Site icon Vistara News

Vijayanagara News: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಕೆ. ನೇಮರಾಜ್‌ ನಾಯ್ಕ್

Meeting by Hagaribommanahalli MLA K Nemraj Naik at Vijayanagara

ಹಗರಿಬೊಮ್ಮನಹಳ್ಳಿ: ಕಂದಾಯ (Revenue), ಸರ್ವೆ (Survey), ಜನನ – ಮರಣ ನೋಂದಣಿ (Birth and Death Registration) ಸೇರಿದಂತೆ ಇತರೆ ಇಲಾಖೆಗಳಲ್ಲಿಯ (Departments) ಕಡತ (File) ವಿಲೇವಾರಿ ವಿಳಂಬವನ್ನು ಪ್ರಶ್ನಿಸಿ, ಶಾಸಕ ಕೆ.ನೇಮರಾಜ್‌ ನಾಯ್ಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಾ.ಪಂ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶಾಸಕ ಕೆ. ನೇಮರಾಜ್‌ ನಾಯ್ಕ್ ನೇತೃತ್ವದಲ್ಲಿ ನಡೆದ ಕಂದಾಯ ಸೇವಾ ಸೌರಭ ಆಂದೋಲನ ಸಭೆಯಲ್ಲಿ ಮಾತನಾಡಿದ ಅವರು ಕಂದಾಯ, ಮುಜರಾಯಿ, ಭೂ ದಾಖಲೆಗಳ ಇಲಾಖೆವಾರು ಅಧಿಕಾರಿಗಳನ್ನು ಕುರಿತು ಕಡತಗಳು ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದರು.

ಸರ್ವೆ ಇಲಾಖೆಯಲ್ಲಿ ರೈತರ ಹದ್ದುಬಸ್ತು ವಿಚಾರದಲ್ಲಿ ಮತ್ತೊಬ್ಬರ ಹೆಸರುಗಳನ್ನು ಸೇರ್ಪಡೆ ಮಾಡಿ, ಇಲಾಖೆಗಳಿಗೆ ಅಲೆಯುವಂತೆ ಕೆಲಸ ಮಾಡುತ್ತಿದ್ದೀರಿ. ಅಲ್ಲದೆ, ಸರ್ವೆ ಇಲಾಖೆಯಲ್ಲಿ ದೊರೆಯಬೇಕಾಗಿದ್ದ ಮೂಲ ದಾಖಲಾತಿಗಳು ಖಾಸಗಿ ವ್ಯಕ್ತಿಗಳ ಮನೆಯಲ್ಲಿ ಮತ್ತು ಹಿಂಬರಹ ಬರೆದುಕೊಟ್ಟ ದಾಖಲಾತಿಗಳು ಜೆರಾಕ್ಸ್ ಅಂಗಡಿಗಳಲ್ಲಿ ದೊರೆಯುತ್ತಿವೆ ಎಂದರೆ ಏನರ್ಥ? ಇದರಿಂದ ಅನುಮಾನವಾಗುತ್ತಿದೆ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: Black Magic : ಸರ್ಕಾರಿ ಶಾಲೆಗೆ ವಾಮಾಚಾರ! ಹೆದರಿ ತರಗತಿಗೆ ಬಾರದ ಮಕ್ಕಳು

ವಿಧಾನಸಭಾ ಕ್ಷೇತ್ರ ಮಾದರಿಯಾಗುವಂತೆ ಕಾರ್ಯ ನಿರ್ವಹಿಸಲು ಸೂಚನೆ

ರಾಜ್ಯದಲ್ಲಿ ಈ ವಿಧಾನಸಭಾ ಕ್ಷೇತ್ರ ಮಾದರಿಯಾಗಬೇಕು, ಆ ನಿಟ್ಟಿನಲ್ಲಿ ಸಾರ್ವಜನಿಕರ ಕೆಲಸಗಳ ನಿರ್ವಹಣೆಯಲ್ಲಿ ವಿಳಂಬವಾಗದೆ ಸಕಾಲಕ್ಕೆ ಸರಿಯಾಗಿ ಮುಗಿಯಬೇಕು. ಪಿಂಚಣಿದಾರರ ಮಾಹಿತಿ, ಹಕ್ಕು ಬದಲಾವಣೆ, ಇತ್ತೀಚಿಗೆ ಪ್ರಕೃತಿ ವಿಕೋಪದಿಂದ ಮನೆಗಳು, ಬೆಳೆ, ಜೀವಹಾನಿ ಸೇರಿದಂತೆ ಇತರೆ ಮಾಹಿತಿ ಸಂಪೂರ್ಣ ನೀಡಬೇಕು ಎಂದು ಸೂಚಿಸಿದರು.

ಸ್ಮಶಾನಗಳಿಗಿರುವ ಬೇಡಿಕೆ, ಕಾಯ್ದಿರಿಸಿದ ಭೂಮಿಗಳ ಮಾಹಿತಿ, ಎಲ್ಲಿ ಭೂಮಿಗಳಿಲ್ಲ, ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಗಳನ್ನು ಗುರುತಿಸಿ ಮಾಹಿತಿ ನೀಡಿ ಎಂದರು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮ ಲೆಕ್ಕಾಧಿಕಾರಿಗಳ ವೃತ್ತಗಳನ್ನು ರಚಿಸಿ ಕಚೇರಿ ತೆರೆಯುವ ಪ್ರಯತ್ನ ನಮ್ಮದಾಗಿದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರಿ ಭೂಮಿಗಳು ಎಲ್ಲಿ ಎಷ್ಟು ಇದೆ ಹಾಗೂ ಅದು ಯಾವುದಕ್ಕೆ ಕೊಡಲಾಗಿದೆ. ಖಾಸಗಿಯಾಗಿ ಕೊಟ್ಟಿದ್ದರೆ ಯಾವ ಆಧಾರದ ಮೇಲೆ ನೀಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿ ಬೇಕು ಎಂದು ಅಧಿಕಾರಿಗಳನ್ನು ಕೇಳಿದರು.

ಇದನ್ನೂ ಓದಿ: Education News : ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮೊತ್ತ 25 ಸಾವಿರ ರೂ.ಗೆ ಏರಿಕೆ

ಈ ವೇಳೆ ತಹಸೀಲ್ದಾರ್ ಚಂದ್ರಶೇಖರ ಶಂಭಣ್ಣ ಗಾಳಿ, ಕೊಟ್ಟೂರು ತಾಲೂಕು ತಹಸೀಲ್ದಾರ್ ಅಮರೇಶ, ಶಿರಸ್ತದಾರ್‌ ಶಿವಕುಮಾರ್‌ಗೌಡ, ಅನ್ನದಾನೇಶ್ವರ, ಶ್ವೇತಾ ಸೇರಿದಂತೆ ಗ್ರಾಮಲೆಕ್ಕಾಧಿಕಾರಿಗಳು ಇತರೆ ಅಧಿಕಾರಿಗಳಿದ್ದರು.

Exit mobile version