ವಿಜಯನಗರ: ಭಾರತ ದೇಶದ ಪ್ರಗತಿ (Progress) ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ (Development) ಜಿ-20 ಶೃಂಗಸಭೆ (G 20 summit) ಪೂರಕವಾಗಲಿದೆ. ಹಾಗಾಗಿ ಈ ಸಭೆಯ ಮಹತ್ವವನ್ನು ಸಾರ್ವಜನಿಕರು ಹಾಗೂ ಶಿಕ್ಷಣಪ್ರೇಮಿಗಳು ಅರಿಯಬೇಕು ಎಂದು ವಿಜಯನಗರ ಡಿಡಿಪಿಐ ಜಿ. ಕೊಟ್ರೇಶ್ ಹೇಳಿದರು.
ನಗರದ ಟಿಬಿಡ್ಯಾಂನ ಕೇಂದ್ರಿಯ ವಿದ್ಯಾಲಯದಲ್ಲಿ ಬುಧವಾರ ನಡೆದ ಜಿ-20 ಶೃಂಗಸಭೆಯ ಪೂರ್ವಸಿದ್ಧತಾ ಸಭೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Free Bus Service : 11 ತಿಂಗಳ ಮಗುವನ್ನು ಬಿಟ್ಟು ಪ್ರಿಯಕರನ ಬಳಿ ಓಡಿ ಬಂದ ಮಹಿಳೆ, ಇದಕ್ಕಿದೆ ಫ್ರೀ ಬಸ್ ಕನೆಕ್ಷನ್!
ಕರ್ನಾಟಕ ರಾಜ್ಯದಲ್ಲಿ 14 ಕಡೆ ಜಿ-20 ಶೃಂಗ ಸಭೆ ನಡೆಯಲಿದೆ. ಬೆಂಗಳೂರಿನಲ್ಲಿ 11, ಮೈಸೂರಿನಲ್ಲಿ ಒಂದು ಮತ್ತು ಹಂಪಿಯಲ್ಲಿ ಎರಡು ಸಭೆ ನಡೆಯಲಿದೆ. ಅದರಲ್ಲೂ ಹಂಪಿಯಲ್ಲಿ ನಡೆಯುವ ಸಭೆ ಮಹತ್ವದ ಸಭೆಯಾಗಿದೆ. ಈ ಸಭೆಯಲ್ಲಿ ಪ್ರಧಾನಿಗಳಿಗೆ ವರದಿ ಮಾಡುವ 20 ರಾಷ್ಟ್ರಗಳ 200ಕ್ಕೂ ಅಧಿಕ ಅತ್ಯುನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಹಂಪಿ ಪ್ರದೇಶದಲ್ಲಿ ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತ ಅತ್ಯುತ್ತಮ ಆತಿಥ್ಯ ನೀಡಲು ಸಕಲ ಸಿದ್ಧತೆ ಮಾಡುತ್ತಿದೆ. ಜತೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ ಎಂದರು.
ಕೇಂದ್ರಿಯ ವಿದ್ಯಾಲಯದ ಪ್ರಾಚಾರ್ಯ ಕಮಲೇಶ್ ಕುಮಾರ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ತಮಿಳುನಾಡು ಬಂಧಿತ ಸಚಿವನಿಗೆ ಅರ್ಜೆಂಟ್ ಬೈಪಾಸ್ ಸರ್ಜರಿ; ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಪತ್ನಿ
ಅಜೀಂ ಫೌಂಡೇಶನ್ ನ ಮಣಿಕಂಠ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದರು. ಬಿಆರ್‌ಪಿ ಟಿ. ಕೆ. ರೂಪಾ, ಶಿಕ್ಷಕ ಮಲ್ಲಿಕೇಶಿ ಕೆ.ಬಿ. ಸೇರಿದಂತೆ ವಿವಿಧ ಶಾಲೆಗಳ 115 ಶಿಕ್ಷಕರು ಹಾಗು ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.