ವಿಜಯನಗರ: ಆರೋಗ್ಯ (Health) ಸದೃಢವಾಗಿದ್ದರೆ ದೇಶದ ಅಭಿವೃದ್ಧಿ (Development) ಸಾಧ್ಯವಾಗುತ್ತದೆ ಎಂದು ಎಸ್.ಎಲ್.ಆರ್ ಮೆಟಾಲಿಕ್ಸ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ರಾಘವಾಂಕ ಹೇಳಿದರು.
ಮರಿಯಮ್ಮನಹಳ್ಳಿ ಹೋಬಳಿಯ ವರದಾಪುರ ಗ್ರಾಮದಲ್ಲಿ ಎಸ್.ಎಲ್.ಆರ್ ಮೆಟಾಲಿಕ್, ಮರಿಯಮ್ಮನಹಳ್ಳಿ ಮತ್ತು ಮಗಿಮಾವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಆರೋಗ್ಯ ಮಿತ್ರ ಯೋಜನೆ ಅಡಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದನ್ನೂ ಓದಿ:PM Modi US Visit: ಮೋದಿ ಸುದ್ದಿಗೋಷ್ಠಿಗೆ ಕೂಡಿಬಂತು ಕಾಲ; ಎಷ್ಟು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ ಗೊತ್ತಾ?
ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ, ಸರ್ಕಾರ ಮತ್ತು ಸಂಘ ಸಂಸ್ಥೆಗಳಿಂದ ಆಯೋಜನೆ ಮಾಡುವ ಇಂತಹ ಉಚಿತ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಗಿಮಾವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನುಷಾ ಮಾತನಾಡಿ, ಸರ್ಕಾರದಿಂದ ಆರೋಗ್ಯದ ಸೌಲಭ್ಯಗಳು ಸಾಕಷ್ಟಿವೆ. ಅವುಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: KFCSC Recruitment 2023 : ಆಹಾರ ನಿಗಮದಲ್ಲಿ 386 ಹುದ್ದೆಗಳಿಗೆ ನೇಮಕ; ವಿದ್ಯಾರ್ಹತೆ ಏನು? ಸ್ಪರ್ಧಾತ್ಮಕ ಪರೀಕ್ಷೆ ಹೇಗೆ?
ಈ ಸಂದರ್ಭದಲ್ಲಿ ಮೈರಾಡ ಸಂಸ್ಥೆಯ ಮುಖ್ಯಸ್ಥ ನಟರಾಜ್, ಅಶೋಕ, ಎಸ್.ಎಲ್.ಆರ್ ಕಂಪನಿಯ ಸಿಬ್ಬಿಂದಿ ವಿಠ್ಠಲ್, ಪ್ರಕಾಶ್ ನಾಯ್ಕ್, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.