ಕೂಡ್ಲಿಗಿ: ಪಟ್ಟಣದ ಹೃದಯಭಾಗದಲ್ಲಿರುವ ಹಳೆಯ ಸರ್ಕಾರಿ ಆಸ್ಪತ್ರೆಗೆ (Government hospital) ಕ್ಷೇತ್ರದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ವಿಜಯನಗರ ಸಿಇಒ ಸದಾಶಿವ ಪ್ರಭು ಅವರೊಂದಿಗೆ ಭೇಟಿ (Visit) ನೀಡಿ, ಪರಿಶೀಲನೆ (Inspects) ನಡೆಸಿದರು.
ಪಟ್ಟಣದ ಜನತೆಗೆ ಅತಿ ಅವಶ್ಯಕತೆಯಾಗಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬೇಕಿದೆ. ಈ ಮೊದಲು ಹಳೆಯ ಆಸ್ಪತ್ರೆ ಜನರಿಗೆ ಉತ್ತಮ ಆರೋಗ್ಯದ ಸೌಲಭ್ಯಗಳನ್ನು ತಕ್ಷಣಕ್ಕೆ ಸಿಗುವಂತೆ ಕಾರ್ಯನಿರ್ವಹಿಸಿದೆ. ಆದರೆ ನೂರು ಹಾಸಿಗೆ ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿದ ನಂತರ ಈ ಆಸ್ಪತ್ರೆ ಹೊಸ ಕಟ್ಟಡಕ್ಕೆ ಹೋಗಿದೆ.
ಇದನ್ನೂ ಓದಿ: Actor Pratham: ಸಿಂಪಲ್ ಆಗಿ ಎಂಗೇಜ್ ಆದ ಒಳ್ಳೆ ಹುಡ್ಗ ಪ್ರಥಮ್
ಈ ಹಳೆಯ ಆಸ್ಪತ್ರೆ ಕಟ್ಟಡ ನಿರುಪಯುಕ್ತವಾಗಿದ್ದು, ಶಿಥಿಲಾವಸ್ಥೆ ತಲುಪಿದೆ. ಆದರೆ ಇತ್ತೀಚಿಗೆ ಜನಸಂಖ್ಯೆ ಹೆಚ್ಚಾದಂತೆ ಇನ್ನೂ ಹೆಚ್ಚಿನ ಆರೋಗ್ಯ ಸೌಲಭ್ಯಗಳನ್ನು ನೀಡಬೇಕಾಗಿದ್ದು. ಈಗಿರುವ ಹಳೆಯ ಸರ್ಕಾರಿ ಆಸ್ಪತ್ರೆಯನ್ನು ಮರು ನಿರ್ಮಾಣ ಮಾಡಿ ಜನರಿಗೆ ಆರೋಗ್ಯದ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಜಿಪಂ ಸಿಇಒ ಅವರ ಜತೆ ಸಮಾಲೋಚನೆ ನಡೆಸಿ ಪಟ್ಟಣದ ಮಧ್ಯಭಾಗದಲ್ಲಿರುವ ಈ ಜಾಗದಲ್ಲಿ ಮಕ್ಕಳ ಆಸ್ಪತ್ರೆ ಮಾಡುವ ಜತೆ ಅಣತಿ ದೂರದಲ್ಲಿರುವ ಸಿಬ್ಬಂದಿಗಳ ಗೃಹಗಳನ್ನು ಸಹ ಮರು ನಿರ್ಮಿಣ ಮಾಡಿ, ಸಿಬ್ಬಂದಿ ಗೃಹಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಮಕ್ಕಳ ಆಸ್ಪತ್ರೆಗೆ ಮೂರು ಕೋಟಿ ಅನುದಾನ ಮಂಜೂರು ಆಗಿದ್ದು,ಜಾಗದ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಿದರು. ಪ.ಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಅವರಿಗೆ ಜಾಗದ ಪತ್ರಗಳನ್ನ ಜಿಪಂ ಎಇಇ ಮಲ್ಲಿಕಾರ್ಜುನ ಹಾಗೂ ಟಿಎಚ್ಒ ಪ್ರದೀಪ್ ಕುಮಾರ್ ಅವರಿಗೆ ನೀಡಲು ಸೂಚಿಸಿ ಶೀಘ್ರದಲ್ಲೇ ಕಾರ್ಯ ಯೋಜನೆ ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಿದರು.
ಇದನ್ನೂ ಓದಿ: Lalitha Natarajan: ಚೆನ್ನೈನ ಲಲಿತಾ ನಟರಾಜನ್‌ಗೆ ಅಮೆರಿಕದ ಪ್ರತಿಷ್ಠಿತ ಇಕ್ಬಾಲ್ ಮಸಿಹ್ ಪ್ರಶಸ್ತಿ
ಇದಕ್ಕೂ ಮೊದಲು ಜಿಪಂ ಸಿಇಒ ಸದಾ ಶಿವಪ್ರಭು ಜತೆ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ನೂರು ಹಾಸಿಗೆಗಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಅಲ್ಲಿ ನಿರುಪಯುಕ್ತವಾಗಿ ಬಿದ್ದಿರುವ ಕಟ್ಟಡಗಳ ಮಾಹಿತಿ ಪಡೆದು ಅವುಗಳ ಬಳಕೆಗೆ ಯೋಜನೆ ರೂಪಿಸಲು ಜಿಪಂ ಎಇಇ ಅವರಿಗೆ ಸೂಚನೆ ನೀಡಿದರು,
ಆಸ್ಪತ್ರೆಗೆ ಅವಶ್ಯವಿರುವ ಸೌಲಭ್ಯಗಳನ್ನು ಸಿಇಒ ಅವರಿಗೆ ಮಾಹಿತಿ ನೀಡಿ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು. ಅದರಂತೆ ತಾಲೂಕಿನ ಚಿಕ್ಕಜೋಗಿಹಳ್ಳಿ ಆಸ್ಪತ್ರೆಗೆ ಬೇಕಾಗಿರುವ ಮೂಲ ಸೌಕರ್ಯಗಳು ಹಾಗೂ ಸಿಬ್ಬಂದಿಗಳ ಬಗ್ಗೆ ಚರ್ಚೆ ನಡೆಸಿದರು.
ಇದನ್ನೂ ಓದಿ: Video: ರಂಜನಿ ಇನ್ ಉಜ್ಜಯಿನಿ; ಮಹಾಕಾಳೇಶ್ವರನ ಸನ್ನಿಧಿಯಲ್ಲಿ ’ಕನ್ನಡತಿ‘, ಶಿಪ್ರಾ ನದಿಯಲ್ಲಿ ಆರತಿ
ಈ ವೇಳೆ ಮಾಜಿ ಜಿಪಂ ಸದಸ್ಯ ದೊಡ್ಡ ರಾಮಣ್ಣ, ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ, ಟಿ.ಜಿ.ಮಲ್ಲಿಕಾರ್ಜುನ ಗೌಡ,ಜಿ.ಬಸವರಾಜ, ಢಾಣಿ ರಾಘವೇಂದ್ರ, ಗ್ಯಾಸ್ ವೆಂಕಟೇಶ್, ಹುಲಿಕುಂಟೆಪ್ಪ,ತಳವಾರ ಶರಣಪ್ಪ,ಬಾಲಾಜಿ ನಾಯ್ಕ್ ಸೇರಿದಂತೆ ಇತರರು ಇದ್ದರು.