ಹರಪನಹಳ್ಳಿ: ಅತಿಥಿ ಶಿಕ್ಷಕರ (Guest teachers) ವಿವಿಧ ಬೇಡಿಕೆಗಳನ್ನು (Various demands) ಈಡೇರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜು ಕಡತಿ ಮಾತನಾಡಿ, ಅತಿಥಿ ಶಿಕ್ಷಕರು ರಾಜ್ಯದಲ್ಲಿ ಸುಮಾರು 33 ಸಾವಿರಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಸರ್ಕಾರವು ಪ್ರತಿ ವರ್ಷ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ ಆದರೆ ಅತಿಥಿ ಶಿಕ್ಷಕರ ವಿವಿಧ ಬೇಡಿಕೆ ಹಾಗೂ ಸಮಸ್ಯೆಗಳನ್ನು ಈಡೇರೆಸುತ್ತಿಲ್ಲ, ಹಲವಾರುರ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲೆಂದು ತಿಳಿಸಿದರು.
ಇದನ್ನೂ ಓದಿ: G 20 in India : ಅಮೆರಿಕ ಅಧ್ಯಕ್ಷ ಬೈಡೆನ್‌ಗಾಗಿ ಬುಕ್ ಆಯ್ತು ಐಟಿಸಿ ಮೌರ್ಯ ಹೋಟೆಲ್‌ನ 400 ರೂಮ್!
ಕೂಡಲೇ ನಮ್ಮ ಬೇಡಿಕೆಗಳನ್ನು ಕುರಿತು ಶಾಸಕರು ಸರ್ಕಾರದ ಮಟ್ಟದಲ್ಲಿ ಚರ್ಚಿಸಬೇಕು ಎಂದು ಸಂಘದ ಪದಾಧಿಕಾರಿಗಳು, ಸದಸ್ಯರು ಒತ್ತಾಯಿಸಿದರು.
ಅತಿಥಿ ಶಿಕ್ಷಕರಿಗೆ ಸೇವಾ ಹಿರಿತನ ಆಧಾರದ ಮೇಲೆ ಪರಿಗಣಿಸಬೇಕು, ಮೆರಿಟ್ ಪದ್ದತಿಯನ್ನು ತೆಗೆದು ಹಾಕಬೇಕು, ಎಲ್ಲಾ ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ನೀಡಬೇಕು, ಸರ್ಕಾರಿ ಶಿಕ್ಷಕರಂತೆ ನಮಗೂ ಸಹ ಮದ್ಯಂತರ ರಜೆ ಮತ್ತು ಬೇಸಿಗೆ ರಜೆಯಲ್ಲಿ ವೇತನ ನೀಡಬೇಕು,
ಶೈಕ್ಷಣಿಕ ವರ್ಷದಲ್ಲಿ ವೇತನ ಹೆಚ್ಚಿಸಿ ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಅತಿಥಿ ಶಿಕ್ಷಕ ಎಂಬ ಪದವನ್ನು ತೆಗೆದು ಹಾಕಿ ಗೌರವ ಶಿಕ್ಷಕ ಎಂದು ನಮೂದಿಸಬೇಕು,
ಖಾಯಂ ಶಿಕ್ಷಕರಂತೆ ಸ್ಥಾನಮಾನ ಕಲ್ಪಿಸುವುದರ ಜತೆಗೆ ನೇಮಕಾತಿಯಲ್ಲಿ 5% ಕೃಪಾಂಕ ನೀಡಬೇಕೆಂದು ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Snake Rescue : ಸ್ಕೂಟರ್ ಡಿಕ್ಕಿಯೊಳಗೆ ಹಾಯಾಗಿ ಮಲಗಿದ್ದ ಹಾವು; ಬೆದರಿ ಎದ್ದು ಬಿದ್ದು ಓಡಿದ ಮಹಿಳೆ!
ಈ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಕಾರ್ಯದರ್ಶಿ ನಂದೀಶ ಆಚಾರಿ, ಕೆ.ಎಂ.ಕೇದಾರಸ್ವಾಮಿ, ಮಂಜಪ್ಪ, ಸಂತೋಷ, ಕವಿತಾ, ಗೀತಾ, ಉಮಾ, ಕೆ.ಶಿವಣ್ಣ, ನಗರಾಜ ಆಚಾರಿ, ಗೋಪಿನಾಯ್ಕ್, ಸತೀಶ್, ಅಹ್ಮದ್, ನಾಗಲಿಂಗಪ್ಪ, ಅಂಜಿನಪ್ಪ, ವಿನಯಕುಮಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.