ನು ನೋಡಿ ಅಂದು ಕಾಂಗ್ರೆಸಿಗರು ನಗುತ್ತಿದ್ದರು. ಅಂದು ಹುಡುಕಿ ಹುಡುಕಿ ಅಭ್ಯರ್ಥಿಗಳನ್ನು ಹಾಕುತ್ತಿದ್ದರು. ಆದರೆ‌, ಇಂದು ಇಡೀ ದೇಶದಲ್ಲಿ 300ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದಿಲ್ಲವೆ? ಸೊನ್ನೆಯಿಂದ 300ಕ್ಕೂ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಈ ಸೋಲು ಗೆಲುವಿನ ಮಧ್ಯೆ ಸಂಯಮ ಇರಬೇಕಿದೆ ಎಂದರು.

ಸಂಸದ ವೈ. ದೇವೇಂದ್ರಪ್ಪ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನಾವು ಸೋಲಲು ಯಾವ ಕಾರಣಗಳು ಮುಖ್ಯವಾದವು ಎಂದು ನಮಗೆ ತಿಳಿದಿದೆ. ಎಲ್ಲಿ ಎಡವಿದ್ದೇವೆ, ಯಾಕೆ ಬಿದ್ದಿದ್ದೇವೆ ಎನ್ನುವುದು ಅರಿವಾಗಿದೆ. ನಮ್ಮ ಕೆಲ ತಪ್ಪು ನಿರ್ಧಾರಗಳ ಜತೆಗೆ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳಿಗೆ ಮಾರು ಹೋಗಿದ್ದಾರೆ. ನಮ್ಮ ಪಕ್ಷ ಮುಂಬರುವ ಯಾವುದೇ ಚುನಾವಣೆಯಲ್ಲಿ ಮತ್ತೆ ಮೇಲೆದ್ದು ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ. ಕಾಂಗ್ರೆಸ್‌ನ ಗ್ಯಾರಂಟಿಗಳು ಸಿಗದೇ ಜನ‌ ಭ್ರಮನಿರಸನಗೊಂಡು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದರು.

ಇದನ್ನೂ ಓದಿ: Gold rate today : ಗ್ರಾಹಕರಿಗೆ ಸಿಹಿ ಸುದ್ದಿ, ಬಂಗಾರದ ದರದಲ್ಲಿ 430 ರೂ. ಇಳಿಕೆ

ಹಡಗಲಿ ಶಾಸಕ ಕೃಷ್ಣ ನಾಯ್ಕ್ ಮಾತನಾಡಿ, ನಾನು ಯಾಕಾದರೂ ಈ ರಾಜಕಾರಣಕ್ಕೆ ಬಂದೆ ಎಂದು ಚುನಾವಣೆ ವೇಳೆ ಒಂದು ಕ್ಷಣ ಅನ್ನಿಸಿತ್ತು. ನಾನು ಇಟಲಿಯಲ್ಲಿ ಇದ್ದಾಗ ಎಂ.ಪಿ. ರವೀಂದ್ರ ಅವರು ಜನಸೇವೆಯಲ್ಲಿ ತೊಡಗುವಂತೆ ಪ್ರೇರಣೆ ನೀಡಿದರು. ಅಂದಿನಿಂದ ಹಡಗಲಿ ಕ್ಷೇತ್ರದಲ್ಲಿ ಜನಸವೇವೆಗೆ ತೊಡಗಿದೆ. ನಮ್ಮ ಕ್ಷೇತ್ರದ ನೂರಾರು ಕಾರ್ಯಕರ್ತರು ಕಷ್ಟಪಟ್ಟು ಹಗಲು ರಾತ್ರಿ ದುಡಿದಿದ್ದಾರೆ. ನಾವು ಪಕ್ಷದ ಬೆಂಬಲಿಗರಾಗಬೇಕೆ ಹೊರತು ವ್ಯಕ್ತಿಯ ಬೆಂಬಲಿಗರಾಗಬಾರದು. ಬಿಜೆಪಿಗೆ ಅನೇಕರು ಬರುತ್ತಾರೆ ಹೋಗುತ್ತಾರೆ. ಆದರೆ ಪಕ್ಷ ಮಾತ್ರ ಕೊನೆವರೆಗೂ ಇರುತ್ತದೆ. ಹಾಗಾಗಿ ಪಕ್ಷವೇ ಮುಖ್ಯ ಹೊರತು ವ್ಯಕ್ತಿ ನಿಷ್ಠೆ ಅಲ್ಲ ಎಂಬುದನ್ನು ನಾವೆಲ್ಲ ಮನಸ್ಸಲ್ಲಿ ಇಟ್ಟುಕೊಳ್ಳಬೇಕಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮಾತನಾಡಿ, ಈ ಚುನಾವಣೆಯಲ್ಲಿ ನಮ್ಮ ನಿರೀಕ್ಷೆ ಮೀರಿ ಪಕ್ಷಕ್ಕೆ ಸೋಲಾಗಿದೆ. ಆ ಬೇಸರ ಎಲ್ಲರಿಗೂ ಇದೆ. ನಮ್ಮ‌ ಪಕ್ಷಕ್ಕೆ ಸೋಲಾಗಿದ್ದನ್ನು ನೆನಪಿನಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡದೇ ಇರಲಾಗದು. ಈಗಾಗಲೇ ಸೋಲಿನ ಕಾರಣ ಹುಡುಕಿ ಅವಲೋಕನ ಸಭೆ ನಡೆಸಲಾಗಿದೆ. ಬರಲಿರುವ ಜಿಪಂ, ತಾಪಂ ಚುನಾವಣಾ ನಿಮಿತ್ತ ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಿ ಜಿಪಂ ತಾಪಂ ನಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತೆ ಮಾಡಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: Viral Video: ವನ್ಯಧಾಮದಲ್ಲಿ ಮೂತ್ರಕ್ಕೆಂದು ಕಾಡಿಗೆ ಹೋದ; ಆನೆ ದಾಳಿಗೆ ಹೆದರಿ ಪ್ಯಾಂಟ್‌ ಹಿಡಿದು ಓಡೋಡಿ ಬಂದ!

ಸಭೆಯಲ್ಲಿ ಮಾಜಿ ಶಾಸಕ ಚಂದ್ರ ನಾಯ್ಕ್, ಎಸ್ಟಿ ಮೋರ್ಚಾ ರಾಜ್ಯ ಕೋಶಾಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ, ರಾಘವೇಂದ್ರ, ಜಿಲ್ಲಾ ವಕ್ತಾರ ಅಶೋಕ ಜೀರೆ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ಜಿಲ್ಲಾ ಹಾಗೂ ಮಂಡಲಗಳ ಮಹಿಳಾ ಮೋರ್ಚಾ, ಯುವ ಮೋರ್ಚಾ, ರೈತ ಮೋರ್ಚಾ, ಅಲ್ಪಸಂಖ್ಯಾತ ಮೋರ್ಚಾ, ಎಸ್ಸಿ ಮೋರ್ಚಾಗಳ ಅಧ್ಯಕ್ಷರು, ಮಂಡಲಗಳ ಅಧ್ಯಕ್ಷರು, ರಾಜ್ಯ, ಜಿಲ್ಲಾ ಪದಾಧಿಕಾರಿಗಳು ಸೇರಿ ಹಲವರು ಇದ್ದರು.

Exit mobile version