ಹರಪನಹಳ್ಳಿ: ಕರ್ನಾಟಕ ಸಂಭ್ರಮ-50 ಹಾಗೂ 68ನೇ ಕನ್ನಡ ರಾಜ್ಯೋತ್ಸವದ (Kannada Rajyotsava) ಅಂಗವಾಗಿ ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ (Handleless Bike) ಕಲಬುರಗಿಯಿಂದ ಬೆಂಗಳೂರಿನ ವಿಧಾನಸೌಧದವರೆಗೆ ವಿಶೇಷ ಬೈಕ್ ಸಾಹಸ ಕ್ರೀಡೆಯ ಮೂಲಕ ಕನ್ನಡ ನಾಡು, ನುಡಿಯ ಜಾಗೃತಿ ಕೈಗೊಂಡಿರುವ ಈರಣ್ಣ ಕುಂದರಗಿಮಠ ಅವರು ಹರಪನಹಳ್ಳಿಗೆ ಆಗಮಿಸಿದಾಗ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಕಲಬುರಗಿಯ ಜಿಲ್ಲಾಡಳಿತ ಭವನದಿಂದ ವಿಶೇಷ ಬೈಕ್ ಸಾಹಸ ಕ್ರೀಡೆಯನ್ನು ಹಮ್ಮಿಕೊಂಡು ಕನ್ನಡ ನಾಡು, ನುಡಿಗೆ ವಿಶೇಷ ಜಾಗೃತಿಯನ್ನು ಮೂಡಿಸಲು ಸುಮಾರು 860 ಕಿಮೀ ದೂರದ ಬೆಂಗಳೂರಿನ ವಿಧಾನಸೌಧದವರೆಗೆ ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಪ್ರಯಾಣ ಮಾಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.
ಇದನ್ನೂ ಓದಿ: Guest Lecturer: ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ, ವಿಮೆ ಘೋಷಣೆ
ಕಲಬುರಗಿಯಿಂದ ಜೇವರ್ಗಿ, ಶಹಾಪುರ, ಸುರಪುರ, ಲಿಂಗಸುಗೂರ, ಮಸ್ಕಿ, ಸಿಂಧನೂರು, ಕಾರಟಗಿ ಗಂಗಾವತಿ, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಹೊನ್ನಳಿ, ಶಿವಮೊಗ್ಗ, ಭದ್ರಾವತಿ, ತರೀಕೆರೆ, ಕಡೂರ, ಅರಸೀಕೆರೆ, ತಿಪಟೂರು, ತುಮಕೂರು ಮಾರ್ಗವಾಗಿ ಬೆಂಗಳೂರಿನ ವಿಧಾನಸೌಧದವರೆಗೆ ಸುಮಾರು 860 ಕಿಮೀ ಕ್ರಮಿಸಿ ಕನ್ನಡ ನಾಡು, ನುಡಿಯ ಜಾಗೃತಿಯನ್ನು ಮೂಡಿಸುತ್ತ ಹ್ಯಾಂಡಲ್ ಇಲ್ಲದ ಬೈಕ್‌ನಲ್ಲಿ ಕನ್ನಡ ಧ್ವಜವನ್ನು ಹಿಡಿದುಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ.
ಇದನ್ನೂ ಓದಿ: Job Mela : ಜನವರಿ ಅಂತ್ಯದಲ್ಲಿ ನಡೆಯಲಿದೆ ಉದ್ಯೋಗ ಮೇಳ; ಏಳು ಸಚಿವರ ಟೀಮ್ ರಚನೆ
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಎಸ್.ಯು.ಜೆ.ಎಂ. ಕಾಲೇಜಿನ ಪ್ರಾಂಶುಪಾಲ ಎಚ್.ಮಲ್ಲಿಕಾರ್ಜುನ, ಜೆ.ಸಿ.ಐ. ಅಧ್ಯಕ್ಷ ಪರಶುರಾಮ ಚಲವಾದಿ, ಕಾರ್ಯದರ್ಶಿ ಶರತ್ ಚಂದ್ರ, ಪ್ರಸನ್ನಕುಮಾರ ಜೈನ್, ಪಿ.ಟಿ. ನಾಗರಾಜ್, ಜೀವಜಲ ಟ್ರಸ್ಟ್ ಅಧ್ಯಕ್ಷ ಹೇಮಣ್ಣ ಮೊರಿಗೇರಿ, ಎಂ. ವೀರಭದ್ರಪ್ಪ, ಎ.ರೇವಣ್ಣ, ಕೊಟ್ಟೂರಿನ ಕೆ.ಶಿವರಾಜ್ ,ಹುಲಿಕಟ್ಟಿ ಮಂಜುನಾಥ, ಯರಬಳ್ಳಿ ಮಂಜುನಾಥ, ಎಂ.ಈಶ್ವರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.