ವಿಜಯನಗರ: ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ (Hampi Sri Virupaksheeshwara Temple) ಬಳಿ ಪ್ರವಾಸಿಗರೊಬ್ಬರು (Tourist) ಕಳೆದುಕೊಂಡಿದ್ದ ಬ್ಯಾಗ್‌ಅನ್ನು ಹಂಪಿಯ ಗೈಡ್ ಈರಣ್ಣ ಪೂಜಾರಿ ಅವರು ಪೊಲೀಸರ ನೆರವಿನೊಂದಿಗೆ ಮಹಿಳೆಗೆ ಬ್ಯಾಗ್ (Bag) ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ: Book release : ಜ.5 ಕ್ಕೆ ಗೀತ ಪ್ರೀತಿ ಗ್ರಂಥ ಲೋಕಾರ್ಪಣೆ
ಮುಂಬೈ ಮೂಲದ ಶೃತಿ ಶಾ ಎಂಬ ಪ್ರವಾಸಿಗರೊಬ್ಬರು ಹಂಪಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಹಂಪಿ ವಿರೂಪಾಕ್ಷ ದೇವಾಲಯದ ಬಳಿ ಬ್ಯಾಗ್ ತೆಗೆದುಕೊಳ್ಳುವುದರನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದಾರೆ. ಸರಿಸುಮಾರು ಅರ್ಧ ಗಂಟೆ ಕಳೆದರೂ ಬ್ಯಾಗ್ ಹತ್ತಿರ ಯಾರೊಬ್ಬರು ಸುಳಿಯಲೇ ಇಲ್ಲ. ಇದನ್ನು ಗಮನಿಸಿದ ವಿರೂಪಾಕ್ಷ ದೇಗುಲ ಆಡಳಿತ ಮಂಡಳಿ ಮತ್ತ ಸ್ಥಳೀಯ ಪ್ರವಾಸಿ ಮಾರ್ಗದರ್ಶಿ ಈರಣ್ಣ ಪೂಜಾರಿ ಬ್ಯಾಗ್ ಕಂಡ ಕೂಡಲೇ ಸ್ಥಳೀಯ ವಾಟ್ಸಾಪ್ ಗ್ರೂಪ್‌ಗಳಿಗೆ ಪ್ರವಾಸಿಗರು ಬ್ಯಾಗ್ ಬಿಟ್ಟು ಹೋಗಿರುವ ಮಾಹಿತಿ ಹಾಕಿದ್ದಾರೆ. ಜತೆಗೆ ಸ್ಥಳೀಯ ಪೊಲೀಸ್ ಠಾಣೆಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಅದರ ಜತೆಗೆ ಹಂಪಿಯ ವಿರೂಪಾಕ್ಷೇಶ್ವರ ದೇಗುಲದಲ್ಲಿ ಯಾರಾದರೂ ಬ್ಯಾಗ್ ಕಳೆದುಕೊಂಡಿದ್ದೀರಾ..? ಗೊತ್ತಾದಲ್ಲಿ ಸ್ಥಳೀಯ ಪೊಲೀಸರು, ವಿರೂಪಾಕ್ಷ ದೇವಾಲಯದ ಆಡಳಿತ ಮಂಡಳಿಯವರನ್ನು ಸಂಪರ್ಕಿಸಿ ಎಂದು ಸಂದೇಶ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: Winter Shawl Styling: ಚಳಿಗಾಲದಲ್ಲಿ ಶಾಲನ್ನು ಹೀಗೆ ಸ್ಟೈಲಿಂಗ್ ಮಾಡಿ ನೋಡಿ!
ಕೊನೆಗೆ ಆಟೋ ಹತ್ತುವಾಗ ತನ್ನ ಬ್ಯಾಗ್ ನೆನಪಾಗಿ ಓಡಿ ಬಂದ ಪ್ರವಾಸಿ ಯುವತಿ ಶೃತಿ ಶಾ ಅವರಿಗೆ ಸ್ಥಳೀಯ ಹಂಪಿಯ ಪ್ರವಾಸಿ ಮಾರ್ಗದರ್ಶಿ ಈರಣ್ಣ ಪೂಜಾರಿ, ಹಂಪಿ ಪೊಲೀಸ್ ಠಾಣೆಯ ಪೇದೆ ಅಂಜಿನೆಪ್ಪ ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ಬ್ಯಾಗ್ ಮರಳಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಬ್ಯಾಗ್ ಮರಳಿ ಪಡೆದ ಪ್ರವಾಸಿ ಯುವತಿ ಶೃತಿ ಶಾ ಧನ್ಯವಾದ ತಿಳಿಸಿದ್ದಾರೆ.