Site icon Vistara News

Vijayanagara News: ಶ್ರದ್ದೆ, ತಾಳ್ಮೆ, ವಿನಯತೆ, ಪರಿಶ್ರಮದಿಂದ ಯಶಸ್ಸು: ಉಪನ್ಯಾಸಕ ವೀರೇಶ್

Farewell program inauguration at Araseikere Degree College

ಹರಪನಹಳ್ಳಿ: ತಾಲೂಕಿನ ಅರಸೀಕೆರೆ ಗ್ರಾಮದ ಅರಸೀಕೆರೆ, ಹಿಕ್ಕಿಮಗೆರೆ ಅಜ್ಜಪ್ಪ, ಹಾಲಮ್ಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಾರದಾ ಪೂಜೆ ಹಾಗೂ ಬಿ. ಎ., ಬಿ. ಕಾಂ, ತೃತೀಯ ವರ್ಷದ (Final Year Students) ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು (Farewell program) ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉಪನ್ಯಾಸಕ ವೀರೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಶ್ರದ್ದೆ, ತಾಳ್ಮೆ, ವಿನಯತೆ, ಕಠಿಣ ಪರಿಶ್ರಮ, ಒಳ್ಳೆಯ ಗುರಿಯನ್ನು ಇಟ್ಟುಕೊಂಡು ಶಿಕ್ಷಣ ಪಡೆದು, ಒಬ್ಬ ಉತ್ತಮ ಪ್ರಜೆಯಾಗಿ ಉನ್ನತ ಹುದ್ದೆ ಪಡೆದುಕೊಳ್ಳಬಹುದು ಎಂದು ಹೇಳಿದರು.

ಇದನ್ನೂ ಓದಿ: Agriculture APP : ರೈತರಿಗಾಗಿ AI ಆಧಾರಿತ ಆ್ಯಪ್ ಶೀಘ್ರ; ಕೃಷಿ ಇಲಾಖೆಯಿಂದ ಮಹತ್ವದ ಹೆಜ್ಜೆ

ಕಾಲೇಜಿನ ಅಧ್ಯಕ್ಷ ಎ.ಎಚ್.ಪಂಪಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ತಂದೆ, ತಾಯಿಗಳಿಗೆ, ಶಿಕ್ಷಣ ಕಲಿಸಿದ ಗುರುಗಳಿಗೆ, ಕಾಲೇಜಿಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಎಂ.ಸಿ.ಕೆ. ಕಾಲೇಜಿನ ಪ್ರಾಂಶುಪಾಲ ಕುಮಾರ್ ನಾಯ್ಕ್, ಉಪನ್ಯಾಸಕ ಬಾಲಾಜಿ, ಮುಖ್ಯಗುರು ಶಾಂತಕುಮಾರಿ, ಮಾಜಿ ಎಪಿಎಂಸಿ ಅಧ್ಯಕ್ಷ ಎ.ಎಚ್. ನಾಗರಾಜಪ್ಪ ಮಾತನಾಡಿದರು.

ಇದನ್ನೂ ಓದಿ: Contaminated Water: ಚಿತ್ರದುರ್ಗದಲ್ಲಿ ಮತ್ತೊಂದು ಕಲುಷಿತ ನೀರಿನ ದುರಂತ; ವೃದ್ಧ ಸಾವು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಈ ಸಂದರ್ಭದಲ್ಲಿ ಮುಖಂಡರಾದ ಜಿ. ವಿ. ವೆಂಕಟೇಶ್ ಶೆಟ್ರು, ಪೂಜಾರ್ ಚಂದ್ರಪ್ಪ,ಬಿ. ವಿ. ವೆಂಕೋಬಶೆಟ್ರು, ಕನಕನ ಬಸಾಪುರದ ಮಂಜುನಾಥ್, ಷಣ್ಮುಖಪ್ಪ, ಲಕ್ಷ್ಮಿ ನಾರಾಯಣ ಶೆಟ್ಟಿ, ಕೆ.ಡಿ.ಅಂಜಿನಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ. ಚಂದ್ರಪ್ಪ, ಕೆ.ಮಹಾಂತೇಶ್, ಅಜೀಮ್ ಸಾಹೇಬ್, ಪ್ರಾಂಶುಪಾಲ ಎ.ಎಚ್. ಉಮೇಶ್, ಉಪನ್ಯಾಸಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

Exit mobile version