Site icon Vistara News

Vijayanagara News: ಕಮಲಾಪುರ ಝೂ‌ನಲ್ಲಿ ಪ್ರಾಣಿ- ಪಕ್ಷಿಗಳಿಗೆ ಕಾರಂಜಿ‌ ಮೂಲಕ ನೀರಿನ ಸಿಂಚನ

leopard is playing with the fountain water at Atal Bihari Vajpayee Zoological Park

ಪಾಂಡುರಂಗ ಜಂತ್ಲಿ, ವಿಸ್ತಾರ ನ್ಯೂಸ್‌, ವಿಜಯನಗರ ಜಿಲ್ಲೆ

ಬೇಸಿಗೆಯ ಬಿರು ಬಿಸಿಲಿನ ತಾಪವು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕಮಲಾಪುರ (Kamalapura) ಬಳಿಯ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ (Atal Bihari Vajpayee Zoological Park) ನಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ಕಾರಂಜಿ‌ ನೀರಿನ (Fountain water) ಸಿಂಚನದ ವ್ಯವಸ್ಥೆ ಕಲ್ಪಿಸುವ ಮೂಲಕ ತಂಪಿನ ಅನುಭೂತಿ ಒದಗಿಸಲಾಗುತ್ತಿದೆ.

ಬಿಸಿಲ‌ನಾಡು ವಿಜಯನಗರ ಜಿಲ್ಲೆಯಲ್ಲಿ ಕೆಂಡದಂತಹ ಸುಡುಬಿಸಿಲು ಜನರನ್ನು ಹೈರಾಣಾಗುವಂತೆ ಮಾಡಿದೆ. ಅಷ್ಟೇ ಅಲ್ಲದೇ ಈ ಸುಡುಬಿಸಿಲಿನ ಪ್ರಭಾವ ಪ್ರಾಣಿ-ಪಕ್ಷಿಗಳಿಗೂ ತಟ್ಟಿದೆ.

ಬಿಸಿಲಿನ ತಾಪ ಅಧಿಕವಾಗಿರುವುದರಿಂದ ಕಮಲಾಪುರ ಬಳಿ ಇರುವ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್‌ನಲ್ಲಿರುವ ಹುಲಿ-ಸಿಂಹ, ಕರಡಿ ಹಾಗೂ ಚಿರತೆ ಸೇರಿದಂತೆ ವನ್ಯಮೃಗಗಳಿಗೆ ಕಾರಂಜಿ ಮೂಲಕ‌ ನೀರನ್ನು‌ ಸಿಂಪಡಿಸಿ, ಅವುಗಳಿಗೆ ತಣ್ಣನೆಯ ಅನುಭೂತಿ ಒದಗಿಸಲಾಗುತ್ತಿದೆ.

ಬಿಸಿಲಿನ ತಾಪದಿಂದ ಝೂನ ಹೊಂಡದಲ್ಲಿರುವ ನೀರಾನೆಗಳು.

ಅಷ್ಟೇಅಲ್ಲದೇ ಝೂನಲ್ಲಿರುವ ಗಿಳಿ, ನವಿಲು, ಬಾತುಕೋಳಿ, ಗುಬ್ಬಚ್ಚಿಗಳು ಹೀಗೆ ನಾನಾ ಬಗೆಯ ಪಕ್ಷಿಗಳಿಗೂ ಅಲ್ಲಲ್ಲಿ ಸ್ಪ್ರಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ.

ಪ್ರವಾಸಿಗರು ಫಿದಾ

ಝೂ ನಲ್ಲಿರುವ ಪ್ರಾಣಿಗಳು ಬಿಸಿಲಿನ ತಾಪದಿಂದ ಆಯಾಸಗೊಳ್ಳದಂತೆ ಕೂಲ್‌ ವ್ಯವಸ್ಥೆ ಕಲ್ಪಿಸಿರುವುದು ಇಲ್ಲಿನ ವಿಶೇಷವಾಗಿದೆ. ಬಿರುಬಿಸಿಲಿನಿಂದ ಹೈರಾಣಾದ ಚಿರತೆ, ಹುಲಿಗಳು ಸೇರಿ ಇತರೆ ವನ್ಯ ಮೃಗಗಳು ನೀರಿನೊಂದಿಗೆ ಚೆಲ್ಲಾಟವಾಡುತ್ತಾ ಸಂಭ್ರಮಿಸುವ ದೃಶ್ಯಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ.

