Site icon Vistara News

Vijayanagara News: ಕೂಡ್ಲಿಗಿಯಲ್ಲಿ ನೂತನ ಸಸ್ಯೋದ್ಯಾನ ಉದ್ಘಾಟನೆ

Kudligi MLA Dr. N.T. Srinivas Inauguration of new botanical garden

ಕೂಡ್ಲಿಗಿ: ಜೀವ ಸಂಕುಲಗಳು ಉಳಿದು ಅರಳಬೇಕಾದರೆ ಹಸಿರುಮಯ ವಾತಾವರಣ (Green atmosphere) ತುಂಬಾ ಮುಖ್ಯವಾದುದು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ತಿಳಿಸಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪಟ್ಟಣದ ಹೊರವಲಯದ ಚೋರುನೂರು ರಸ್ತೆಯಲ್ಲಿರುವ ನೂತನ ಸಸ್ಯೋದ್ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ: Congress Guarantee: ಸೇವಾ ಸಿಂಧುಗೆ ʼಗ್ಯಾರಂಟಿʼ ಲೋಡ್‌ ಆತಂಕ: ಕೋಟ್ಯಂತರ ಜನರ ಅರ್ಜಿ ಭಾರ ತಡೆಯಬಲ್ಲದೇ?

ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಸಸ್ಯೋದ್ಯಾನವು ಲೋಕಾರ್ಪಣೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಇಲ್ಲಿನ ವಿಶೇಷತೆಯ ಪಿರಾಮಿಡ್ ಯೋಗ ಧ್ಯಾನ ಕೇಂದ್ರವನ್ನು ಸ್ಥಾಪಿಸಿರುವುದರಿಂದ ಪಟ್ಟಣದ ಹಿರಿಯರಿಗೆ ಚೈತನ್ಯದಾಯಕ ವಾತವರಣ ಕಲ್ಪಿಸಲಾಗಿದೆ. ಕಿರಿಯರಿಗೆ ದೈಹಿಕ ಚಟುವಟಿಕೆಯ ಪೂರಕವಾಗಿರುವ ಜಾರು ನಿರ್ಮಾಣ, ಉಯ್ಯಾಲೆ ಇತ್ಯಾದಿಗಳನ್ನು ನಿರ್ಮಿಸಿರುವುದರಿಂದ ಮಕ್ಕಳಿಗೆ ಖುಷಿಯಾಗಿದೆ. ಅಲ್ಲದೆ, ಇದು ನವ ಉಲ್ಲಾಸವನ್ನೂ ತರುತ್ತದೆ ಎಂದರು. ಕಾರ್ಯಕ್ರಮದಲ್ಲಿ ಡಾ. ಎನ್.ಟಿ. ಪುಷ್ಪಾ ಶ್ರೀನಿವಾಸ್‌ ಮಾತನಾಡಿದರು.

ಇದನ್ನೂ ಓದಿ: Sara Ali Khan: ಶುಭ್‌ಮನ್ ಗಿಲ್ ಜತೆ ಡೇಟಿಂಗ್, ಕೂನೆಗೂ ಉತ್ತರ ಕೊಟ್ಟರಾ ಸಾರಾ

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಎಂ. ಗುರುಸಿದ್ಧನಗೌಡ, ಕೋಗಳಿ ಮಂಜುನಾಥ, ಉದಯಜನ್ನು, ಜಯರಾಮ್ ನಾಯಕ, ಮರುಳಸಿದ್ಧಪ್ಪ, ಅಶ್ವಮೇಧ ಗ್ರೂಪ್ಸ್‌ನ ಟಿ.ಜಿ. ಮಲ್ಲಿಕಾರ್ಜುನಗೌಡ, ಜಿಲಾನ್ ಸೇರಿದಂತೆ ಅರಣ್ಯಾಧಿಕಾರಿಗಳು, ಆದರ್ಶ ಶಾಲೆಯ ಮುಖ್ಯಗುರುಗಳು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.

Exit mobile version