ಹೊಸಪೇಟೆ: ಜಿಲ್ಲೆಯಲ್ಲಿ 22 ಗ್ರಾಮಗಳು ನದಿ ಪಾತ್ರದಲ್ಲಿ (Riverine) ಇದ್ದು, ನದಿ ನೀರು ಹೆಚ್ಚಾದಲ್ಲಿ ಮುಳುಗಡೆಯಾಗುವ (Drowning) ಸಂಭವವಿದೆ. ಅಂತಹ ಗ್ರಾಮಗಳಿಗೆ ಶಾಶ್ವತ ಪರಿಹಾರ (Permanent solution) ಕಂಡುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅವರು ಮಾತನಾಡಿದರು.
ಇದನ್ನೂ ಓದಿ: Rain News: ಹಾವೇರಿಯಲ್ಲಿ ಸಿಡಿಲಿಗೆ ಬಾಲಕ ಗಂಭೀರ; ಶಿವಮೊಗ್ಗ, ರಾಮನಗರ ಸೇರಿ ಹಲವೆಡೆ ಭಾರಿ ಹಾನಿ
ಹೂವಿನಹಡಗಲಿ ತಾಲೂಕಿನಲ್ಲಿ 16 ಗ್ರಾಮಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 22 ಗ್ರಾಮಗಳು ನದಿ ಪಾತ್ರಗಳಲ್ಲಿ ಬರುತ್ತವೆ. ಹೂವಿನಹಡಗಲಿಯ ಕುರುವತ್ತಿ ಹಾಗೂ ಬ್ಯಾಲಹುಣಸಿ ಗ್ರಾಮಗಳಲ್ಲಿ ನದಿ ನೀರು ಹೆಚ್ಚಾದಾಗ ಹಲವು ಮನೆಗಳು ಮುಳುಗಡೆಯಾಗುತ್ತವೆ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.
ಇದನ್ನೂ ಓದಿ: India-China talks : ಗಡಿಯಲ್ಲಿ ಚೀನಾ ನಿರ್ಮಿಸಿದ ಏರ್‌ಫೀಲ್ಡ್, ರೈಲ್ವೆ, ಕ್ಷಿಪಣಿ ನೆಲೆಗಳ ಚಿತ್ರ ಸೆರೆಹಿಡಿದ ಭಾರತದ ಉಪಗ್ರಹ
ಮುಂಗಾರು ಮಳೆ ಶೀಘ್ರದಲ್ಲಿ ಆರಂಭವಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಸಂಬಂಧಪಟ್ಟ ಇಲಾಖಾ ವ್ಯಾಪ್ತಿಯಲ್ಲಿ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಸಹಾಯವಾಣಿ ಆರಂಭಿಸಿ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಹಾನಿಯಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಜಂಟಿ ಸಮೀಕ್ಷೆ ಕೈಗೊಂಡು ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಿದ ನಂತರ ಬೆಳೆ ಪರಿಹಾರ ತಂತ್ರಾಂಶದಲ್ಲಿ ನಮೂದು ಮಾಡಬೇಕು ಎಂದು ಅವರು ಸೂಚಿಸಿದರು.
ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಬರುವ 14ನೇ ವಾರ್ಡ್ ಇಂದಿರಾ ನಗರದ ತಗ್ಗು ಪ್ರದೇಶದಲ್ಲಿ ನಿಲ್ಲುವ ಮಳೆ ನೀರಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಲ್ಲಿಯ ನಿವಾಸಿಗಳಿಗೆ ನೋಟಿಸ್ ನೀಡಿ ಸಭೆ ಕೈಗೊಳ್ಳಬೇಕು ಜತೆಗೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಚರಂಡಿ ವ್ಯವಸ್ಥೆ ದುರಸ್ತಿ ಕೈಗೊಂಡು ಸ್ವಚ್ಛಗೊಳಿಸಬೇಕು ಎಂದು ಡಿಸಿ ಸೂಚನೆ ನೀಡಿದರು.
ಇದನ್ನೂ ಓದಿ: MS Dhoni: ಧೋನಿ ರಾಜಕೀಯ ಪ್ರವೇಶಕ್ಕೆ ಸಲಹೆ ನೀಡಿದ ಆನಂದ್ ಮಹೀಂದ್ರಾ
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.