Site icon Vistara News

Vijayanagara News: ಜೂ.21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ; ಪೂರ್ವಭಾವಿ ಸಭೆ

International Yoga Day Preparatory meeting at vijayanagara

ವಿಜಯನಗರ: ಜೂ.21 ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನಕ್ಕೂ (International Yoga Day) ಮುಂಚೆ ಬೈಕ್ ರ‍್ಯಾಲಿ (Bike rally) ಕೈಗೊಳ್ಳುವ ಮೂಲಕ ಯೋಗ ದಿನದ ಮಹತ್ವ ಸಾರಬೇಕು ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ತಿಳಿಸಿದರು.

ಜೂ.21 ರಂದು ಆಯೋಜಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: PDO Recruitment 2023 : ಪಿಡಿಒ ನೇಮಕಕ್ಕೆ ಮುಂದಾದ ಸರ್ಕಾರ; ಅರ್ಜಿ ಸಲ್ಲಿಸಲು ಈಗಲೇ ರೆಡಿಯಾಗಿ!

ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆಯೊಂದಿಗೆ ಯೋಗ ದಿನ ಆಚರಿಸಲಾಗುತ್ತದೆ. ಇದರ ಜತೆಗೆ ಹೊಸಪೇಟೆ ನಗರ ಭಾಗದಲ್ಲಿರುವ 20 ಕ್ಕೂ ಹೆಚ್ಚಿನ ಯೋಗ ತರಬೇತಿ ಸಂಸ್ಥೆಗಳು ಸಹ ಭಾಗಿಯಾಗಲಿವೆ. ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 1 ಸಾವಿರ ಜನರಿಂದ ಏಕಕಾಲದಲ್ಲಿ ಯೋಗಾಭ್ಯಾಸ ಹಮ್ಮಿಕೊಳ್ಳಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಶಿಷ್ಟಾಚಾರದ ಪ್ರಕಾರ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿಕೊಳ್ಳಬೇಕು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಗತ್ಯ ಜನ ಸೇರಿ ಯೋಗ ಮಾಡಲು ಹಾಗೂ ಕಾರ್ಯಕ್ರಮ ಆಯೋಜಿಸಲು ಬೇಕಾದ ವೇದಿಕೆ ಮತ್ತು ನೆಲಹಾಸು ವ್ಯವಸ್ಥೆ ಜತೆಗೆ ಆವರಣದಲ್ಲಿ ಸ್ವಚ್ಚತೆ, ಮೂಲಸೌಕರ್ಯ ಒದಗಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಯೋಗಾಭ್ಯಾಸ ನಡೆಯುವ ಸ್ಥಳದಲ್ಲಿ ಆಂಬ್ಯುಲೆನ್ಸ್, ವೈದ್ಯಕೀಯ ಸೇವೆ ಒದಗಿಸಲು ಕ್ರಮಕೈಗೊಳ್ಳಲು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Kannada New Movie: ʻರೇಸರ್‌ʼ ಸಿನಿಮಾ ಮೋಷನ್ ಪೋಸ್ಟರ್ ಔಟ್‌: ಸ್ಟೈಲಿಶ್‌ ಆಗಿ ಬೈಕ್ ಏರಿ ಬಂದ ಅಕ್ಷಿತಾ ಸತ್ಯನಾರಾಯಣ್!

ಸೂಕ್ತ ಸ್ವಚ್ಚತೆ, ಭದ್ರತೆ ಜತೆಗೆ ವಿದ್ಯುತ್ ಸಂಪರ್ಕ, ಮೂಲಸೌಕರ್ಯ ಒದಗಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲು ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯೋಗ ಸಾಧಕರಿಗೆ ಸನ್ಮಾನ

ಅಂದಿನ ಕಾರ್ಯಕ್ರಮದಲ್ಲಿ ಯೋಗದಲ್ಲಿ ಸಾಧನೆ ಮಾಡಿದ ಆಯ್ದ ಸಾಧಕರಿಗೆ ಸನ್ಮಾನಿಸಲು ನಿರ್ಧರಿಸಲಾಯಿತು. ಯೋಗ ದಿನದ ಮುನ್ನಾ ದಿನ ಜೂ.20ರಂದು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ಕೈಗೊಂಡು ಯೋಗ ದಿನದ ಮಹತ್ವ ಕುರಿತು ಜನಜಾಗೃತಿ ಮೂಡಿಸಲು ಸಹಕಾರ ನೀಡುವುದಾಗಿ ಯೋಗ ತರಬೇತಿ ಸಂಸ್ಥೆಯ ಆಯೋಜಕರು ತಿಳಿಸಿದರು.

ಸಭೆಯಲ್ಲಿ ಆಯುಷ್ ಇಲಾಖೆ ಅಧಿಕಾರಿ ಡಾ.ಸುಜಾತಾ ಪಾಟೀಲ್ ಮಾತನಾಡಿ, ಜೂ.21ರಂದು ಶಿಷ್ಟಾಚಾರದ ಪ್ರಕಾರ 6.45ಕ್ಕೆ ಏಕಕಾಲದಲ್ಲಿ ಯೋಗಭ್ಯಾಸ ಪ್ರಾರಂಭವಾಗಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯೋಗಪಟುಗಳು, ಸಾರ್ವಜನಿಕರು, ವಿದ್ಯಾರ್ಥಿಗಳು 6.15 ಕ್ಕೆ ನಿಗದಿತ ಸ್ಥಳಕ್ಕೆ ಆಗಮಿಸಲು ಕ್ರಮ ಕೈಗೊಳ್ಳಲಾಗುತ್ತದೆ. ವೇದಿಕೆ ಕಾರ್ಯಕ್ರಮದ ನಂತರ ಯೋಗಾಭ್ಯಾಸ ಆರಂಭಿಸಲಾಗುತ್ತದೆ. ಪ್ರತಿಯೊಬ್ಬರಿಗೂ ಕಾರ್ಯಕ್ರಮದ ನಂತರ ಗಿಡಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Viral News: ಚಿಕನ್ ತಿನ್ನಲ್ಲ, ಮಟನ್ ಮುಟ್ಟಲ್ಲ,‌ ರೊಟ್ಟಿಯಂತೂ ತಟ್ಟಂಗಿಲ್ಲ; ಮಳೆಗಾಗಿ ಊರೇ ಬಂದ್‌!

ಈ ವೇಳೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್ ಜಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಯೋಗ ತರಬೇತಿ ಸಂಸ್ಥೆಯ ಆಯೋಜಕರು ಉಪಸ್ಥಿತರಿದ್ದರು.

Exit mobile version