ಪ್ರವಾಸಿಗರಿಗೆ ಸೂಕ್ತ ನೆರಳಿನ ವ್ಯವಸ್ಥೆ

ಇನ್ನು ಝೂನಲ್ಲಿನ ಪ್ರಾಣಿ -ಪಕ್ಷಿಗಳು, ಹುಲಿ ಸಫಾರಿ, ಲಯನ್ ಸಫಾರಿ ವೀಕ್ಷಣೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಪ್ರವಾಸಿಗರು. ಪ್ರಾಣಿಪ್ರಿಯರು ಬಿಸಿಲಿನಿಂದ ರಕ್ಷಣೆ ಪಡೆಯಲು ಮೃಗಾಲಯದಲ್ಲಿ ಸೂಕ್ತ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಗಿಡಮರಗಳನ್ನು ಝೂನಲ್ಲಿ ಬೆಳಸಲಾಗಿದ್ದರೂ ಪ್ರಾಣಿ- ಪಕ್ಷಿಗಳು ಬಿಸಿಲಿನ ತಾಪಕ್ಕೆ ಹೈರಾಣಾಗದಂತೆ ಕಾರಂಜಿ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Cheetah Dies: ದಕ್ಷಿಣ ಆಫ್ರಿಕಾದಿಂದ ಕುನೊಕ್ಕೆ ತಂದಿದ್ದ ಚೀತಾಗಳ ಮಧ್ಯೆ ಕಾಳಗ; ಹೆಣ್ಣು ಚೀತಾ ದಕ್ಷಾ ಸಾವು

ವಿಶೇಷ ಆಹಾರದ ವ್ಯವಸ್ಥೆ

ಹುಲಿ, ಸಿಂಹ, ನೀರಾನೆ, ಜಿರಾಫೆ, ಜಿಂಕೆ, ಸೇರಿದಂತೆ ವನ್ಯಮೃಗಗಳಿಗೆ ಬೇಸಿಗೆ ವೇಳೆ ವಿಶೇಷ ಆಹಾರದ ವ್ಯವಸ್ಥೆಯನ್ನು ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್‌ ಪಾರ್ಕ್‌ನಲ್ಲಿ ಕಲ್ಪಿಸಲಾಗಿದೆ.

ಈ ಬಗ್ಗೆ ವಲಯ ಅರಣ್ಯ ಅಧಿಕಾರಿ ಭೀಮರಾಯ್ ಮಾತನಾಡಿ, ಮೃಗಾಲಯದಲ್ಲಿನ ಪ್ರಾಣಿ -ಪಕ್ಷಿಗಳು. ಹುಲಿ ಸಫಾರಿ, ಲಯನ್ ಸಫಾರಿ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಪ್ರವಾಸಿಗರು. ಪ್ರಾಣಿಪ್ರಿಯರು ಬಿಸಿಲಿನಿಂದ ರಕ್ಷಣೆ ಪಡೆಯಲು ಮೃಗಾಲಯದಲ್ಲಿ ಸೂಕ್ತ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಮೃಗಾಲಯದಲ್ಲಿ ಸಾಕಷ್ಟು ಗಿಡಮರಗಳನ್ನು ಬೆಳಸಲಾಗಿದ್ದರೂ ವನ್ಯಮೃಗಗಳು ಬಿಸಿಲಿನ ತಾಪಕ್ಕೆ ಹೈರಾಣಾಗದಂತೆ ಸ್ಪ್ರಿಂಕ್ಲರ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Exit mobile version