ಕೂಡ್ಲಿಗಿ: ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಅಂತಾರಾಷ್ಟ್ರೀಯ ಯೋಗ ದಿನ (International Yoga Day) ಆಚರಿಸಲಾಯಿತು.
ವಿಸ್ತಾರ ನ್ಯೂಸ್, ಕಾಲೇಜಿನ ಎನ್‌ಎಸ್‌ಎಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್, ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಇದನ್ನೂ ಓದಿ: Video Viral: ಉಚಿತ ಬಸ್‌ನಲ್ಲಿ ಹೆಚ್ಚಿದ ಮಹಿಳೆಯರ ʼಶಕ್ತಿʼ; ಡ್ರೈವರ್ ಸೀಟ್‌ನಿಂದಲೇ ಹತ್ತಿದ ನಾರಿಯರು!
ಬಳಿಕ ಮಾತನಾಡಿದ ಅವರು, ಉತ್ತಮ ಆರೋಗ್ಯ ಮತ್ತು ಸದಾ ಸಕ್ರಿಯವಾಗಿರಲು ಯೋಗಾಭ್ಯಾಸ ಬಹಳ ಸಹಾಯಕವಾಗುತ್ತದೆ, ಯೋಗದಿಂದ ತಾಳ್ಮೆ, ಶಾಂತಿ, ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯೆ ಡಾ. ಟಿ. ಕೊತ್ಲಮ್ಮ ಮಾತನಾಡಿ, ಯೋಗ ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲದೇ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತದೆ. ಯೋಗದ ಮೂಲಕ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವ ಮೂಲಕ ರಕ್ತಪರಿಚಲನೆ ಉತ್ತಮಗೊಂಡು ಹಲವು ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದರು.
ಇದನ್ನೂ ಓದಿ:PM Modi US Visit: ಯೋಗ ಎಂದರೆ ಒಗ್ಗಟ್ಟು, ಯೋಗ ಸಾರ್ವತ್ರಿಕ, ಇದು ಜೀವನ ವಿಧಾನ; ವಿಶ್ವಸಂಸ್ಥೆಯಲ್ಲಿ ಮೋದಿ ಮೋಡಿ
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗೌಡ್ರು ಬಸವರಾಜ, ಶ್ರೀನಿವಾಸ, ರಾಜಾಭಕ್ಷಿ, ಸುಮ, ಎ.ಸುಮ ಟಿ.ರಾಘವೇಂದ್ರ, ವಿವೇಕಾನಂದ, ಹೂಲೆಪ್ಪ, ಮುರಳೀಧರ, ಹೆಗ್ಗಪ್ಪಹಳ್ಳಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಕ್ರಪ್ಪ ರಡ್ಡೇರ್ ನಿರೂಪಿಸಿದರು.
ಕೂಡ್ಲಿಗಿಯ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಯೋಗ ದಿನ ಆಚರಣೆ
ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಬುಧವಾರ ಗಾಂಧಿ ಸ್ಮಾರಕ ಸಮಿತಿ, ಮೈದಾನ ಗೆಳೆಯರ ಬಳಗ, ಕನ್ನಡ ಸಾಹಿತ್ಯ ಪರಿಷತ್ತು, ಪತಂಜಲಿ ಯೋಗ ಸಮಿತಿ, ವಿಸ್ತಾರ ನ್ಯೂಸ್, ಇತರೆ ಸಂಘಟನೆಯ ಸಹಯೋಗದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಸಸಿಗೆ ನೇರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಯೋಗ ಮಾತೆ ಬಿ.ಗೌರಮ್ಮ ಒಂದು ಗಂಟೆಗಳ ಕಾಲ ಸಾರ್ವಜನಿಕರಿಗೆ ಯೋಗಭ್ಯಾಸ ಮಾಡಿಸಿದರು. ಈ ವೇಳೆ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಪಿ.ಶಿವರಾಜ್, ಕಾರ್ಯದರ್ಶಿ ನಾಗರಾಜ ಕೊಟ್ರಪ್ಪನವರ್, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ, ಜೆಸಿಐ ಗೋಲ್ಡನ್ ಅಧ್ಯಕ್ಷ ಶ್ರೀಧರ ರಾಯ್ಕರ್, ತಾಲೂಕು ದೈಹಿಕ ನಿರ್ದೇಶಕ ಬಿ.ಮಂಜುನಾಥ , ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರೇಶ್ ಅಂಗಡಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ. ಸಿದ್ದರಾಧ್ಯ,ಪತಂಜಲಿ ಯೋಗ ಸಮಿತಿಯ ಸುಮಾ, ಪ್ರಾಚಾರ್ಯೆ ಟಿ.ಕೊತ್ಲಮ್ಮ, ಟಿ.ಒ.ಕೃಷ್ಣ, ಬಿಸಿಎಂ ಅಧಿಕಾರಿ ಪಂಪಾಪತಿ ಸೇರಿದಂತೆ ಅನೇಕರು ಇದ್ದರು.
ಕೊಟ್ಟೂರಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನ
ಕೊಟ್ಟೂರು ತಾಲೂಕಿನ ಕೊಟ್ಟೂರೇಶ್ವರ ಕಾಲೇಜಿನ ಆವರಣದಲ್ಲಿ ವಿಸ್ತಾರ ನ್ಯೂಸ್ ಹಾಗೂ ಹಸಿರು ಹೊನಲು ಸೇವಾ ಸಂಸ್ಥೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಮತ್ತು ಹಸಿರು ಹೊನಲು ಸೇವಾ ಸಂಸ್ಥೆಯ ಬಂಜಾರ ನಾಗರಾಜ್ ಮಾತನಾಡಿ, ಪ್ರತಿದಿನ ಯೋಗ ಮಾಡುವುದರಿಂದ ನಮ್ಮಲ್ಲಿ ಹೊಸ ಚೈತನ್ಯ ಬೆಳೆಸಿಕೊಳ್ಳೋಣ, ಜತೆಗೆ ರೋಗಗಳನ್ನು ನಮ್ಮಿಂದ ದೂರವಿಡೋಣ. ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಬೆಳೆಸೋಣ. ಇದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Monsoon Fashion: ಮಾನ್ಸೂನ್ ಫ್ಯಾಷನ್‌ಗೆ ಮರಳಿದ ಮಲ್ಟಿ ಲೇಯರ್ಡ್ ಲುಕ್
ಈ ಸಂದರ್ಭದಲ್ಲಿ ಕೊಟ್ಟೂರೇಶ್ವರ ಕಾಲೇಜು ಪ್ರಾಂಶುಪಾಲ ರವಿಕುಮಾರ್, ಉಮೇಶ್, ದೈಹಿಕ ನಿರ್ದೇಶಕ ಶಿವಕುಮಾರ್, ಉಪನ್ಯಾಸಕರಾದ ಕೃಷ್ಣಪ್ಪ, ರಾಮಣ್ಣ ಇತರರು ಇದ್ದರು.