ವಿಜಯನಗರ: ಜಿ-20 ಶೃಂಗಸಭೆಯ (G-20 Summit) ಹಿನ್ನಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಷಣ (Speech) ಮತ್ತು ಪ್ರಬಂಧ ಸ್ಪರ್ಧೆಯನ್ನು (Essay Competition) ಶನಿವಾರ ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಪ್ರೌಢಶಾಲೆಯ ಸಭಾಂಗಣದಲ್ಲಿ ನೋಡೆಲ್ ಅಧಿಕಾರಿ ಮಹಮ್ಮದ್ ಜಬೀವುಲ್ಲಾ ಅನ್ಸಾರಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಹೊಸಪೇಟೆಯ ಸಿದ್ದಪ್ಪ ಸರ್ಕಾರಿ ಆದರ್ಶ ವಿದ್ಯಾಲಯ, ಜ್ಯೋತಿ ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಘವೇಂದ್ರ ಪಾಟೀಲ್ ಮಾಜಿ (ಪುರಸಭೆ) ಸರ್ಕಾರಿ ಪ್ರೌಢಶಾಲೆ, ಕಾರಿಗನೂರಿನ ಶಿವಪ್ರಸಾದ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಇದನ್ನೂ ಓದಿ: CM Siddaramaiah : ಹೊರಗುತ್ತಿಗೆಯಲ್ಲೂ ಶೀಘ್ರ ಮೀಸಲು ಜಾರಿಗೆ ಸಿದ್ದರಾಮಯ್ಯ ಚಿಂತನೆ
ಭಾಷಣ ಸ್ವರ್ಧೆಯಲ್ಲಿ 19 ವಿದ್ಯಾರ್ಥಿಗಳು ಹೆಸರನ್ನು ನೊಂದಣಿ ಮಾಡಿಕೊಂಡಿದ್ದರು.
ಮಹಿಳಾ ಸಮಾಜ ಪ್ರೌಢಶಾಲೆಯ ಐಶ್ವರ್ಯ ಪ್ರಥಮ ಸ್ಥಾನ, ಆದರ್ಶ ವಿದ್ಯಾಲಯದ ಎಸ್.ಪ್ರಿಯ ಹಾಗೂ ಎಲ್‌ಎಫ್‌ಎಸ್ ಪ್ರೌಢಶಾಲೆಯ ಶ್ರೇಯಸ್ಕಾ ದ್ವಿತೀಯ ಸ್ಥಾನ ಹಾಗೂ ವ್ಯಾಸನಕೆರೆಯ ಸ್ಮಯೋರ್ ಪ್ರೌಢಶಾಲೆಯ ಬಿ.ಎಂ.ಎಸ್. ಅಮೂಲ್ಯ ತೃತೀಯ ಸ್ಥಾನವನ್ನು ವಿಜೇತರಾಗಿದ್ದಾರೆ.
ಇದನ್ನೂ ಓದಿ: Kannada New Movie: ʻಅಪರೂಪʼ ಸಿನಿಮಾ ತೆರೆಗೆ ಬರಲು ಸಜ್ಜು; ಡಾಲಿ ಧನಂಜಯ್ ಸಾಥ್!
ಪ್ರಬಂಧ ಸ್ವರ್ಧೆಯಲ್ಲಿ 19 ವಿದ್ಯಾರ್ಥಿಗಳು ಹೆಸರನ್ನು ನೊಂದಣಿ ಮಾಡಿಕೊಡಿದ್ರು. ಕಂಪ್ಲಿಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಚ್.ಅನುಷಾ ಸಾಹಿತಿ ಪ್ರಥಮ ಸ್ಥಾನ, ವ್ಯಾಸನಕೆರೆಯ ಸ್ಮಯೋರ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಂ. ಮನುಶ್ರೀ ದ್ವಿತೀಯ ಸ್ಥಾನ, ಆದರ್ಶ ವಿದ್ಯಾಲಯದ ಚಿನ್ಮಯಿ ತೃತೀಯ ಸ್ಥಾನದಲ್ಲಿ ವಿಜೇತರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಮಾಹಿತಿ ನೀಡಿದರು.