Site icon Vistara News

Vijayanagara News : ವಿಜಯನಗರದಲ್ಲಿ ಅಂಜುಮನ್ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭ

Inauguration of Anjuman Free Computer Training Centre at vijayanagara

ಹೊಸಪೇಟೆ: ನಗರದ ಅಂಜುಮನ್ ಶಾದಿಮಹಲ್ ಕಚೇರಿ ಆವರಣದಲ್ಲಿ ಸ್ಥಳೀಯ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ ವತಿಯಿಂದ ಅಂಜುಮನ್ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರದ (Free Computer Training Centre) ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಅಂಜುಮನ್ ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ದಾನಿಗಳು, ಸಮಾಜಸೇವಕ ಶ್ರೀನಿವಾಸ್ ರಾವ್ ಉದ್ಘಾಟಿಸಿದರು.

ಇದನ್ನೂ ಓದಿ: Odisha Train Accident: ಹೌರಾದಿಂದ ವಾಪಸ್ಸಾಗಲು ರಾಜ್ಯದ 31 ವಾಲಿಬಾಲ್‌ ಕ್ರೀಡಾಪಟುಗಳ ಪರದಾಟ

ಬಳಿಕ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಂಪ್ಯೂಟರ್ ಜ್ಞಾನ ಅತೀ ಅವಶ್ಯಕ. ಹೀಗಾಗಿ ಗ್ರಾಮೀಣ ಹಾಗೂ ನಗರ ಭಾಗದ ಎಲ್ಲಾ ಧರ್ಮ, ಜಾತಿ, ಲಿಂಗ – ಭೇದ ಭಾವವಿಲ್ಲದೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಜುಮನ್ ಸಂಸ್ಥೆಯು ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಆರಂಭಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಸಮಾಜಮುಖಿ ಕೆಲಸಗಳಿಗೆ ಎಂದಿಗೂ ನಮ್ಮಿಂದ ಸಹಾಯ ಸಹಕಾರ ಇರುತ್ತದೆ ಎಂದು ಅವರು ಹೇಳಿದರು.

ಅಂಜುಮನ್ ಕಮಿಟಿಯ ಅಧ್ಯಕ್ಷ ಎಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಕಮಿಟಿಯು ಈಗಾಗಲೇ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಹೊಸಪೇಟೆ ಭಾಗದ ಎಸ್ಎಸ್ಎಲ್‌ಸಿ ಮುಗಿಸಿದ ಎಲ್ಲಾ ಜಾತಿ ಧರ್ಮಗಳ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಕೊಡಿಸಬೇಕೆನ್ನುವ ಮಹದಾಸೆಯನ್ನು ಸಂಸ್ಥೆಯು ಹೊಂದಿದ್ದು, ಹೀಗಾಗಿ ಬಡ ವಿದ್ಯಾರ್ಥಿಗಳ ಬದುಕು ರೂಪಿಸುವ ಸಲುವಾಗಿ ಬೇಸಿಕ್ ಕಂಪ್ಯೂಟರ್, ಇಂಗ್ಲೀಷ್ ಮತ್ತು ಕನ್ನಡ ನುಡಿ ಟೈಪಿಂಗ್, ಎಂಎಸ್ ವರ್ಡ್, ಎಂ ಎಸ್ ಎಕ್ಸೆಲ್, ಇಂತಹ ತರಬೇತಿ ನೀಡಲು ಸಂಸ್ಥೆಯು ಮುಂದಾಗಿದೆ.

ಕಮಿಟಿಯು ಕಂಪ್ಯೂಟರ್ ತರಬೇತಿಯನ್ನು ಅಚ್ಚುಕಟ್ಟಾಗಿ ನೀಡುವ ಮೂಲಕ ವಿದ್ಯಾರ್ಥಿಗಳ ಬದುಕು ಬದಲಿಸುವ ಕೆಲಸ ಮಾಡಲಿದೆ. ಹಾಗಾಗಿ ಎಸ್ಎಸ್ಎಲ್‌ಸಿ ನಂತರದ ಎಲ್ಲಾ ವಿದ್ಯಾರ್ಥಿಗಳು ತರಬೇತಿಯ ಸದಾವಕಾಶವನ್ನು ಪಡೆದುಕೊಳ್ಳಲು ಕರೆ ನೀಡಿದರು. ಹೆಚ್ಚಿನ ಮಾಹಿತಿಗಾಗಿ ಅಂಜುಮನ್ ಕಚೇರಿಗೆ ಸಂಪರ್ಕಸಬಹುದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: World Bank President : ವಿಶ್ವಬ್ಯಾಂಕ್‌ ಅಧ್ಯಕ್ಷರಾಗಿ ಭಾರತೀಯ ಮೂಲದ ಅಜಯ್‌ ಬಂಗಾ ಅಧಿಕಾರ ಸ್ವೀಕಾರ

ಕಾರ್ಯಕ್ರಮದಲ್ಲಿ ಸಮಾಜಸೇವಕರು ಹಾಗು ದಾನಿಗಳಾದ ಅತೀಕ್ ಅಹಮದ್, ರವಿಶಂಕರ್, ಶಾಹೀದ್, ಹೈದರ್‌ಅಲಿ, ತನ್ವೀರ್, ಸತ್ಯನಾರಾಯಣ ಹಾಗು ಅಂಜುಮನ್ ಕಮಿಟಿಯ ಉಪಾಧ್ಯಕ್ಷ ಎಂ ಫಿರೋಜ್ ಖಾನ್, ಕಾರ್ಯದರ್ಶಿ ಎಂ.ಡಿ.ಅಬೂಬಕ್ಕರ್ ಮತ್ತು ಕಮಿಟಿಯ ಪದಾಧಿಕಾರಿಗಳು, ಸದ್ಯಸರು ಹಾಗೂ ಸಮುದಾಯದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.

Exit mobile version