ಕೊಟ್ಟೂರು: ಪಟ್ಟಣ ಮತ್ತು ತಾಲೂಕಿನಾದ್ಯಂತ ಜನತೆ ನಾಗರ ಪಂಚಮಿ (Nagara Panchami) ಹಬ್ಬವನ್ನು, ಸಡಗರ ಸಂಭ್ರಮದಿಂದ ಕುಟುಂಬ ಸಮೇತರಾಗಿ ಆಚರಿಸಿದರು.
ನಾಗರ ಪಂಚಮಿ ಹಬ್ಬದ ಅಂಗವಾಗಿ ನಾಗದೇವ ಮೂರ್ತಿಗೆ ಹಾಲು ಎರೆದು ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಶಾಲೆಯ ಆವರಣದಲ್ಲಿ ಪ್ರತಿಷ್ಠಾಪಿಸಿರುವ ನಾಗರ ಮೂರ್ತಿಗೆ ಸೋಮವಾರ ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತ ಹಾಲೆರೆದು ಪೂಜೆ ಸಲ್ಲಿಸಿ, ನಾಗರ ಪಂಚಮಿಯನ್ನು ಆಚರಿಸಿದರು.
ಇನ್ನು ಹಬ್ಬಕ್ಕೆಂದು ವಿಶೇಷವಾಗಿ ಸಿಹಿ ಪದಾರ್ಥದ ವಿವಿಧ ಬಗೆಯ ಉಂಡಿಗಳು, ರೊಟ್ಟಿ ಪಂಚಮಿ ನಿಮಿತ್ತ ಎಣ್ಣೆಗಾಯಿ, ಹೆಸರು, ಮಡಕೆ ಕಾಳು ಪಲ್ಯ, ಉಸುಳಿ, ಶೇಂಗಾ-ಗುರೆಳ್ಳು ಚಟ್ನಿಯೊಂದಿಗೆ ಎಳ್ಳು ಹಚ್ಚಿದ ಸಜ್ಜೆ, ಜೋಳದ ಖಡಕ್ ರೊಟ್ಟಿಯನ್ನು ನೆರೆಮನೆಯವರೊಂದಿಗೆ ಪರಸ್ಪರ ಹಂಚಿಕೊಂಡು ಸವಿದು, ಅತ್ಯಂತ ಸಡಗರ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.
ಇದನ್ನೂ ಓದಿ: Asia Cup 2023: ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಒಲಿದ ಅದೃಷ್ಟ, ಇಲ್ಲಿದೆ ಪಟ್ಟಿ
ಭಜನಾ ಕಾರ್ಯಕ್ರಮ
ಪ್ರತಿ ವರ್ಷದಂತೆ ನಾಗರಾಜ ಭಜನಾ ಸಂಘ ಕೊರ್ಕಣ ಅವರಿಂದ ಭಕ್ತಿ ಪೂರ್ವಕವಾಗಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಭಜನಾ ಮಂಡಳಿಯ ಚಿಗಟೇರಿ ಕೊಟ್ರೇಶ್, ಚೆನ್ನಪ್ಪ, ಮಹೇಶಪ್ಪ, ಮೂಗಪ್ಪ, ಸಿ ನಾಗರಾಜ, ಸಿ ವಿಜಯ್ ಕುಮಾರ್, ಜೆ. ಮಂಜುನಾಥ್, ಜೆ. ಕುಮಾರ್ ಸ್ವಾಮಿ, ಕೆ.ಎಂ. ತಿಪ್ಪೇಸ್ವಾಮಿ, ಸಿ. ಮಂಜುನಾಥ, ಎ. ಮಹೇಶ, ಸಿ.ಗುರು, ಸಿ. ಮುತ್ತುರಾಜ್, ಪ್ರಕಾಶ್, ಕೆ. ರೇವಣ್ಣ, ಟಿ. ಚಂದ್ರಪ್ಪ, ಎಂ. ನಾಗರಾಜ್, ಸಿ. ಆನಂದ, ಕೆ. ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.