ಹರಪನಹಳ್ಳಿ: ತಾಲೂಕಿನ ಅರಸಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳೂರಿನ ಶ್ರೀನಿವಾಸ ಆಸ್ಪತ್ರೆ ಹಾಗೂ ವೈ.ಡಿ ಅಣ್ಣಪ್ಪ ಸಮಾಜಮುಖಿ ಟ್ರಸ್ಟ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ (Free health checkup) ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಹೃದ್ರೋಗ, ಕಣ್ಣು, ಕಿವಿ ಮೂಗು ಗಂಟಲು, ಕೀಲು ಮೂಳೆ ತಜ್ಞರು, ಸ್ತ್ರೀರೋಗ ನುರಿತ ತಜ್ಞರು ಭಾಗವಹಿಸಿದ್ದರು.
ಶಿಬಿರದಲ್ಲಿ ಅರಸೀಕೆರೆ, ಹೊಸಕೋಟೆ, ಕಂಚಿಕೆರೆ, ತವಡೂರು, ಗ್ರಾಮ ಪಂಚಾಯತಿ ವ್ಯಾಪ್ತಿಯ 567 ಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆಗೆ ಒಳಪಟ್ಟರು.
ಇದನ್ನೂ ಓದಿ: Gruha lakshmi Scheme : 2000 ರೂ. ಪಡೆಯಲು ನೀವು ಅರ್ಹರಾ? ಅರ್ಜಿ ಹಾಕೋದೆಲ್ಲಿ? ಇಲ್ಲಿ ಚೆಕ್ ಮಾಡಿಕೊಳ್ಳಿ
ಶಿಬಿರ ಅಯೋಜಕ ಶ್ರೀನಿವಾಸ ನಾಯಕ ಮಾತನಾಡಿ, ಶಿಬಿರಗಳ ಆಯೋಜನೆ ಗ್ರಾಮೀಣ ಭಾಗದ ಜನತೆಗೆ ವರವಾಗಿದೆ. ನೂರಾರು ಮಂದಿ ತಪಾಸಣೆಗೆ ಒಳಪಟ್ಟಿದ್ದರು. 150 ಕ್ಕೂ ಹೆಚ್ಚಿನ ರೋಗದಿಂದ ಬಳಲುತ್ತಿದ್ದವರನ್ನು ಉಚಿತವಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಾಳೆ ತೆಲಗಿ ಗ್ರಾಮದಲ್ಲಿ ಶಿಬಿರ ಆಯೋಜನೆ ಮಾಡಲಾಗಿದ್ದು, ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಾ.ಪೂಜಾ,ಡಾ. ಕಾರ್ತಿಕ್ ಶರವರಿ, ಶರಣ್, ಪ್ರತಿಕ್, ಮಲ್ಲಿಕಾರ್ಜುನ, ಸಾತ್ವಿಕ್ ಇದ್ದರು.