Site icon Vistara News

Vijayanagara News: ಹಂಪಿ ಕನ್ನಡ ವಿವಿಯಿಂದ ಮೂವರಿಗೆ ನಾಡೋಜ ಗೌರವ

Hampi Kannada University Chancellor Dr D V Paramashivamurthy pressmeet

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ (Hampi Kannada University) ಪ್ರತಿಷ್ಠಿತ “ನಾಡೋಜ ಗೌರವ ಪದವಿ” ಗೆ ಈ ಬಾರಿ ಬೀದರ್‌ನ ಭಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಸಾಹಿತಿ ಡಾ. ತೇಜಸ್ವಿ ಕಟ್ಟಿಮನಿ ಹಾಗೂ ತುಮಕೂರು ವಿವಿ ವಿಶ್ರಾಂತ ಕುಲಪತಿ ಡಾ. ಎಸ್.ಸಿ.ಶರ್ಮಾ ಅವರು ಆಯ್ಕೆಯಾಗಿದ್ದಾರೆ.

ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನಾಡೋಜ ಗೌರವ ಪದವಿಗೆ ಆಯ್ಕೆಯಾದ ಈ ಮೂವರು ಸಾಧಕರ ಹೆಸರನ್ನು ವಿವಿಯ ಕುಲಪತಿ ಡಾ. ಡಿ.ವಿ.ಪರಮಶಿವಮೂರ್ತಿ ಪ್ರಕಟಿಸಿದರು.

ಕನ್ನಡ ವಿವಿಯ ನವರಂಗ ಬಯಲು ಮಂದಿರದಲ್ಲಿ ಜನವರಿ 10 ರಂದು ಸಂಜೆ 5.30 ಕ್ಕೆ ನಡೆಯಲಿರುವ 32ನೇ ನುಡಿಹಬ್ಬ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಾಡೋಜ ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್, ಡಿ.ಲಿಟ್ ಹಾಗೂ 264 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪಿಎಚ್‌ಡಿ ಪದವಿಯನ್ನು ಪ್ರದಾನ ಮಾಡಲಿದ್ದಾರೆ. ಅನಂತಪುರದ ಆಂಧ್ರ ಪ್ರದೇಶದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎ.ಕೋರಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: GDP Growth: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ.7.3 ಬೆಳವಣಿಗೆ!

ಭಾಷಾ ನಿಕಾಯದಲ್ಲಿ 100 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ ನಿಕಾಯದಲ್ಲಿ 160 ವಿದ್ಯಾರ್ಥಿಗಳು ಹಾಗೂ ಲಲಿತಕಲೆಗಳ ನಿಕಾಯದಲ್ಲಿ 4 ವಿದ್ಯಾರ್ಥಿಗಳು ಪಿ.ಎಚ್.ಡಿ ಪದವಿಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.

ಅತಿ ಕಡಿಮೆ ಸಂಖ್ಯೆಯಿರುವ ಕೇರಳದ ಪಣ ಯನ್ ಬುಡಕಟ್ಟು ಸಮುದಾಯದ ಕುರಿತು ಸಂಶೋಧನೆಯನ್ನು ಅದೇ ಸಮುದಾಯದ ವಿದ್ಯಾರ್ಥಿನಿ ದಿವ್ಯ ಅವರು ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪಿಎಚ್‌ಡಿ ಪಡೆಯಲಿದ್ದು, ಇದು ಕನ್ನಡ ವಿಶ್ವವಿದ್ಯಾಲಯಕ್ಕೂ ಮತ್ತು ಪಣ ಯನ್ ಸಮುದಾಯಕ್ಕೂ ಹೆಮ್ಮೆಯ ವಿಷಯ ಎಂದರು.

ಘಟಿಕೋತ್ಸವ ಮುನ್ನ ದಿನವಾದ ಜನವರಿ 9 ರಂದು ಮಂಟಪ ಸಭಾಂಗಣದಲ್ಲಿ ಪ್ರಸಾರಂಗದಿಂದ ಪ್ರಕಟಣೆಗೊಂಡ 51 ಪುಸ್ತಕಗಳನ್ನು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ರವಿ, ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ. ಲಕ್ಷ್ಮಣ ತೆಲಗಾವಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Coronavirus News: ಜ. 6ರಂದು ಕೋವಿಡ್‌ ಹೆಲ್ಪ್‌ಲೈನ್‌ ಆರಂಭ: ದಿನೇಶ್‌ ಗುಂಡೂರಾವ್‌

ಈ ಸಂದರ್ಭದಲ್ಲಿ ವಿವಿಯ ಕುಲಸಚಿವ ಡಾ.ವಿಜಯಪೂಣಚ್ಚ ತಂಬಂಡ, ಡೀನ್‌ರಾದ ಡಾ. ಎಫ್.ಟಿ.ಹಳ್ಳಿಕೇರಿ, ಡಾ. ಚಲುವರಾಜ, ಡಾ. ಶಿವಾನಂದ ವಿರಕ್ತಮಠ, ಡಾ. ಶೈಲಜಾ ಹಿರೇಮಠ, ಹಣಕಾಸು ಅಧಿಕಾರಿ ಡಾ. ದಿನೇಶ್ ಕೆ., ಅಧ್ಯಯನಾಂಗ ನಿರ್ದೇಶಕ ಡಾ. ಪಿ.ಮಹಾದೇವಪ್ಪ, ಮಾಹಿತಿ ಕೇಂದ್ರ ನಿರ್ದೇಶಕಿ ಡಿ. ಮೀನಾಕ್ಷಿ, ಇತರರು ಹಾಜರಿದ್ದರು.

Exit mobile version