ವಿಜಯನಗರ: ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಅಥವಾ ಯಾವುದೇ ಉನ್ನತ ಮಟ್ಟದ ಅಧಿಕಾರಿಯಾದರೂ ನಮ್ಮ ವಿದ್ಯಾರ್ಥಿ ಜೀವನವನ್ನು (Student life) ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಹೊಸಪೇಟೆಯ ವಿಜಯನಗರ ವಿದ್ಯಾವರ್ಧಕ ಕಾಲೇಜಿನ ಪ್ರಾಂಶುಪಾಲ ನಿರಂಜನ ಮೂರ್ತಿ ತಿಳಿಸಿದರು.
ಕೊಟ್ಟೂರಿನ ಜೋಳದಕೂಡ್ಲಿಗಿ ರಸ್ತೆಯಲ್ಲಿರುವ ಅಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ 1992/97 ಸಾಲಿನ ಕೊಟ್ಟೂರೇಶ್ವರ ಕಾಲೇಜಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ತಮ್ಮ ಕಾಲೇಜು ದಿನಗಳನ್ನು ನೆನೆದು ಮಾತನಾಡಿದರು.
ಇದನ್ನೂ ಓದಿ: Adipurush Song : ಬಿಡುಗಡೆಯಾಯ್ತು ಆದಿಪುರುಷ್ ಸಿನಿಮಾದ ಮತ್ತೊಂದು ಹಾಡು: ಎಲ್ಲೆಲ್ಲೂ ರಾಮ ಭಜನೆಯೇ
ಬಿಎಸ್ಎಫ್ ನ ಮಾಜಿ ಸೈನಿಕ, ಹಾಲಿ ಮುಖ್ಯೋಪಾಧ್ಯಾಯ ಕರಿಬಸಪ್ಪ ಮಾತನಾಡಿ, ನಾವುಗಳು ವಿಧ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಜಾತಿ ವ್ಯವಸ್ಥೆ ಮತ್ತು ಹಣದ ವ್ಯವಸ್ಥೆಯ ಬಗ್ಗೆ ಯಾರಲ್ಲೂ ಕೀಳರಿಮೆ ಇರಲಿಲ್ಲ, ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಬೆಳೆದು ನಿಂತಿದ್ದೇವೆ, ಸುಮಾರು ಇಪ್ಪತ್ತೆರಡು ವರ್ಷಗಳ ನಂತರ ನಾವೆಲ್ಲರೂ ಅದೇ ಭಾವನೆಯಿಂದ ಇಲ್ಲಿ ಸೇರಿರುವುದು ನಮ್ಮಲ್ಲಿನ ಸ್ನೇಹವನ್ನು ಎತ್ತಿ ತೋರಿಸುತ್ತದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ದಾದಾ ಖಲಂದರ್, ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹಸಿವು ತಾಳಲಾರದೆ ಗೆಳೆಯರೊಂದಿಗೆ ನಡೆದ ಘಟನೆಯನ್ನು ವಿವರಿಸಿದಾಗ, ಅಲ್ಲಿ ನೆರೆದಿದ್ದ ಸಹಪಾಠಿಗಳ ಕಣ್ಣಾಲಿಗಳು ತುಂಬಿ ಬಂದಿದ್ದು ಕಂಡುಬಂದಿತು.
ನಂತರ ಉಪಾನ್ಯಾಸಕಿ ಶೋಭಾ ಪಾಟೀಲ್ ಮಾತನಾಡಿ, ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಕಟ್ಟಿಕೊಳ್ಳಲು ಕಾರಣಿಭೂತರಾದ ಉಪಾನ್ಯಾಸಕರಿಗೆ ನಾವುಗಳು ಚಿರರುಣಿಯಾಗಿರೊಣ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಗಲಿದ ಉಪನ್ಯಾಸಕರಿಗೆ ಮತ್ತು ಸಹಪಾಠಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದ ಸತೀಶ್ ಪಾಟೀಲ್, ಖಾಜಾ ಸಾಹೇಬ್, ಕರಿಬಸಪ್ಪ, ಜಾತಪ್ಪ, ಪಂಪಾನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: Video : ಬೆಚ್ಚಿ ಬೀಳಿಸುತ್ತದೆ ಮೈಸೂರಿನ ಭೀಕರ ಅಪಘಾತದ ಸಿಸಿಟಿವಿ ದೃಶ್ಯ
ಕಾರ್ಯಕ್ರಮದಲ್ಲಿ ಕವಿ ಕಲ್ಲೇಶ್ವರ ಮತ್ತು ಸುಜಾತ, ಬಂಡಾರಿ ಮಂಜುಳ ಅವರು ಕವನಗಳನ್ನು ವಾಚಿಸುವ ಮೂಲಕ ಎಲ್ಲರ ಗಮನ ಸೆಳೆದರು.