ಕೊಟ್ಟೂರು: ಪಟ್ಟಣದ ಗಾಂಧಿ ವೃತದ ಬಿಡಿಸಿಸಿ ಬ್ಯಾಂಕ್ ಮುಂಭಾಗದ ಬಳಿಯಿರುವ ಬಸ್ ತಂಗುದಾಣದ (Bus stand) ಕಬ್ಬಿಣದ ನಾಲ್ಕು ಕಂಬಗಳು ಸಂಪೂರ್ಣ ತುಕ್ಕು ಹಿಡಿದಿದ್ದು, ಅಪಾಯಕ್ಕೆ (Danger) ಆಹ್ವಾನ ನೀಡುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇರಬೇಕಾದ ಬಸ್ ತಂಗುದಾಣ ಯಾವ ಕ್ಷಣದಲ್ಲಾದರೂ ಬೀಳುವ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ನಿಲ್ಲಲು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.
ಕೊಟ್ಟೂರಿನಲ್ಲಿ ದೇವಸ್ಥಾನ ದರ್ಶನಕ್ಕೆ ಬರುವ ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಸ್ ತಂಗುದಾಣದಿಂದ ಅನುಕೂಲವಾಗಿತ್ತು. ಆದರೆ, ಇದೀಗ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರಿಗೆ ನಿಲ್ಲಲು ಆಸರೆ ಇಲ್ಲದಂತಾಗಿದೆ.
ಇದನ್ನೂ ಓದಿ: ICC World Cup: ಭಾರತ-ಪಾಕ್ ಸೇರಿ 9 ಪಂದ್ಯಗಳ ದಿನಾಂಕ ಬದಲು; ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ
ಬಸ್ ತಂಗುದಾಣವು ಅಪಾಯದ ಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಬಸ್ ಬರುವವರೆಗೂ ಮರ, ಬ್ಯಾಂಕ್, ಅಂಗಡಿ ಮುಂಗಟ್ಟುಗಳಡಿ ಆಸರೆ ಪಡೆದು ನಿಲ್ಲುವಂತಾಗಿದೆ, ಗಾಳಿ- ಮಳೆಗೆ ದುಸ್ಥಿತಿಯಲ್ಲಿರುವ ಬಸ್ ತಂಗುದಾಣವು ಕುಸಿದು ಬೀಳುವ ಹಂತದಲ್ಲಿದ್ದು, ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಬಸ್ ತಂಗುದಾಣದ ನಾಲ್ಕು ಕಬ್ಬಿಣದ ಕಂಬಿಗಳು ಸಂಪೂರ್ಣ ತುಕ್ಕು ಹಿಡಿದಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Suryakumar Yadav: ‘ಸೂರ್ಯ’ ಶತಕದ ಸಿಕ್ಸರ್ಗೆ ಹಲವು ದಾಖಲೆ ಪತನ
ಈ ಬಸ್ ತಂಗುದಾಣದ ಕಬ್ಬಿಣದ ಕಂಬಗಳು ತುಕ್ಕು ಹಿಡಿದಿದ್ದು, ಯಾವಾಗ ಬೇಕಾದರೂ ಕುಸಿದು ಬೀಳಬಹುದು, ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೊಟ್ಟೂರು ನಿವಾಸಿ ಆರ್. ಶ್ರೀನಿವಾಸ್ ಒತ್ತಾಯಿಸಿದ್ದಾರೆ.