Site icon Vistara News

Vijayanagara News: ವಿಸ್ತಾರ ನ್ಯೂಸ್ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯ ವಿವಿಧೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

2 thousand saplings were distributed at vijayanagara

ವಿಜಯನಗರ: ಜಿಲ್ಲೆಯ ಹಂಪಿ (Hampi) ಕನ್ನಡ ವಿಶ್ವವಿದ್ಯಾಲಯದಲ್ಲಿ (Kannada university) ಬುಧವಾರ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು (International Yoga Day) ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಯ ಕುಲಪತಿ ಪರಮಶಿವಮೂರ್ತಿ ಮಾತನಾಡಿ, ಪ್ರತಿನಿತ್ಯ ಯೋಗವನ್ನು ಮಾಡುವುದರ ಮೂಲಕ ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಇದನ್ನೂ ಓದಿ: Indian Army Recruitment 2023 : ಎಂಜಿನಿಯರಿಂಗ್‌ ಪದವೀಧರರಿಗೆ ಸೇನೆಯಲ್ಲಿ ಆಫೀಸರ್‌ ಹುದ್ದೆ; ಕೂಡಲೇ ಅರ್ಜಿ ಸಲ್ಲಿಸಿ!

ಬೆಂಗಳೂರಿನ ಯೋಗಕ್ಷೇಮ ಸಂಶೋಧನಾ ಕೇಂದ್ರದ ಅಧ್ಯಕ್ಷ ವಿರುಪಾಕ್ಷ ಮಾತನಾಡಿ, ಯೋಗ ಮಾಡುವುದರಿಂದ ಮನುಕುಲಕ್ಕೆ ಸಾಕಷ್ಟು ಲಾಭ ಇದೆ. ಯೋಗವನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಳಿಕ ವಿವಿಯ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಮತ್ತು ಇತರರಿಂದ ಯೋಗಾಭ್ಯಾಸ ನಡೆಯಿತು.

ಹಂಪಿ ಕನ್ನಡ ವಿವಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿವಿಯ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಯೋಗಾಸನಗಳನ್ನು ಮಾಡುತ್ತಿರುವುದು.

ಈ ವೇಳೆ ಹಂಪಿ ವಿವಿಯ ಸುಬ್ಬಣ್ಣ ರೈ, ವಿವಿಯ ಯೋಗ ಅಧ್ಯಯನ ಕೇಂದ್ರದ ನಿರ್ದೇಶಕ ಎಫ್.ಟಿ ಹಳ್ಳಿಕೇರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Women’s Asia Cup 2023: ಭಾರತದ ವನಿತೆಯರ ತಂಡ ‘ಎ’ ಒನ್;‌‌ ಬಾಂಗ್ಲಾ ಮಣಿಸಿ ಏಷ್ಯಾ ಕಪ್‌ ಚಾಂಪಿಯನ್ಸ್

ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗ ದಿನ ಆಚರಣೆ

ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಜಿಲ್ಲೆಯ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ವಿಸ್ತಾರ ನ್ಯೂಸ್‌ ಹಾಗೂ ನಾಗರಿಕ ಹಿತರಕ್ಷಣಾ ಸೇವಾ ಸಂಘದ ಸಹಯೋಗದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರಿಗೆ ನಾಗರಿಕ ಹಿತರಕ್ಷಣಾ ಸೇವಾ ಸಂಘದ ವತಿಯಿಂದ ಸಸಿ ವಿತರಣೆ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಸಾವಿರಾರು ಜನರಿಂದ ಯೋಗಾಭ್ಯಾಸ ನಡೆಯಿತು.

ನಾಗರಿಕ ಹಿತರಕ್ಷಣಾ ಸೇವಾ ಸಂಘದ ಅಧ್ಯಕ್ಷ ಕಾಸಟ್ಟಿ ಉಮಾಪತಿ ಮಾತನಾಡಿ, ಯೋಗವು ಪ್ರತಿಯೊಬ್ಬರ ಜೀವನಕ್ಕೂ ಅವಶ್ಯಕತೆ ಇದೆ, ಮಾನವನ ಆರೋಗ್ಯ ಉತ್ತಮವಾಗಿರಬೇಕಾದರೆ ಪರಿಸರ ಕಾಳಜಿ ಬಹಳ ಮುಖ್ಯ. ಹೀಗಾಗಿ ಯೋಗ ದಿನಾಚರಣೆ ವೇಳೆ ಎರಡು ಸಾವಿರ ಸಸಿಗಳನ್ನು ವಿತರಣೆ ಮಾಡಿದ್ದೇನೆ. ಸಸಿ ತೆಗೆದುಕೊಂಡಿರುವ ಪ್ರತಿಯೊಬ್ಬರು ಅವುಗಳನ್ನು ನೆಟ್ಟು ಹೆಮ್ಮರವಾಗಿ ಬೆಳೆಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: Yoga Day 2023: ಸುತ್ತೂರು ಮಠದಲ್ಲಿ ಯೋಗ ದಿನಾಚರಣೆ; 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

ಈ ಸಂದರ್ಭದಲ್ಲಿ ವಿಜಯನಗರ ಶಾಸಕ ಗವಿಯಪ್ಪ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಸದಾಶಿವ ಪ್ರಭು, ಹಂಪಿ ಪ್ರಾಧಿಕಾರ ಆಯುಕ್ತ ಸಿದ್ದರಾಮೇಶ್ವರ ಹಾಗೂ ಇತರರು ಪಾಲ್ಗೊಂಡಿದ್ದರು.

Exit mobile version